1983ರಲ್ಲಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಘಟನೆಯನ್ನಾಧರಿಸಿ ಬರುತ್ತಿರುವ ಸಿನಿಮಾ 83. ಟ್ರೇಲರ್ನಿಂದಲೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿರೋ ಈ ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ.
ಬೆಂಗಳೂರಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್ ಸೇರಿದಂತೆ ತಂಡದಲ್ಲಿದ್ದ ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ, ಕೆ. ಶ್ರೀಕಾಂತ್ ಹಾಗೂ ನಟ ರಣವೀರ್ ಸಿಂಗ್ ಭಾಗಿಯಾಗಿದ್ದರು. ಇವರಿಗೆ ಕಿಚ್ಚ ಸುದೀಪ್ ಕೂಡ ಸಾಥ್ ನೀಡಿದರು.
1983ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿ ಕೊಟ್ಟ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಮಿಂಚಿದ್ದು, ಈ ಸಿನಿಮಾವನ್ನ ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಅರ್ಪಿಸುತ್ತಿದ್ದಾರೆ. ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್ಟೇನ್ಮೆಂಟ್ ಸಂಸ್ಥೆಗಳು ವಿತರಣೆಯ ಜವಾಬ್ದಾರಿ ಹೊತ್ತು ಕೊಂಡಿವೆ. ಈ ಹಿನ್ನೆಲೆಯಲ್ಲಿ 83 ಸಿನಿಮಾದ ಮುಖ್ಯ ಪಾತ್ರದಾರಿ ರಣವೀರ್ ಸಿಂಗ್, ಕಪಿಲ್ ದೇವ್, ನಿರ್ದೇಶಕ ಕಬೀರ್ ಖಾನ್, ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಕಿರ್ಮಾನಿ, ಶ್ರೀಕಾಂತ್ ಹಾಗು ಕಿಚ್ಚ ಸುದೀಪ್ ಈ ಸಿನಿಮಾದ ಬಗ್ಗೆ ಮಾತನಾಡೋದಿಕ್ಕೆ ಉಪಸ್ಥಿತಿ ಇದ್ದರು.