ಕರ್ನಾಟಕ

karnataka

ETV Bharat / sitara

ಕನ್ನಡ ಚಿತ್ರರಂಗದಲ್ಲಿ 2019ರಲ್ಲಿ ಹುಟ್ಟಿಕೊಂಡ ವಿವಾದಗಳು ಇವು...! - ವಿಜಯ್​​​ಪ್ರಕಾಶ್​​​​​​​​ 2019 ರ ಅತ್ಯುತ್ತಮ ಗಾಯಕ

ಕಳೆದ ವರ್ಷಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಈ ವರ್ಷ ದೊಡ್ಡ ಮಟ್ಟದ ವಿವಾದಗಳು ಆಗಿಲ್ಲ. 2018ರಲ್ಲಿ ಮೀ ಟೂ ಪ್ರಕರಣ ಸ್ಯಾಂಡಲ್​​​​​​ವುಡ್​​​​​​​ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದರೆ, ಈ ವರ್ಷ ಕನ್ನಡ ಚಿತ್ರರಂಗದಲ್ಲಿ ವಿವಾದಗಳು ಕಡಿಮೆ ಆಗಿದೆ ಅನ್ನೋದು ಖುಷಿಯ ವಿಚಾರ.

2019 sandalwood controversies
2019 ಸ್ಯಾಂಡಲ್​​​ವುಡ್ ವಿವಾದಗಳು

By

Published : Dec 21, 2019, 11:52 PM IST

ಸ್ಯಾಂಡಲ್​​​​ವುಡ್​​​​ನಲ್ಲಿ ಈ ವರ್ಷ ಹೆಚ್ಚು ಸೌಂಡ್ ಮಾಡಿದ್ದು ಸ್ಟಾರ್ ವಾರ್​​. ಮೊದಲಿಗೆ 'ಕುರುಕ್ಷೇತ್ರ' ಸಿನಿಮಾದಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿಖಿಲ್ ​​​​​ಕುಮಾರಸ್ವಾಮಿ ಅಭಿಮಾನಿಗಳ ನಡುವೆ ದೊಡ್ಡ ಗೋಡೆ ನಿರ್ಮಾಣ ಆಗಿರುವುದು. ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಪಾತ್ರವನ್ನು ಹೆಚ್ಚು ಇಡಲಾಗಿದೆ ಅನ್ನೋದು ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಸ್ಟಾರ್ ನಟರ ಅಭಿಮಾನಿಗಳು ಕಿತ್ತಾಡಿಕೊಂಡರು.

ಕುರುಕ್ಷೇತ್ರ
ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್

ನವರಸನಾಯಕ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದ ಕೃತಿಚೌರ್ಯ ವಿವಾದಕ್ಕೆ ಕಾರಣವಾಗಿತ್ತು. ಸಾಹಿತಿ ವಸುಧೇಂದ್ರ ಎಂಬುವರು ಪ್ರೀಮಿಯರ್ ಪದ್ಮಿನಿ ಕಥೆ ನನ್ನ 'ನಂಜುಂಡಿ' ಕೃತಿಯಿಂದ ಕದಿಯಲಾಗಿದೆ ಎಂದು ಆರೋಪಿಸಿದರು.

ಪ್ರೀಮಿಯರ್ ಪದ್ಮಿನಿ

ಇನ್ನು ಈ ವರ್ಷದಲ್ಲಿ ಹರಿಪ್ರಿಯಾ ಅಭಿನಯದ 10 ಸಿನಿಮಾಗಳು ರಿಲೀಸ್ ಆಗಿರುವುದು ಒಂದು ದಾಖಲೆ. ಆದರೆ, 'ಸೂಜಿದಾರ 'ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಮಹತ್ವ ಇಲ್ಲ ಎಂದು ಹರಿಪ್ರಿಯಾ, ನಿರ್ದೇಶಕ ಮೌನೇಶ್ ಬಡಿಗಾರ್​​​​ ವಿರುದ್ಧ ಮನಸ್ತಾಪ ಹೊರ ಹಾಕಿದರು. ಈ ವಿವಾದ ಹರಿಪ್ರಿಯಾ ಅವರ ಇಮೇಜಿಗೆ ಡ್ಯಾಮೇಜ್ ಆಗುವಂತೆ ನಿರ್ದೇಶಕರು ಉತ್ತರಿಸಿದ್ದು ವಿವಾದಕ್ಕೆ ಕಾರಣವಾಯ್ತು.

ಐ ಲವ್ ಯು ಚಿತ್ರದಲ್ಲಿ ರಚಿತಾ

ಇನ್ನು ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ 'ಐ ಲವ್​ ಯು' ಚಿತ್ರದ ಹಾಡು ವಿವಾದ ಸೃಷ್ಟಿಸಿತ್ತು. ಇದಾದ ನಂತರ ರಚಿತಾ ಮೀಡಿಯಾ ಮುಂದೆ ಬಂದು ನಾನು ಈ ಆ್ಯಕ್ಟಿಂಗ್​ ಮಾಡಬಾರದಿತ್ತು ಎಂದು ಕಣ್ಣೀರು ಹಾಕಿದರು.

'ಪೈಲ್ವಾನ್' ಚಿತ್ರದಲ್ಲಿ ಸುದೀಪ್

ಕಿಚ್ಚ ಸುದೀಪ್ ಹಾಗೂ ದರ್ಶನ್ ನಡುವಿನ ಮನಸ್ತಾಪ ಈ ವರ್ಷದ ವಿವಾದಗಳಲ್ಲಿ ಹೆಚ್ಚು ಸುದ್ದಿಯಾಗಿತ್ತು. ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ರಿಲೀಸ್ ಆದಾಗ ದರ್ಶನ್ ಅಭಿಮಾನಿಯೊಬ್ಬ ಪೈರಸಿ ಮಾಡುವ ಮೂಲಕ 'ಪೈಲ್ವಾನ್​​' ಚಿತ್ರಕ್ಕೆ ದೊಡ್ಡ ಮಟ್ಟದ ನಷ್ಟ ಆಯ್ತು. ಸುದೀಪ್ ದೂರಿನ ಮೇರೆಗೆ ಒಬ್ಬನನ್ನು ಬಂಧಿಸಲಾಯಿತು. ಇದೇ ವಿಷಯವಾಗಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾಗಳಲ್ಲಿ ವಾಗ್ವಾದವಾಯಿತು.

ಶಾನ್ವಿ ಶ್ರೀವಾತ್ಸವ್

ಇದರ ಜೊತೆಗೆ ಮಾಸ್ಟರ್ ಪೀಸ್ ಹೀರೋಯಿನ್, ಶಾನ್ವಿ ಶ್ರೀವಾತ್ಸವ್, ಗೀತಾ ಸಿನಿಮಾ ನಿರ್ದೇಶಕನ ವಿರುದ್ಧ ಅಸಮಾಧಾನ ಹೊರ ಹಾಕಿದರು. 'ಗೀತಾ' ಚಿತ್ರ ಬಿಡುಗಡೆಗೊಂಡಾಗ ಚಿತ್ರದ ಸ್ಕ್ರಿಪ್ಟ್ ನನಗೆ ಹೇಳಿದ್ದಕ್ಕಿಂತ ಬೇರೆಯಾಗಿದೆ. ಬದಲಾವಣೆ ಮಾಡಿರುವುದನ್ನು ನನಗೆ ಹೇಳಿಲ್ಲ ಎಂದು ನಾಯಕಿ ಶಾನ್ವಿ ಶ್ರೀವಾತ್ಸವ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.

'ಒಡೆಯ' ಸಿನಿಮಾ

ದರ್ಶನ್ ಅಭಿನಯದ 'ಒಡೆಯರ್​​​​​​​' ಸಿನಿಮಾ ಟೈಟಲ್​​​​​​​​​ಗೆ ಸಾಕಷ್ಟು ವಿರೋಧವಾಯಿತು. ಹಲವು ಸಂಘಟನೆಗಳು ಪೊಲೀಸ್​​​​​​​​ ದೂರು​​​​​ ಕೂಡಾ ನೀಡಿದವು. ನಂತರ ಚಿತ್ರದ ಟೈಟಲ್‌ನ'ಒಡೆಯ' ಎಂದು ಬದಲಾಯಿಸಲಾಯಿತು.​​​​​​​

For All Latest Updates

ABOUT THE AUTHOR

...view details