ಕರ್ನಾಟಕ

karnataka

ETV Bharat / sitara

ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ '100' ಚಿತ್ರದ ಪಾರ್ಟಿ ಹಾಡು ಬಿಡುಗಡೆ - Ramesh aravind new movie 100

ರಮೇಶ್​ ಅರವಿಂದ್, ರಚಿತಾ ರಾಮ್ , ಪೂರ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ '100' ಸಿನಿಮಾದ ಪಾರ್ಟಿ ಹಾಡು ನಾಳೆ ಬಿಡುಗಡೆಯಾಗಲಿದೆ. ನಾಳೆ ರಮೇಶ್ ಅರವಿಂದ್ 56 ನೇ ವಸಂತಕ್ಕೆ ಕಾಲಿಡುತ್ತಿದ್ದು ಹುಟ್ಟುಹಬ್ಬದ ವಿಶೇಷವಾಗಿ ಈ ಹಾಡು ಬಿಡುಗಡೆಯಾಗುತ್ತಿದೆ.

100 movie party song
ರಮೇಶ್ ಅರವಿಂದ್

By

Published : Sep 9, 2020, 1:32 PM IST

ಸಿನಿಮಾ ಸೆಲಬ್ರಿಟಿಗಳ ಹುಟ್ಟುಹಬ್ಬಕ್ಕೆ ಅವರ ಹೊಸ ಸಿನಿಮಾ ಘೋಷಣೆಯಾಗಲಿ, ಟೀಸರ್​, ಟ್ರೇಲರ್ ಬಿಡುಗಡೆಯಾಗಲಿ ಅಥವಾ ಹೊಸ ಸಿನಿಮಾ ಹಾಡುಗಳನ್ನು ಬಿಡುಗಡೆ ಮಾಡುವುದು ಸಹಜ. ಇದೀಗ ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಕೂಡಾ '100' ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.

ರಮೇಶ್ ಅರವಿಂದ್

ಸೆಪ್ಟೆಂಬರ್​ 10 ರಂದು ರಮೇಶ್ ಅರವಿಂದ್ ಹುಟ್ಟುಹಬ್ಬ. ಸರಳ ಸ್ವಭಾವದ ರಮೇಶ್ ಅರವಿಂದ್ ನಟ, ನಿರ್ದೇಶಕ, ನಿರೂಪಕರಾಗಿ ಕೂಡಾ ಹೆಸರು ಮಾಡಿದವರು. ಇಂಜಿನಿಯರಿಂಗ್ ಮುಗಿಸಿ 'ಐ ಲೈಕ್ ಸೌಂಡ್ ಆಫ್​ ಕ್ಲಾಪ್​​​, ನಾಟ್ ಮೆಷಿನ್ಸ್​​​​' ಎಂದು ಇಂಜಿನಿಯರಿಂಗ್ ವೃತ್ತಿಗೆ ಹೋಗದೆ ಚಿತ್ರರಂಗಕ್ಕೆ ಬಂದವರು. ತಮ್ಮ ಆಪ್ತ ಸ್ನೇಹಿತ, ತಮಿಳಿನ ಖ್ಯಾತ ನಟ ಕಮಲ್​ ಹಾಸನ್ ಅವರನ್ನು ನಾಯಕನನ್ನಾಗಿಸಿ 'ಉತ್ತಮ ವಿಲನ್'​​ನಂತ ಚಿತ್ರವನ್ನು ನಿರ್ದೇಶಿಸಿದವರು ರಮೇಶ್ ಅರವಿಂದ್. ನಾಳೆ ರಮೇಶ್ ಅರವಿಂದ್ 56ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಅವರು ಕುಟುಂದೊಂದಿಗೆ ಬಹಳ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಪಾರ್ಟಿ ಹಾಡು ಬಿಡುಗಡೆ

ರಮೇಶ್ ಅರವಿಂದ್ 56ನೇ ಹುಟ್ಟುಹಬ್ಬದ ವಿಶೇಷವಾಗಿ ಅವರೇ ನಿರ್ದೇಶಿಸಿ ಅಭಿನಯಿಸುತ್ತಿರುವ '100' ಚಿತ್ರದ ಹಾಡೊಂದು ಬಿಡುಗಡೆಯಾಗುತ್ತಿದೆ. ದಿ ಬೀಟ್ಸ್ ಆಡಿಯೋ ಸಂಸ್ಥೆ ಈ ಪಾರ್ಟಿ ಹಾಡನ್ನು ಹೊರತರುತ್ತಿದೆ. ಚಿತ್ರದಲ್ಲಿ ರಮೇಶ್ ಅರವಿಂದ್, ಪೂರ್ಣ, ರಚಿತಾ ರಾಮ್, ಅಮಿತ ರಂಗನಾಥ್, ಶಿಲ್ಪಾ ಶೆಟ್ಟಿ, ಸುಕನ್ಯ ಗಿರೀಶ್, ಲಕ್ಷ್ಮಿ ಹಾಗೂ ಇನ್ನಿತರರು ನಟಿಸಿದ್ದಾರೆ.

'100' ಚಿತ್ರದ ಪಾರ್ಟಿ ಹಾಡು

ಸೂರಜ್ ಪ್ರೊಡಕ್ಷನ್ಸ್​​​ ಬ್ಯಾನರ್​​​​​ ಅಡಿಯಲ್ಲಿ ಎಂ. ರಮೇಶ್ ರೆಡ್ಡಿ '100' ಚಿತ್ರವನ್ನು ನಿರ್ಮಿಸುತ್ತಿದ್ದು ಇದು ತಮಿಳಿನ 'ತಿರುಟ್ಟು ಪಯಲೆ' ಚಿತ್ರದ ಸ್ಪೂರ್ತಿಯಿಂದ ತಯಾರಾಗುತ್ತಿರುವ ಚಿತ್ರ. ರಮೇಶ್ ರೆಡ್ಡಿ ಈ ಹಿಂದೆ ಉಪ್ಪು ಹುಳಿ ಖಾರ, ಪಡ್ಡೆ ಹುಲಿ ಸಿನಿಮಾಗಳನ್ನು ನಿರ್ಮಾಣ ಮಾಡಿದವರು. ಆಕಾಶ್ ಶ್ರೀವತ್ಸ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ರವಿ ಬಸ್ರೂರ್ ಸಂಗೀತ ಒದಗಿಸಿದ್ದಾರೆ.

ABOUT THE AUTHOR

...view details