ಸ್ಯಾಂಡಲ್ವುಡ್ನ ಎವರ್ ಗ್ರೀನ್ ನಟ, ನಿರ್ದೇಶಕ ರಮೇಶ್ ಅರವಿಂದ್ ಬಟರ್ ಪ್ಲೈ ಚಿತ್ರಕ್ಕೆ ಸ್ಮಾಲ್ ಬ್ರೇಕ್ ಹಾಕಿ '100' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬರ್ತ್ ಡೇ ಪಾರ್ಟಿ ಸಾಂಗ್ ಶೂಟಿಂಗ್ ಕಂಪ್ಲೀಟ್ ಮಾಡುವ ಮೂಲಕ ಚಿತ್ರದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಟ ರಮೇಶ್ ಅರವಿಂದ್ ಚಿತ್ರದಲ್ಲಿ ನಟಿಸಿದ ಹಾಗೂ ಕೆಲಸ ಮಾಡಿದ ತಂತ್ರಜ್ಞರಿಗೆ ಧನ್ಯವಾದ ತಿಳಿಸಿದ್ರು. ಹಾಗೂ ಚಿತ್ರದ ಶೂಟಿಂಗ್ನಲ್ಲಿ ಏನು ಕೊರತೆ ಬಾರದ ರೀತಿ ಸಹಕಾರ ನೀಡಿದ ನಿರ್ಮಾಪಕರಿಗೂ ಧನ್ಯವಾದ ತಿಳಿಸಿದ್ರು.
100 ಸಿನಿಮಾದ ಸಾಂಗ್ ಶೂಟಿಂಗ್ ಇನ್ನು ರವಿ ಬಸ್ರೂರ್ ಕಂಪೋಸ್ ಮಾಡಿರುವ ಪಾರ್ಟಿ ಸಾಂಗ್ನಲ್ಲಿ ರಮೇಶ್ ಅರವಿಂದ್, ಡಿಂಪಲ್ ಕ್ವೀನ್ ರಚಿತ ರಾಮ್, ಹಾಗು ಮಲೆಯಾಳಿ ಕುಟ್ಟಿ ಪೂರ್ಣ ಧನು ಹೆಜ್ಜೆ ಹಾಕಿದ್ದಾರೆ. ಈ 100 ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಜೊತೆಗೆ, ಸಿನಿಮಾದಲ್ಲಿ ಸೈಬರ್ ಪೊಲೀಸ್ ಅಫೀಸರ್ 'ವಿಷ್ಣು' ಆಗಿ ಕಾಣಿಸಿದ್ದು, ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡುವ ಕಿಡಿಗೇಡಿಗಳಿಗೆ ಬ್ರೇಕ್ ಹಾಕುವ ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದಾರೆ.
ಚಿತ್ರದಲ್ಲಿ ರಚಿತರಾಮ್ ರಮೇಶ್ ಅರವಿಂದ್ ತಂಗಿ ಪಾತ್ರದಲ್ಲಿ ಕಾಣಿಸಿದ್ದು, ಮೊದಲ ಬಾರಿಗೆ ವಕೀಲೆಯಾಗಿ ನಟಿಸಿದ್ದಾರೆ.