ಕರ್ನಾಟಕ

karnataka

ETV Bharat / sitara

ಜನಮನ ಗೆದ್ದ 'ಅಂಧಾಧುನ್'​ಗೆ ಬೆಸ್ಟ್​ ಸಿನಿಮಾ ಅವಾರ್ಡ್... ಆಯುಷ್ಮಾನ್​​,ವಿಕ್ಕಿಗೆ ಬೆಸ್ಟ್​ ಆ್ಯಕ್ಟರ್​ ಪ್ರಶಸ್ತಿ!

ಸಿನಿಮಾ ಇಂಡಸ್ಟ್ರಿಯಲ್ಲಿ ಜನಮನ ಗೆದ್ದ ಅಂಧಾಧುನ್​ ಚಿತ್ರಕ್ಕೆ ಬೆಸ್ಟ್​ ಹಿಂದಿ ಸಿನಿಮಾ ಅವಾರ್ಡ್​​ ನೀಡಲಾಗಿದ್ದು, ಆಯುಷ್ಮಾನ್​​, ವಿಕ್ಕಿಗೆ ಬೆಸ್ಟ್​ ಆ್ಯಕ್ಟರ್​ ಪ್ರಶಸ್ತಿ ನೀಡಲಾಗಿದೆ.

By

Published : Aug 9, 2019, 5:23 PM IST

ನ್ಯಾಷನಲ್​ ಫಿಲ್ಮಂ ಅವಾರ್ಡ್

ನವದೆಹಲಿ: 2018ನೇ ಸಾಲಿನ ನ್ಯಾಷನಲ್​ ಫಿಲ್ಮಂ ಅವಾರ್ಡ್​ ಪುರಸ್ಕಾರ ಘೋಷಣೆ ಮಾಡಲಾಗಿದ್ದು, ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡು ಜನಮನ ಗೆದ್ದಿರುವ ಬಾಲಿವುಡ್​​ನ ಅಂಧಾಧುನ್​ಗೆ ಅತ್ಯುತ್ತಮ ಸಿನಿಮಾ ಅವಾರ್ಡ್​ ನೀಡಲಾಗಿದೆ.

2018ರ ಅಕ್ಟೋಬರ್​​​ 5ರಂದು ದೇಶಾದ್ಯಂತ ರಿಲೀಸ್​ ಆಗಿದ್ದ ಈ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ, ತಬು, ರಾಧಿಕಾ ಆಪ್ಟೆ ಆ್ಯಕ್ಟ್​ ಮಾಡಿದ್ದರು. ಕ್ರೈಂ ಕಥೆಯನ್ನೊಳಗೊಂಡಿದ್ದ ಈ ಸಿನಿಮಾದಲ್ಲಿ ನಟ ಆಯುಷ್ಮಾನ್​ ಪಿಯಾನೋ ಕಲಾವಿದರಾಗಿ ನಟನೆ ಮಾಡಿದ್ದರು. ಈ ಸಿನಿಮಾಗೆ ಮತ್ತೊಂದು ಪ್ರಶಸ್ತಿ ಕೂಡ ಒಲಿದು ಬಂದಿದೆ. ಬೆಸ್ಟ್​ ನಾನ್​ ಫಿಚರ್​ ಪ್ರಶಸ್ತಿ ಕೂಡ ಇದೇ ಚಿತ್ರಕ್ಕೆ ನೀಡಲಾಗಿದೆ.

ಇನ್ನು ಅಂಧಾಧುನ್​ ಚಿತ್ರದಲ್ಲಿ ನಟನೆ ಮಾಡಿರುವ ಆಯುಷ್ಮಾನ್​ ಖುರಾನ್​ ಹಾಗೂ ಉರಿ ದಿ ಸರ್ಜಿಕಲ್​ ಸ್ಟ್ರೈಕ್​​​ ಚಿತ್ರದಲ್ಲಿ ನಟನೆ ಮಾಡಿರುವ ವಿಕ್ಕಿ ಕೌಶಾಲ್​ಗೆ ಬೆಸ್ಟ್​​ ಆ್ಯಕ್ಟರ್​ ಪ್ರಶಸ್ತಿ ನೀಡಲಾಗಿದೆ. ಇದರ ಜತೆಗೆ ಮಹಾಂತಿ ಚಿತ್ರದಲ್ಲಿ ನಟನೆ ಮಾಡಿರುವ ಕೀರ್ತಿ ಸುರೇಶ್​ಗೆ ಬೆಸ್ಟ್​ ಆ್ಯಕ್ಟರ್​ ಅವಾರ್ಡ್​ ನೀಡಲಾಗಿದೆ. ಜತಗೆ ಬೆಸ್ಟ್​ ತೆಲಗು ಮೂವಿ ಎಂಬ ಪ್ರಶಸ್ತಿ ಸಹ ನೀಡಲಾಗಿದೆ. ಪದ್ಮಾವತ್​​ ಚಿತ್ರ ಮೂರು ಪ್ರಶಸ್ತಿ ಪಡೆದುಕೊಂಡಿದ್ದು, ಚಿತ್ರದ ಡೈರೆಕ್ಟರ್​​ ಸಂಜಯ್​ ಲೀಲಾ ಬನ್ಸಾಲಿಗೆ ಬೆಸ್ಟ್ ಮ್ಯೂಸಿಕ್​ ಹಾಗೂ ನೃತ್ಯ ಸಂಯೋಜನೆ ಪ್ರಶಸ್ತಿ ನೀಡಲಾಗಿದೆ.​​

ಅಕ್ಷಯ್​ ಕುಮಾರ್​ ನಟನೆಯ ಪಾಡ್​ಮ್ಯಾನ್​ಗೆ ಸಾಮಾಜಿಕ ಸಮಸ್ಯೆಗಳ ಅತ್ಯುತ್ತಮ ಚಿತ್ರ, ಕನ್ನಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರಸಗೊಡ ಚಿತ್ರಕ್ಕೆ ಬೆಸ್ಟ್​ ಮಕ್ಕಳ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿಗಳ ವಿಭಾಗ ಮತ್ತು ಚಲನಚಿತ್ರಗಳ ವಿವರ

  • ಅತ್ಯುತ್ತಮ ಹಿಂದಿ ಚಿತ್ರ- ಅಂಧಾಧುನ್
  • ಅತ್ಯುತ್ತಮ ಮಲಯಾಳಂ ಚಿತ್ರ- ಸುಡಾನಿ ಫ್ರಂ ನೈಜೀರಿಯಾ
  • ಅತ್ಯುತ್ತಮ ತೆಲುಗು ಚಿತ್ರ- ಮಹಾನಟಿ
  • ಅತ್ಯುತ್ತಮ ಕನ್ನಡ ಚಿತ್ರ- ನಾತಿಚರಾಮಿ
  • ಅತ್ಯುತ್ತಮ ಕೊಂಕಣಿ ಚಿತ್ರ- ಅಮೊರಿ
  • ಅತ್ಯುತ್ತಮ ತಮಿಳು ಚಿತ್ರ- ಬಾರಂ
  • ಅತ್ಯುತ್ತಮ ಸಾಹಸ ಚಿತ್ರ- ಕೆಜಿಎಫ್
  • ಅತ್ಯುತ್ತಮ ಕೊರಿಯಾಗ್ರಫಿ- ಪದ್ಮಾವತ್
  • ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್- AWE (ತೆಲುಗು), ಕೆಜಿಎಫ್(ಕನ್ನಡ)
  • ಅತ್ಯುತ್ತಮ ಸಾಹಿತ್ಯ- ನಾತಿಚರಾಮಿ (ಮಾಯಾವಿ ಮನವೇ)
  • ಅತ್ಯುತ್ತಮ ಸಂಗೀತ ನಿರ್ದೇಶಕ- ಸಂಜಯ್ ಲೀಲಾ ಬನ್ಸಾಲಿ ( ಪದ್ಮಾವತ್)
  • ಅತ್ಯುತ್ತಮ ಹಿನ್ನೆಲೆ ಸಂಗೀತ- ಉರಿ
  • ಅತ್ಯುತ್ತಮ ಪ್ರಸಾದನ- AWE-ತೆಲುಗು (ರಂಜಿತ್)
  • ಪ್ರೊಡಕ್ಷನ್ ಡಿಸೈನ್-ಕಮ್ಮರ ಸಂಭವಂ (ಮಲಯಾಳಂ)
  • ಅತ್ಯುತ್ತಮ ಸಂಕಲನ-ನಾತಿಚರಾಮಿ
  • ಅತ್ಯುತ್ತಮ ಚಿತ್ರಕತೆ- ಚಿ ಲಾ ಸೌ (ತೆಲುಗು)
  • ಅತ್ಯುತ್ತಮ ಛಾಯಾಗ್ರಹಣ- ಉಲ್ಲು
  • ಅತ್ಯುತ್ತಮ ಗಾಯಕಿ - ಬಿಂಧು ಮಾಧವಿ (ನಾತಿಚರಾಮಿ)
  • ಅತ್ಯುತ್ತಮ ಗಾಯಕ- ಅರಿಜಿತ್ ಸಿಂಗ್ (ಪದ್ಮಾವತ್)
  • ಅತ್ಯುತ್ತಮ ನಟ- ಆಯುಷ್ಮಾನ್ ಖುರಾನಾ (ಅಂಧಾದೂನ್), ವಿಕ್ಕಿ ಕೌಶಲ್ (ಉರಿ)
  • ಅತ್ಯುತ್ತಮ ನಟಿ- ಕೀರ್ತಿ ಸುರೇಶ್ (ಮಹಾನಟಿ)
  • ಅತ್ಯುತ್ತಮ ನಿರ್ದೇಶನ- ಆದಿತ್ಯ ಧರ್ (ಉರಿ)

ABOUT THE AUTHOR

...view details