ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಆಗಿ ಬಾಕ್ಸ್ ಆಫೀಸ್ನ್ನು ಧೂಳೆಬ್ಬಿಸ್ತಿದೆ. ರಿಲೀಸ್ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರ ಸಿನಿಮಾ, ಫಸ್ಟ್ ಡೇ 14 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಸೌಂಡ್ ಮಾಡಿತ್ತು.
100 Cr ಕೇಕ್ ಕತ್ತರಿಸಿದ ಚಾಲೆಂಜಿಂಗ್ ಸ್ಟಾರ್: ಯಾಕೆ ಗೊತ್ತಾ? - ಕುರುಕ್ಷೇತ್ರ
ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಇಡೀ ಚಿತ್ರ ತಂಡಕ್ಕೆ ಕೀರ್ತಿ ತಂದುಕೊಟ್ಟಿದೆ. ಇದೀಗ ಚಿತ್ರ 25ನೇ ದಿನಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳು ದಾಸನಿಂದ 100 Cr ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಇದೀಗ 25ನೇ ದಿನದತ್ತ ಮುನ್ನಗ್ಗುತ್ತಿರುವ ಕುರುಕ್ಷೇತ್ರ ಸಿನಿಮಾ, ದರ್ಶನ್ ಸಿನಿಮಾ ಕರಿಯರ್ನಲ್ಲಿ ಹೊಸ ಅಧ್ಯಾಯ ಬರೆದಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಹೆಸರಿಗೆ ತಕ್ಕಂತೆ ಕುರುಕ್ಷೇತ್ರ ಸಿನಿಮಾ ಹೊಸ ರೆಕಾರ್ಡ್ ಬರೆದಿದೆ. ಬಹುಭಾಷೆಯಲ್ಲಿ ತೆರೆಕಂಡಿರೋ ಕುರುಕ್ಷೇತ್ರ, ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 100 ಕೋಟಿ ಕ್ಲಬ್ ಸೇರುವತ್ತ ಸಾಗಿದೆ.
ಈ ಖುಷಿಯನ್ನ ಬೆಂಗಳೂರಿನ ಫ್ಯಾನ್ಸ್ ಮತ್ತಷ್ಟು ದುಪ್ಪಟ್ಟು ಮಾಡಿದ್ದಾರೆ. ಕುರುಕ್ಷೇತ್ರ ಚಿತ್ರ 100 ಕೋಟಿ ಕ್ಲಬ್ ಸೇರುತ್ತಿರುವ ಹಿನ್ನೆಲೆ 100 ಕೆಜಿ ಕೇಕ್ಗೆ 100 Cr ಅಂತಾ ಬರೆಸಿರೋ ಕೇಕ್ ದುರ್ಯೋಧನನ ಕೈಯಿಂದ ಕತ್ತರಿಸಿ ಸಂಭ್ರಮಿಸಿದ್ದಾರೆ.