ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲಗಳ ಪಟಾಕಿಯನ್ನು ಸಿಡಿಸುತ್ತಲೇ ಇದೆ. ದಚ್ಚು ಹುಟ್ಟಿದ ದಿನ ಟೀಸರ್ ರಿಲೀಸ್ ಮಾಡುವ ಮೂಲಕ ಕುತೂಹಲವನ್ನು ಇಮ್ಮಡಿಗೊಳಿಸಿತ್ತು. ಇದೀಗ ಚಿತ್ರ ತಂಡ ಮತ್ತೊಂದು ಟ್ವಿಸ್ಟ್ ಕೊಟ್ಟಿದೆ.
ದಚ್ಚು ಅಭಿಮಾನಿಗಳಿಗೆ ನಾಳೆ ಸಿಗಲಿದೆ ರಾಬರ್ಟ್ ಬಗ್ಗೆ ಬಿಗ್ ನ್ಯೂಸ್! - ರಾಬರ್ಟ್ ನಿರ್ದೇಶಕ ತರುಣ್ ಸುಧೀರ್
ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ರಾಬರ್ಟ್ ಪೋಸ್ಟರ್ವೊಂದನ್ನು ಹಾಕಿದ್ದು, ನಾಳೆ ನಿಮಗೆ ರಾಬರ್ಟ್ ಸಿನಿಮಾ ಬಗ್ಗೆ ದೊಡ್ಡದೊಂದು ಅಪ್ಡೇಟ್ ಸಿಗಲಿದೆ. ಎಲ್ಲರೂ ಕಾಯುತ್ತಿರಿ ಎಂದು ಬರೆದಿದ್ದಾರೆ.
![ದಚ್ಚು ಅಭಿಮಾನಿಗಳಿಗೆ ನಾಳೆ ಸಿಗಲಿದೆ ರಾಬರ್ಟ್ ಬಗ್ಗೆ ಬಿಗ್ ನ್ಯೂಸ್! a big update about Roberrt](https://etvbharatimages.akamaized.net/etvbharat/prod-images/768-512-6238743-thumbnail-3x2-giri.jpg)
ದಚ್ಚು ಅಭಿಮಾನಿಗಳಿಗೆ ನಾಳೆ ಸಿಗಲಿದೆ ರಾಬರ್ಟ್ ಬಗ್ಗೆ ಬಿಗ್ ನ್ಯೂಸ್!
ಹೌದು, ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ರಾಬರ್ಟ್ ಪೋಸ್ಟರ್ವೊಂದನ್ನು ಹಾಕಿದ್ದು, ನಾಳೆ ನಿಮಗೆ ರಾಬರ್ಟ್ ಸಿನಿಮಾ ಬಗ್ಗೆ ದೊಡ್ಡದೊಂದು ಅಪ್ಡೇಟ್ ಸಿಗಲಿದೆ. ಎಲ್ಲರೂ ಕಾಯುತ್ತಿರಿ ಎಂದು ಬರೆದಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ತರುಣ್, ನಾಳೆ ಸಂಜೆ 5 ಗಂಟೆಗೆ ನಿಮಗೆ ಹೊಸದೊಂದು ಮಾಹಿತಿ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ. ಈ ಸುದ್ದಿಯನ್ನು ನೋಡಿರುವ ದಚ್ಚು ಅಭಿಮಾನಿಗಳಿಗೆ ಒಂದು ಕಡೆ ಖುಷಿ ಆದ್ರೆ, ಮತ್ತೊಂದೆಡೆ ಆ ಹೊಸ ಅಪ್ಡೇಟ್ ಏನು ಎಂಬ ಕುತೂಹಲ ಹೆಚ್ಚಿದೆ.