ಈ ವಾರ (ಮಾರ್ಚ್ ತಿಂಗಳ ಎರಡನೇ ವಾರ) ಕನ್ನಡದಲ್ಲಿ ಆರು ಸಿನಿಮಗಳು ಬಿಡುಗಡೆ ಆಗುತ್ತಿವೆ. ಇಂದು ನರಗುಂದ ಬಂಡಾಯ ಹಾಗೂ ಶಿವಾರ್ಜುನ ಸಿನಿಮಾಗಳು ತೆರೆಗೆ ಬರುತ್ತಿವೆ. ಇನ್ನು ನಾಳೆ 5 ಅಡಿ 7 ಅಂಗುಲ, ಅಂಬಾನಿ ಪುತ್ರ, ನಂ ಕಥೆ ನಿಮ್ ಜೊತೆ ಮತ್ತು ಹುಲಿದುರ್ಗ ಚಿತ್ರಗಳು ರಿಲೀಸ್ ಆಗುತ್ತಿವೆ.
ಇಂದೇ ಬಿಡುಗಡೆ ನರಗುಂದ ಬಂಡಾಯ
ನಾಗೇಂದ್ರ ಮಾಗಡಿ ಪಾಂಡು ಚಿತ್ರಕಥೆ ಹಾಗೂ ನಿರ್ದೇಶನ ಮಾಡಿರುವ ನರಗುಂದ ಬಂಡಾಯ ಸಿನಿಮಾ ಇಂದು ತೆರೆಗೆ ಬರುತ್ತಿದೆ. 1980 ನಡೆದ ನೈಜ ಕಥೆ ಆಧಾರಿತ ಸಿನಿಮಾ ಇದಾಗಿದ್ದು, ರೈತರು ತೆರಿಗೆ ಕಟ್ಟುವ ವಿಚಾರದಲ್ಲಿ ಬಂಡಾಯ ಮಾಡಿ ಸಿಡಿದೇವ ಕಥೆ ಇದರಲ್ಲಿದೆ. ಚಿತ್ರದಲ್ಲಿ ಶುಭಾ ಪೂಂಜಾ, ಅವಿನಾಶ್, ಸಾಧು ಕೋಕಿಲ, ಭವ್ಯ, ಶಿವಕುಮಾರ್, ರವಿ ಚೇತನ್ ಸೇರಿದಂತೆ ಹಲವರಿದ್ದಾರೆ.