ಕರ್ನಾಟಕ

karnataka

ETV Bharat / sitara

ನಿಯಮ ಉಲ್ಲಂಘಿಸಿ ಚಿತ್ರ ಪ್ರದರ್ಶನ... 3 ಚಿತ್ರಮಂದಿರ​​ಗಳಿಗೆ ಬೀಗ ಜಡಿದ ಚುನಾವಣಾ ಆಯೋಗ - ಲಕ್ಷ್ಮೀ ಎನ್​ಟಿಆರ್

ಪೊರಮ್​ಮಿಲ್​​ನ ವೆಂಕಟೇಶ್ವರ್​, ರೈಲ್ವೆ ಕೊಡುರಿನ ಎಎಸ್​ ಥಿಯೇಟರ್​ ಹಾಗೂ ಕಡಪಾ ಸಿಟಿಯ ರಾಜಾ ಚಿತ್ರಮಂದಿರಗಳು ಇದೇ ಶುಕ್ರವಾರ ಚಿತ್ರ ಬಿಡುಗಡೆ ಮಾಡಿದ್ದವು. ಇದರಿಂದ ಕೆಂಡಾಮಂಡಲಾದ ಮುಖ್ಯ ಚುನಾವಣಾ ಅಧಿಕಾರಿ, ಚಿತ್ರಮಂದಿರಗಳನ್ನು ಮುಟ್ಟುಗೋಲು ಹಾಕಿ, ಪರವಾನಗಿ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು.

ಚಿತ್ರಕೃಪೆ : ಟ್ವಿಟ್ಟರ್​

By

Published : May 4, 2019, 3:53 PM IST

ವಿಜಯವಾಡ​ :ಚುನಾವಣೆ ಆಯೋಗದ ಆದೇಶ ಮೀರಿ 'ಲಕ್ಷ್ಮೀ ಎನ್​ಟಿಆರ್' ಚಿತ್ರ ಪ್ರದರ್ಶನ ಮಾಡಿರುವ ಮೂರು ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ.

ರಾಜ್ಯದಲ್ಲಿ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆ ರಾಮ್​ ಗೋಪಾಲ್ ವರ್ಮಾ ನಿರ್ದೇಶನದ ​'ಲಕ್ಷ್ಮೀ ಎನ್​ಟಿಆರ್' ಸಿನಿಮಾ ಬಿಡುಗಡೆ ಮೇಲೆ ಚುನಾವಣಾ ಆಯೋಗ ನಿರ್ಬಂಧ ಹೇರಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕುರಿತು ಆಕ್ಷೇಪಾರ್ಹ ಅಂಶಗಳಿವೆ ಎಂದು ಆರೋಪಿಸಿದ್ದ ರಾಜಕೀಯ ಪಕ್ಷಗಳು ಚುನಾವಣಾ ಕಮಿಷನ್​ಗೆ ದೂರು ನೀಡಿದ್ದವು. ಅದರಂತೆ ಚಿತ್ರ ಬಿಡುಗಡೆ ಮಾಡದಂತೆ ನಿರ್ಮಾಪಕರಿಗೆ ಏಪ್ರಿಲ್​ 10 ರಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಮುಂದಿನ ಆದೇಶ ಪ್ರಕಟಿಸುವ ವರೆಗೆ ಚಿತ್ರ ರಿಲೀಸ್ ಮಾಡದಂತೆ ಸೂಚಿಸಿತ್ತು. ಆದರೆ, ಇದನ್ನು ಉಲ್ಲಂಘಿಸಿದ ಮೂರು ಚಿತ್ರಮಂದಿರಗಳು ಮೇ.1 ರಂದು 'ಲಕ್ಷ್ಮೀ ಎನ್​ಟಿಆರ್' ರಿಲೀಸ್ ಮಾಡಿದ್ದವು.

ಪೊರಮ್​ಮಿಲ್​​ನ ವೆಂಕಟೇಶ್ವರ್​, ರೈಲ್ವೆ ಕೊಡುರಿನ ಎಎಸ್​ ಥಿಯೇಟರ್​ ಹಾಗೂ ಕಡಪಾ ಸಿಟಿಯ ರಾಜಾ ಚಿತ್ರಮಂದಿರಗಳು ಇದೇ ಶುಕ್ರವಾರ ಚಿತ್ರ ಬಿಡುಗಡೆ ಮಾಡಿದ್ದವು. ಇದರಿಂದ ಕೆಂಡಾಮಂಡಲರಾದ ಮುಖ್ಯ ಚುನಾವಣಾ ಅಧಿಕಾರಿ, ಚಿತ್ರಮಂದಿರಗಳನ್ನು ಮುಟ್ಟುಗೋಲು ಹಾಕಿ, ಪರವಾನಗಿ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು. ಅದರಂತೆ ಈ ಮೂರು ಥಿಯೇಟರ್​​ಗಳಿಗೆ ಬೀಗ ಹಾಕಿದೆ ಎಂದು ತಿಳಿದು ಬಂದಿದೆ.

ಇನ್ನು ಈಗಾಗಲೇ ತೆಲಂಗಾಣದಲ್ಲಿ ರಿಲೀಸ್ ಆಗಿರುವ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿದೆ. ಇದೀಗ ಆಂಧ್ರದಲ್ಲಿಯೂ ಚಿತ್ರ ರಿಲೀಸ್ ಮಾಡಲು ಆರ್​​ಜಿವಿ ಪ್ರಯತ್ನ ನಡೆಸಿದ್ದರು. ಇವರ ಪ್ರಯತ್ನಕ್ಕೆ ಚುನಾವಣೆ ಆಯೋಗ ತಡೆಯೊಡ್ಡಿದೆ.

ABOUT THE AUTHOR

...view details