ಕರ್ನಾಟಕ

karnataka

ETV Bharat / sitara

ರಾಹುಲ್​​ ದ್ರಾವಿಡ್​ ಬಯೋಪಿಕ್​​ನಲ್ಲಿ ಸುದೀಪ್​ ನಟನೆ? ಹಕ್ಕು ತಂದ್ರೆ ಸಿನಿಮಾ ಮಾಡ್ತೀನಿ ಎಂದ ಕಬೀರ್ ಖಾನ್! - Rahul dravid Biopic matter

‘83’ ಸಿನಿಮಾದ ಪ್ರಚಾರದ ವೇಳೆ ಮಾಜಿ ಕ್ರಿಕೆಟಿಗ, ಟೀಂ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಅವರ ಬಯೋಪಿಕ್​ ಮಾಡುವ ವಿಚಾರವೂ ಚರ್ಚೆಗೆ ಬಂದಿದೆ. ಕಿಚ್ಚ ಸುದೀಪ್​ ಅವರು ಇದರಲ್ಲಿ ರಾಹುಲ್​ ದ್ರಾವಿಡ್​ ಅವರ ಪಾತ್ರವನ್ನು ಮಾಡಬೇಕು ಎಂಬ ಮಾತು ಕೇಳಿ ಬಂದಿದೆ.

Rahul dravid Biopic matter
Rahul dravid Biopic matter

By

Published : Dec 19, 2021, 12:58 AM IST

ಮಹೇಂದ್ರ ಸಿಂಗ್ ಧೋನಿ ಜೀವನ ಆಧಾರಿತ ಬಯೋಪಿಕ್​​ ನಂತರ ಇದೀಗ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದ ಘಟನೆಯನ್ನಾಧರಿಸಿ 83 ಎಂಬ ಟೈಟಲ್​​ನಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಡಿಸೆಂಬರ್​​​​​ 24ರಂದು ದೇಶಾದ್ಯಂತ ರಿಲೀಸ್​​ ಆಗಲಿದೆ. ಈ ಸಿನಿಮಾದ ಪ್ರಚಾರವನ್ನ ಚಿತ್ರತಂಡ ಈಗಾಗಲೇ ದುಬೈ, ಚನ್ನೈ, ಮುಂಬೈನಲ್ಲಿ ಮಾಡಿದ್ದು, ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಚಾರ ನಡೆಸಿದರು.

83 ಸಿನಿಮಾ ಕನ್ನಡದಲ್ಲೂ ಮೂಡಿ ಬರುತ್ತಿರುವ ಕಾರಣ ಕರ್ನಾಟಕದಲ್ಲಿ ಕಿಚ್ಚ ಸುದೀಪ್​​ ಚಿತ್ರವನ್ನ ಅರ್ಪಿಸುತ್ತಾರೆ. ಪ್ರಚಾರ ಸಮಾರಂಭದ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಲಾಯಿತು.ಈ‌ ಸಿನಿಮಾದ ವಿಶೇಷತೆ ಬಗ್ಗೆ ಮಾತನಾಡುವ ಸಂಧರ್ಭದಲ್ಲಿ ಟೀಂ‌ ಇಂಡಿಯಾದ ಮಾಜಿ ಸ್ಟಾರ್ ಕ್ರಿಕೆಟರ್​ ಹಾಗೂ ಟೀಂ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಅವರ ಬಯೋಪಿಕ್​ ಮಾಡುವ ವಿಚಾರವೂ ಚರ್ಚೆಗೆ ಬಂದಿದೆ.

ರಾಹುಲ್​​ ದ್ರಾವಿಡ್​ ಬಯೋಪಿಕ್​​ನಲ್ಲಿ ಸುದೀಪ್​ ನಟನೆ?

ಇದನ್ನೂ ಓದಿರಿ:83 Movie: ರಣವೀರ್​ ಸಿಂಗ್​​, ಕ್ರಿಕೆಟರ್​ ಶ್ರೀಕಾಂತ್​ಗೆ ಕನ್ನಡದ ಡೈಲಾಗ್​ ಹೇಳಿಕೊಟ್ಟ ಕಿಚ್ಚ!

ದಿ ವಾಲ್ ಖ್ಯಾತಿಯ ರಾಹುಲ್​ ದ್ರಾವಿಡ್​ ಅವರ ಪಾತ್ರವನ್ನು ಮಾಡುವ ಬಗ್ಗೆ ಪ್ರಶ್ನೆಯೊಂದು ಕಿಚ್ಚ ಸುದೀಪ್​ ಅವರಿಗೆ ಕೇಳಿ ಬಂತು. ಈ ವೇಳೆ ಮಾತನಾಡಿದ ಅವರು, ನಾನು ದ್ರಾವಿಡ್ ಬಯೋಫಿಕ್ ಮಾಡೋದಿಕ್ಕೆ ಇಷ್ಟ, ಪಕ್ಕದಲ್ಲಿ ಬಾಲಿವುಡ್ ಡೈರೆಕ್ಟರ್ ಕಬೀರ್ ಖಾನ್ ಇದ್ದಾರೆ ಅವ್ರನ್ನ ಕೇಳಿ ಅಂದರು. ಆಗ 83 ಸಿನಿಮಾ ನಿರ್ದೇಶಕ ಕಬೀರ್​ ಖಾನ್​ ಒಪ್ಪಿಗೆ ನೀಡಿದ್ದು, ರಾಹುಲ್ ದ್ರಾವಿಡ್ ಬಯೋಪಿಕ್​ ರೈಟ್ಸ್ ತಂದ್ರೆ ಖಂಡಿತ ಮಾಡುತ್ತೇನೆ​ ಎಂದು ಹೇಳಿದ್ದಾರೆ. ಈ ವಿಚಾರ ಕೇಳಿ ರಣವೀರ್​ ಸಿಂಗ್​ ಕೂಡ ಖುಷಿಪಟ್ಟಿದ್ದಾರೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಬಾಲಿವುಡ್ ನಿರ್ದೇಶಕ ಕಬೀರ್ ಖಾನ್‌ ನಿರ್ದೇಶನದಲ್ಲಿ ರಾಹುಲ್ ದ್ರಾವಿಡ್ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರನ್ನ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.

ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್​

ABOUT THE AUTHOR

...view details