ತಂದೆ ಹಾಗೂ ಮಗನ ನಡುವೆ ನಡೆದ ನಿಜ ಜೀವನ ಸಂಗತಿಗಳನ್ನು ಹೊತ್ತು ಕನ್ನಡ ಸಿನಿಮಾ ರಂಗದಲ್ಲಿ ಕಮಾಲ್ ಮಾಡಲು ಸಿದ್ದವಾಗಿದೆ '19 ಎಜ್ ಈಸ್ ನಾನ್ ಸೆನ್ಸ್'. ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಯು/ಎ ಅರ್ಹತಾ ಪತ್ರ ನೀಡಿದ್ದು ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ಅಪ್ಪ ಮಗನ ಕನಸಿನ ಚಿತ್ರ '19 ಏಜ್ ಈಸ್ ನಾನ್ ಸೆನ್ಸ್' ಗೆ U/A ಅರ್ಹತಾ ಪತ್ರ - ಕನ್ನಡ ಹೊಸ ನಿಸಿಮಾ 19 ಎಜ್ ಈಸ್ ನಾನ್ ಸೆನ್ಸ್ ಸುದ್ದಿ
ಚಿತ್ರ ನಿರ್ಮಾಪಕ ಎಸ್.ಲೋಕೇಶ್ ಹಾಗೂ ಅವರ ಪುತ್ರ ಮನುಷ್ ನಡುವೆ ನಡೆದ ಘಟನೆ ಸದ್ಯ '19 ಎಜ್ ಈಸ್ ನಾನ್ ಸೆನ್ಸ್' ಎಂಬ ಸಿನಿಮಾವಾಗಿದ್ದು, ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಯು/ಎ ಅರ್ಹತಾ ಪತ್ರ ನೀಡಿದೆ.
ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರವಾದರೂ ಕೂಡಾ ಇದು ಚಿತ್ರ ನಿರ್ಮಾಪಕ ಎಸ್. ಲೋಕೇಶ್ ಹಾಗೂ ಅವರ ಪುತ್ರ ಮನುಷ್ ನಡುವೆ ನಡೆದ ಘಟನೆಗೆ ಸಾಕ್ಷಿಯಾಗಿದೆಯಂತೆ. ಮಗ ಕಾಲೇಜಿಗೆ ಹೋಗ್ತೀನಿ ಅಂತ ಬೇರೆ ಕಡೆ ಸುತ್ತಾಡುವ ವಿಚಾರ ಗೊತ್ತಾದ ತಂದೆ, ಮಗನ ಆಸೆ ತಿಳಿದು ಸಿನಿಮಾ ನಿರ್ಮಾಣ ಕೆಲಸಕ್ಕೆ ಕೈ ಹಾಕಿದ್ದಾರೆ. ರಾಜೇಶ್ವರಿ ಫಿಲ್ಮ್ ಬ್ಯಾನರ್‌ನಡಿ ಚಿತ್ರೀಕರಣವಾಗಿ ಈಗ ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರ ಪಡೆದಿದೆ.
ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಗಿನಿ, ವೇಟ್ರಿ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ಕುಟ್ಟಿ ಸಂಗೀತ, ಶಿವು ಸಾಹಸ, ವಿ.ನಾಗೇಂದ್ರ ಪ್ರಸಾದ್ ಹಾಡುಗಳನ್ನು ರಚಿಸಿದ್ದಾರೆ. ಹದಿ ಹರೆಯದ ಪ್ರೀತಿ, ಮನಸಿನ ತಾಕಲಾಟ, ಆ್ಯಕ್ಷನ್ ವಿಚಾರಗಳನ್ನು ಈ ಚಿತ್ರದಲ್ಲಿ ಕಾಣಬಹುದು. ಇದು 19 ರಿಂದ 25 ವಯಸ್ಸಿನವರಿಗೆ ಹೇಳಿ ಮಾಡಿಸಿದ ಚಿತ್ರ ಅಂತಾರೆ ನಿರ್ದೇಶಕರು. ಮನುಷ್ ಜೊತೆ ನಾಯಕಿಯಾಗಿ ಮಧುಮಿತ ಕಾಣಿಸಿದ್ದಾರೆ. ಇನ್ನುಳಿದಂತೆ ಲಕ್ಷ್ಮಿ ಮಂಡ್ಯ, ಮೇಸ್ತ್ರಿ ಬಾಲು, ಸೌಭಾಗ್ಯ, ಕಾವ್ಯ ಪ್ರಕಾಶ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.