ಕರ್ನಾಟಕ

karnataka

ETV Bharat / sitara

ಅಪ್ಪಾಜಿಗೆ ಒಮ್ಮೆ ಜೀನ್ಸ್​ ತೊಡಿಸಿದ್ದೆ... ಅಣ್ಣಾವ್ರನ್ನು ನೆನೆದು ಕಣ್ಣೀರಿಟ್ಟ ಶಿವಣ್ಣ - undefined

ಇಂದು ರಾಜಕುಮಾರ್ ಅವರ 13 ನೇ ಪುಣ್ಯತಿಥಿ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಣ್ಣಾವ್ರ ಹಾಗೂ ಪಾರ್ವತಮ್ಮನವರ ಸ್ಮಾರಕಕ್ಕೆ ರಾಜ್ ಕುಟುಂಬದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಅಣ್ಣಾವ್ರ 13ನೇ ಪುಣ್ಯತಿಥಿ

By

Published : Apr 12, 2019, 2:27 PM IST

Updated : Apr 12, 2019, 3:34 PM IST

ಬೆಂಗಳೂರು:ವರನಟ ಡಾ.ರಾಜ್ ಕುಮಾರ್ ಅವರ 13ನೇ ಪುಣ್ಯತಿಥಿ ನಿಮಿತ್ತ ಇಂದು ಕಂಠೀರವ ಸ್ಟೂಡಿಯೋದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿಯ ಅಣ್ಣಾವ್ರ ಹಾಗೂ ಪಾರ್ವತಮ್ಮನವರ ಸ್ಮಾರಕಗಳಿಗೆ ಅವರ ಕುಟುಂಬದವರು ಪುಪ್ಪ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ನಟ ಶಿವಣ್ಣ, ರಾಘಣ್ಣ 'ಅಪ್ಪನ ಅಂಗಿ' ಸಿನಿಮಾ ಮಾಡ್ತಿದ್ದಾರೆ. ಅಪ್ಪನಿಗೆ ಬಿಳಿ ಬಟ್ಟೆ ಅಂದ್ರೆ ತುಂಬಾ ಅಷ್ಟ. ಅವರಿಗೆ ಒಂದು ಸಾರಿ ಜೀನ್ಸ್ ಪ್ಯಾಂಟ್ ತೊಡಿಸಿ ಏರ್​ಪೋರ್ಟ್​​​ಗೆ ಕರೆದುಕೊಂಡು ಹೋಗಿದ್ದೆ ಎಂದು ಸ್ಮರಿಸಿದರು. ಅಲ್ಲದೆ ಇಂದಿರಾಗಾಂಧಿ ಹಾಗೂ ಡಾ.ರಾಜ್ ಚುನಾವಣಾ ಸಂದರ್ಭವನ್ನ ನೆನೆದ ಶಿವಣ್ಣ, ನಾವು ಅಗ ಚಿಕ್ಕವರು. ಅಪ್ಪಾಜಿ ಶೂಟಿಂಗ್​ಗೆ ಬ್ರೇಕ್ ಕೊಟ್ಟು ಯಾವುದೋ ಹಳ್ಳಿಗೆ ಹೋಗಿದ್ರು. ಈ ಬಗ್ಗೆ ನಮಗೆ ಅಷ್ಟೊಂದು ನೆನಪಿಲ್ಲ.ಆದರೆ, ಅಪ್ಪಾಜಿಗೆ ರಾಜಕೀಯದ ಬಗ್ಗೆ ಆಸಕ್ತಿ ಇರಲಿಲ್ಲ ಎಂದರು.

ನಂತರ ಮಾತಮಾಡಿದ ಅಪ್ಪು, ನಮಗೆ ತುಂಬಾ ಒಳ್ಳೆ‌ಯ ಜೀವನ‌ ತಂದೆ-ತಾಯಿ‌ಕೊಟ್ಟಿದ್ದಾರೆ. ಅವ್ರು ನೀಡಿದ ಪ್ರೀತಿ-ವಾತ್ಸಲ್ಯ ಎಂದೂ ಮರೆಯಲು ಸಾಧ್ಯವಿಲ್ಲ. ಒಳ್ಳೆಯ ಕಥೆ ಸಿಕ್ಕರೆ ನಾವು ಮೂವರು ಸಹೋದರರು ಪಿಆರ್​​ಕೆ ಪ್ರೊಡಕ್ಷನ್​​ನಲ್ಲಿ ‌ನಟಿಸುತ್ತೇವೆ ಎಂದರು.

ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಪೂಜೆ

ಕಳೆದ ವರ್ಷ ಅಮ್ಮನ ಮನೆ ಸಿನಿಮಾ ಮಾಡಿ ಅಮ್ಮನಿಗೆ ಅರ್ಪಸಿದ್ದೆ. ಈ ವರ್ಷ 'ಅಪ್ಪನ ಅಂಗಿ' ಅನ್ನೋ ಸಿನಿಮಾ ಅಪ್ಪಾಜಿಗೆ ಅರ್ಪಿಸುತ್ತಿದ್ದೇನೆ. ಈ ಚಿತ್ರ ಇಂದು ಲಾಂಚ್ ಆಗಿದೆ ಎಂದು ರಾಘಣ್ಣ ಹೇಳಿದ್ರು.

ಇನ್ನು ರಾಜ್ ಪುಣ್ಯ ಸ್ಮರಣೆಗೆ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ವಿಕಲಚೇತನರಿಗೆ ವ್ಹೀಲ್ ಚೇರ್ ವಿತರಿಸುವ ಮೂಲಕ ಅಣ್ಣಾವ್ರ ಸ್ಮಾರಕ ನೋಡುವುದಕ್ಕೆ ಅನುಕೂಲ ಮಾಡಿಕೊಟ್ಟರು. ಬೆಳಗ್ಗೆಯಿಂದಲೇ ಅಣ್ಣಾವ್ರ ಸಮಾಧಿ ಬಳಿಗೆ ಸಾವಿರಾರು ಅಭಿಮಾನಿಗಳು ಆಗಮಿಸಿ ನೆಚ್ಚಿನ ನಟನಿಗೆ ಪೂಜೆ ಸಲ್ಲಿಸುತ್ತಿದ್ದರು.

Last Updated : Apr 12, 2019, 3:34 PM IST

For All Latest Updates

TAGGED:

ABOUT THE AUTHOR

...view details