ಕರ್ನಾಟಕ

karnataka

ETV Bharat / sitara

ಕಲ್ಲಿನ ವ್ಯಾಪಾರಿ ಮಗನಿಗಾಗಿ ಸಿನಿಮಾ ಮಾಡಿದ ಕತೆ ಕೇಳಿ... - 19 ಏಜ್ ಈಸ್ ನಾನ್​ಸೆನ್ಸ್

ಬಿಲ್ಡರ್ಸ್ ಹಾಗೂ ಬ್ಯುಸಿನೆಸ್‌ಮನ್​ಗಳು ತಮ್ಮ ಮಕ್ಕಳನ್ನು ಹೀರೋ ಮಾಡೋದಕ್ಕೆ ಸಿನಿಮಾ ಮಾಡುವ ಟ್ರೆಂಡ್ ಸ್ಯಾಂಡಲ್​ವುಡ್‌ನಲ್ಲಿ ಹೆಚ್ಚಾಗುತ್ತಿದೆ. ಆದರೆ ಇಲ್ಲೊಬ್ಬ ತಂದೆ ಸ್ಟೋನ್ ವ್ಯಾಪಾರ ಮಾಡಿ ಬಂದ ದುಡ್ಡಲ್ಲಿ ಮಗನ ಆಸೆಗಾಗಿ ಸಿನಿಮಾ ಮಾಡಿ ಗಮನ ಸೆಳೆದಿದ್ದಾರೆ.

‘19 ಏಜ್ ಈಸ್ ನಾನ್​ಸೆನ್ಸ್’

By

Published : Oct 15, 2019, 11:38 AM IST

ಸ್ಯಾಂಡಲ್​ವುಡ್‌ನಲ್ಲಿ ಬಿಲ್ಡರ್ಸ್ ಹಾಗೂ ಬ್ಯುಸಿನೆಸ್‌​ಮನ್​ಗಳು ತಮ್ಮ ಮಕ್ಕಳನ್ನ ಹೀರೋ ಮಾಡೋದಕ್ಕೆ ಸಿನಿಮಾ ಮಾಡುವ ಟ್ರೆಂಡ್ ಹೆಚ್ಚಾಗ್ತಿದೆ. ಆದರೆ ಇಲ್ಲೊಬ್ಬ ತಂದೆ ಸ್ಟೋನ್ ವ್ಯಾಪಾರ ಮಾಡುವ ಮೂಲಕ ಮಗನ ಆಸೆಗಾಗಿ ಸಿನಿಮಾ ಮಾಡಿದ್ದಾರೆ.

‘19 ಏಜ್ ಈಸ್ ನಾನ್​ಸೆನ್ಸ್’

‘19 ಏಜ್ ಈಸ್ ನಾನ್​ಸೆನ್ಸ್’ ಎಂಬ ಟೈಟಲ್ ಮೂಲಕ ಈ ಸಿನಿಮಾ ರೆಡಿಯಾಗ್ತಿದೆ. ಲಹರಿ ವೇಲು ಹಾಗೂ ನಿರ್ಮಾಪಕ ಭಾ.ಮಾ.ಹರೀಶ್ ಈ ಸಿನಿಮಾದ ಧ್ವನಿ ಸುರುಳಿ ರಿಲೀಸ್ ಮಾಡಿ, ಹೊಸ ತಂಡಕ್ಕೆ ಶುಭಹಾರೈಸಿದ್ರು.

ಮನೆ ಮುಂದೆ ಕಲ್ಲಿನ ಕೆಲಸಗಳನ್ನು ಮಾಡುವ ವ್ಯಾಪಾರಿ ಎಸ್.ಲೋಕೇಶ್ ಮಗ ಮನುಷ್​ಗಾಗಿ ಈ ಸಿನಿಮಾ ಮಾಡಿದ್ದಾರಂತೆ. ಚಿತ್ರದಲ್ಲಿ ಮಧುಮಿತ ಮತ್ತು ಶ್ರೀ ಲಕ್ಷ್ಮೀ ಮಂಡ್ಯ ಅಭಿನಯಿಸಿದ್ದಾರೆ. ಅನು ಚಿತ್ರದಲ್ಲಿ ಖಳ ನಟನಾಗಿದ್ದ ಬಾಲು ಈ ಚಿತ್ರದಲ್ಲೂ ನಟಿಸಿದ್ದಾರೆ. 19 ರಿಂದ 25ರ ವಯೋಮಿತಿ ಇರುವ ಹರೆಯದ ವಯಸ್ಸಿನ ಹುಡುಗ, ಹುಡುಗಿಯರ ಜೀವನದಲ್ಲಿ ನಡೆಯುವ ಕಥೆ ಹೊತ್ತು‘19 ಏಜ್ ಈಸ್ ನಾನ್​ಸೆನ್ಸ್’ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಹಲವಾರು ಜನ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಸುರೇಶ್ ಗಿಣಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ವಿಕ್ಟರಿ ಕ್ಯಾಮರಾ ಕಣ್ಣಲ್ಲಿ ಚಿತ್ರ ಸರೆಯಾಗಿದೆ. ಸಿನಿಮಾ ನಿರ್ಮಾಣದ ಬಗ್ಗೆ ಅಷ್ಟೇನೂ ಗೊತ್ತಿರದ ಎಸ್.ಲೋಕೇಶ್, ಸ್ಟೋನ್ ವ್ಯಾಪಾರ ಮಾಡಿ ಮಗ ಮನುಷ್‌ಗಾಗಿ ಬರೋಬ್ಬರಿ 65 ಲಕ್ಷ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

‘19 ಏಜ್ ಈಸ್ ನಾನ್​ಸೆನ್ಸ್’ ಮುಂದಿನ ತಿಂಗಳು ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ.

ABOUT THE AUTHOR

...view details