ಕರ್ನಾಟಕ

karnataka

By

Published : Oct 12, 2019, 5:40 PM IST

ETV Bharat / sitara

ಸಲ್ಮಾನ್ ನಡೆಸಿಕೊಡುವ ಹಿಂದಿಯ ಬಿಗ್​ ಬಾಸ್​ಗೆ ಕಂಟಕ.. 20 ಪ್ರತಿಭಟನಾಕಾರರ ಬಂಧನ!

ನಿನ್ನೆ ಸಲ್ಮಾನ್​ ಖಾನ್​ ಮನೆ ಮುಂದೆ ಬಿಗ್​ ಬಾಸ್​ ಬ್ಯಾನ್​ ಮಾಡುವಂತೆ ಪ್ರತಿಭಟನೆ ಮಾಡಲಾಗಿದ್ದು, 20 ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಎರಡು ವಾರಗಳ ಹಿಂದೆ ಪ್ರಾರಂಭವಾಗಿರುವ ಬಿಗ್​ ಬಾಸ್​-13 ಕಾರ್ಯಕ್ರಮಕ್ಕೆ ಆರಂಭದಿಂದಲೂ ವಿರೋಧ ವ್ಯಕ್ತವಾಗ್ತಿದೆ.

ಬಿಗ್​ ಬಾಸ್-13

ಹಿಂದಿಯಲ್ಲಿ ಸಲ್ಮಾನ್​ ಖಾನ್ ​ನಡೆಸಿಕೊಡುತ್ತಿರುವ ಬಿಗ್​ ಬಾಸ್​ಗೆ ಕಂಟಕದ ಮೇಲೆ ಕಂಟಕಗಳು ಎದುರಾಗುತ್ತಿವೆ. ನಿನ್ನೆ ಸಲ್ಮಾನ್​ ಖಾನ್​ ಮನೆ ಮುಂದೆ ಬಿಗ್​ ಬಾಸ್​ ಬ್ಯಾನ್​ ಮಾಡುವಂತೆ ಪ್ರತಿಭಟನೆ ಮಾಡಲಾಗಿದ್ದು, 20 ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಎರಡು ವಾರಗಳ ಹಿಂದೆ ಪ್ರಾರಂಭವಾಗಿರುವ ಬಿಗ್​ ಬಾಸ್​-13, ಆರಂಭವಾಗಿನಿಂದಲೂ ವಿರೋಧವನ್ನು ಕಟ್ಟಿಕೊಂದಿದೆ. ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಈ ರಿಯಾಲಿಟಿ ಶೋವನ್ನು ಬ್ಯಾನ್​ ಮಾಡುವಂತೆ ಪ್ರತಿಭಟನೆ ಮಾಡುತ್ತಿದ್ದು, ಈ ಹಿಂದೆ ಅಖಿಲ ಭಾರತ ವ್ಯಾಪಾರಿಗಳ ಸಂಘವು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಬ್ಯಾನ್​ ಮಾಡುವಂತೆ ಪತ್ರ ಬರೆದಿತ್ತು.

ಇನ್ನು, ಈ ಬಿಗ್​ ಬಾಸ್​ ಶೋನಲ್ಲಿ ಪ್ರಸಾರವಾಗುವ "ಬೆಡ್​ ಫ್ರೆಂಡ್ಸ್​​ ಫಾರ್ ​​​​ಎವರ್"​ ಎಂಬ ಕಾನ್ಸೆಪ್ಟ್​​ ಅಸಭ್ಯತೆಯಿಂದ ಕೂಡಿದೆ. ಇದು ಭಾರತೀಯ ನೈತಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಆರೋಪ ಮಾಡಲಾಗಿತ್ತು.

ಅಲ್ಲದೆ ಎರಡು ದಿನಗಳ ಹಿಂದೆ ಕರ್ಣಿ ಸೇನಾ ಸಂಘಟನೆಯು, ಮಾಹಿತಿ ಮತ್ತು ಪ್ರಾಸಾರ ಸಚಿವ ಪ್ರಕಾಶ್​ ಜಾವಡೇಕರ್​ಗೆ ಪತ್ರ ಬರೆದಿದ್ದು, ಬಿಗ್​ ಬಾಸ್​ ಹಿಂದೂ ಸಂಸ್ಕೃತಿಯನ್ನು ಅಪಮಾನ ಮಾಡುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕೆಂದ ಆರೋಪ ಮಾಡಿದ್ದರು.

ಇನ್ನು, ಸಲ್ಮಾನ್​ ಖಾನ್​ ಮನೆ ಮುಂದೆ ಉಪದೇಶ್​ ರಾಣ ಎಂಬುವರು ಪ್ರತಿಭಟನೆಯಲ್ಲಿ ತೊಡಗಿ ಬಿಗ್​ ಬಾಸ್​ ಮೂಲಕ ಅಶ್ಲೀಲತೆಯನ್ನು ಪ್ರಸಾರ ಮಾಡುತ್ತಿರುವುದನ್ನು ನಿಲ್ಲಿಸಿ ಎಂದು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ABOUT THE AUTHOR

...view details