ತಮಿಳು ನಟ ಅಜಿತ್ ನಟನೆ ಜೊತೆಗೆ ತಮ್ಮ ಸರಳತೆಯಿಂದಲೂ ಹೆಸರು ಮಾಡಿರುವ ವ್ಯಕ್ತಿ. ಇಷ್ಟು ಮಾತ್ರವಲ್ಲ ಅಜಿತ್ ಆಗಾಗ ಜನರಿಗೆ ಸಹಾಯ ಮಾಡುತ್ತ ಗಮನ ಸೆಳೆಯುತ್ತಿದ್ದಾರೆ. ಸದ್ಯ ಹೈದ್ರಾಬಾದ್ನಲ್ಲಿ ಇಡ್ಲಿ ಮಾರುವ ವ್ಯಕ್ತಿಗೆ ಒಂದು ಲಕ್ಷ ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಅಜಿತ್ ಅಭಿನಯದ 'ವಾಲಿಮಾ' ಸಿನಿಮಾದ ಚಿತ್ರೀಕರಣ ಹೈದ್ರಾಬಾದ್ನಲ್ಲಿ ನಡೆಯುತ್ತಿದೆ. ಶೂಟಿಂಗ್ ನಡೆಯುವ ಸ್ಥಳದ ಪಕ್ಕದಲ್ಲೇ ಒಬ್ಬ ವಯಸ್ಸಾದ ವ್ಯಕ್ತಿ ಇಡ್ಲಿ ಮಾರುತ್ತಿದ್ದರು. ಇಲ್ಲಿಗೆ ಅನೇಕರು ಬಂದು ಇಡ್ಲಿ ಸವಿದು ಹೋಗುತ್ತಿದ್ರು.
ಒಮ್ಮೆ ಅಜಿತ್ ಕೂಡ ಆ ಅಂಗಡಿಗೆ ಹೋಗಿ ಇಡ್ಲಿ ತಿಂದ ರುಚಿಯನ್ನು ಮೆಚ್ಚಿ ನಂತರ ಶೂಟಿಂಗ್ ಮುಗಿದ ಮೇಲೆ ಅಲ್ಲಿಗೇ ಹೋಗಿ ಇಡ್ಲಿ ತಿನ್ನುತ್ತಿದ್ದರಂತೆ.
ಇದಾದ ಮೇಲೆ ಒಂದು ದಿನ ಆ ಇಡ್ಲಿ ಮಾರುವ ವ್ಯಕ್ತಿಯ ಕುಟುಂಬದ ಬಗ್ಗೆ ತಿಳಿದ ಅಜಿತ್ ಅವರಿಗೆ ಒಂದು ಲಕ್ಷ ಹಣ ನೀಡಿದ್ದಾರೆ. ಇಡ್ಲಿ ಮಾರುವ ವ್ಯಕ್ತಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಆತನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಜಿತ್ ಹಣದ ಸಹಾಯ ಮಾಡಿದ್ದಾರೆ.
ಇದೀಗ ಅಜಿತ್ ಮಾಡಿರುವ ಈ ಮಾನವೀಯ ಕೆಲಸ ಎಲ್ಲೆಡೆ ಪ್ರಶಂಸೆಗೆ ಕಾರಣವಾಗಿದೆ. ಅಲ್ಲದೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಹಾಯಾಸ್ತಕ್ಕೆ ಜೈ ಎನ್ನುತ್ತಿದ್ದಾರೆ.