ತಮ್ಮ ನೆಚ್ಚಿನ ಸ್ಟಾರ್ ನಟರ ಹೆಸರಿನಲ್ಲಿ ಹುಡುಗರು ಸಾಕಷ್ಟು ಅಭಿಮಾನಿ ಸಂಘಗಳನ್ನು ಕಟ್ಟಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಬರೋಬ್ಬರಿ 5,000 ಮಹಿಳೆಯರು ಸೇರಿಕೊಂಡು ಸುದೀಪ್ ಹೆಸರಿನಲ್ಲಿ ‘ಮಹಿಳಾ ಸೇನೆ’ ಸ್ಥಾಪನೆ ಮಾಡಿದ್ದಾರೆ.
ಭಾರತದಲ್ಲೇ ಮೊದಲು: ಕಿಚ್ಚನ ಹೆಸರಲ್ಲಿ ಸಂಘ ಕಟ್ಟಿದ 5,000 ಮಹಿಳೆಯರು - kannada star sudeep
ಕಿಚ್ಚ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಸುದೀಪ್ ಮಹಿಳಾ ಅಭಿಮಾನಿಗಳು 'ಮಹಾ ಸೇವಕ ಬಾದ್‌ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ' ಸಂಘ ಕಟ್ಟಿದ್ದಾರೆ.
ಭಾರತದಲ್ಲೇ ಮೊದಲು : ಕಿಚ್ಚನ ಹೆಸರಲ್ಲಿ ಸಂಘ ಕಟ್ಟಿದ 5000 ಮಹಿಳೆಯರು
ಕಿಚ್ಚ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಸುದೀಪ್ ಮಹಿಳಾ ಅಭಿಮಾನಿಗಳು 'ಮಹಾ ಸೇವಕ ಬಾದ್‌ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ' ಸಂಘ ಕಟ್ಟಿದ್ದಾರೆ.
ಒಂದು ವಿಡಿಯೋ ಮಾಡುವ ಮೂಲಕ ಈ ಸುದ್ದಿಯನ್ನು ತಿಳಿಸಿರುವ ಮಹಿಳಾ ಅಭಿಮಾನಿಗಳು, ಈ ಮಹಾಸೇನೆಯಲ್ಲಿ ಬರೀ ಮಹಿಳೆಯರೇ ಸಕ್ರಿಯರಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದರೆ. 5,000 ಮಹಿಳಾ ಅಭಿಮಾನಿಗಳನ್ನು ಹೊಂದಿರುವ, ಭಾರತದಲ್ಲೇ ಮೊದಲ ಸಂಘ ಎಂಬ ಖ್ಯಾತಿಗೆ ಈ ಸಂಘ ಭಾಜನವಾಗಿದೆ.