ಕರ್ನಾಟಕ

karnataka

ETV Bharat / sitara

2022ರ ಏಪ್ರಿಲ್‌ನಲ್ಲಿ ಸಿನಿ ಪ್ರಿಯರಿಗೆ ಹಬ್ಬದೂಟ; ಕೆಜಿಎಫ್‌-2, ಲಾಲ್ ಸಿಂಗ್ ಛಡ್ಡಾ ನಡುವಿನ ರೇಸ್‌ಗೆ RRR ಎಂಟ್ರಿ! - ಕೋವಿಡ್‌ ಹೆಚ್ಚಳದಿಂದ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ಏಪ್ರಿಲ್‌ಗೆ ಮುಂದೂಡಿಕೆ

Upcoming films in cinema industry in 2022: ಈ ವರ್ಷದ ಏಪ್ರಿಲ್‌ನಲ್ಲಿ ಬಾಲಿವುಡ್‌, ಸ್ಯಾಂಡಲ್‌ವುಡ್‌, ಟಾಲಿವುಡ್‌ ಹಾಗೂ ಕಾಲಿವುಡ್‌ನ ಸ್ಟಾರ್‌ ನಟರ ಸಿನಿಮಾಗಳು ತೆರೆಗೆ ಬರಲು ಪೈಪೋಟಿ ನಡೆಸುತ್ತಿವೆ. ಇದರಲ್ಲಿ ಕನ್ನಡದ ಕೆಜಿಎಫ್‌ ಚಾಪ್ಟರ್‌ 2 ಬಹು ನಿರೀಕ್ಷಿತ ಸಿನಿಮಾವಾಗಿದ್ದು, ಬಾಲಿವುಡ್‌ನ ಆಮಿರ್‌ ಖಾನ್‌ ನಟನೆಯ ಲಾಲ್ ಸಿಂಗ್ ಛಡ್ಡಾ ರಿಲೀಸ್‌ ಆಗುತ್ತಿದೆ. ಕೋವಿಡ್‌ ಹೆಚ್ಚಾಗುತ್ತಿರುವುದರಿಂದ ಜನವರಿ 7 ರಂದು ಬಿಡುಗಡೆಯಾಗಬೇಕಿದ್ದ ಆರ್‌ಆರ್‌ಆರ್‌ ಕೂಡ ಏಪ್ರಿಲ್‌ ತಿಂಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ ಎನ್ನಲಾಗಿದೆ.

Yash Amir Khan Mahesh Babu films releasing in april, 2022
2022ರ ಏಪ್ರಿಲ್‌ನಲ್ಲಿ ಸಿನಿ ಪ್ರಿಯರಿಗೆ ಹಬ್ಬದೂಟ; ಕೆಜಿಎಫ್‌-2, ಲಾಲ್ ಸಿಂಗ್ ಛಡ್ಡಾ ನಡುವಿನ ರೇಸ್‌ಗೆ RRR ಎಂಟ್ರಿ..!

By

Published : Jan 1, 2022, 3:47 PM IST

ಬೆಂಗಳೂರು: 2022ನೇ ವರ್ಷ ಭಾರತೀಯ ಚಿತ್ರರಂಗದ ಪಾಲಿಗೆ ಅದೃಷ್ಟದ ವರ್ಷ ಆಗುವ ಲಕ್ಷಣಗಳು ಕಾಣುತ್ತಿವೆ. ಯಾಕೆಂದರೆ ಕನ್ನಡ, ತೆಲುಗು, ತಮಿಳು ಹಾಗು ಹಿಂದಿ ಚಿತ್ರರಂಗದ ಬಹು ಕೋಟಿ ವೆಚ್ಚದ ಬಿಗ್ ಸ್ಟಾರ್‌ಗಳ ಸಿನಿಮಾಗಳು ಏಪ್ರಿಲ್‌ನಲ್ಲಿ ಬಿಡುಗಡೆ ಆಗುವ ರೇಸ್‌ನಲ್ಲಿ ಇವೆ. ಯಾವೆಲ್ಲ ಸ್ಟಾರ್ ಸಿನಿಮಾಗಳು ಏಪ್ರಿಲ್‌ ತಿಂಗಳಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್‌ ಕ್ಲ್ಯಾಶ್‌ ಆಗುತ್ತವೆ ಎಂಬುದರ ಮಾಹಿತಿ ಇಲ್ಲಿದೆ.

ಭಾರತೀಯ ಚಿತ್ರರಂಗ ಅಲ್ಲದೇ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಕನ್ನಡ ಸಿನಿಮಾ ಕೆಜಿಎಫ್. ಡಿಸೆಂಬರ್ 2018ರ 21 ರಂದು ಕನ್ನಡ ಚಿತ್ರರಂಗದ ಪಾಲಿಗೆ ಅದು ಮಹತ್ವದ ದಿನ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ತೆರೆಕಂಡ ದಿನ ರಾಕಿಂಗ್ ಸ್ಟಾರ್ ಆಗಿದ್ದ ಯಶ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಚಿತ್ರ. ಅದೇ ದಿನ‌ ಬಾಲಿವುಡ್‌ನಲ್ಲಿ ಶಾರುಖ್ ಖಾನ್‌ ಅಭಿನಯದ ಬಹುನಿರೀಕ್ಷಿತ ಜೀರೋ ಸಿನಿಮಾ, ಕೆಜಿಎಫ್ ಚಿತ್ರದ ಎದುರು ತೆರೆಕಂಡಿತ್ತು. ಆದರೆ ಈ ಎರಡು ಸಿನಿಮಾಗಳ ಮಧ್ಯೆ ಬಾಕ್ಸ್ ಆಫೀಸ್‌ ಕ್ಲ್ಯಾಶ್‌ ಆಗಿತ್ತು.

ಅಂದು ಕೆಜಿಎಫ್‌ ಸಿನಿಮಾ ಎದುರು ಜೀರೋ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಡಲ್ ಹೊಡೆದಿತ್ತು. ಕೆಜಿಎಫ್‌ ಸಿನಿಮಾದ ಬಾಕ್ಸ್ ಆಫೀಸ್‌ ಕದನದಲ್ಲಿ ಜೀರೋ ಸೋಲುಂಡಿತ್ತು. 200 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ವಿಶ್ವದಾದ್ಯಂತ 180 ಕೋಟಿ ರೂಪಾಯಿ ಗಳಿಸುವಲ್ಲಿ ಸುಸ್ತು ಹೊಡೆದಿತ್ತು. ಆದರೆ ಅಂದಾಜು 80 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾದ ಕೆಜಿಎಫ್‌‌ ಸಿನಿಮಾವು 250 ರಿಂದ 300 ಕೋಟಿ ರೂಪಾಯಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ಮೂಲಕ ಶಾರುಖ್ ಖಾನ್ ಜೀರೋ ಸಿನಿಮಾ ಸೋಲು ಕಂಡಿತ್ತು. ಇದರಿಂದ ಶಾರುಖ್ ಖಾನ್ ಸಿನಿಮಾದಿಂದ ಕೊಂಚ ದೂರ ಉಳಿದಿದ್ದರು.

ಕೆಜಿಎಫ್‌ ಚಾಪ್ಟರ್‌-2, ಲಾಲ್‌ ಸಿಂಗ್‌ ಛಡ್ಡಾ ನಡುವೆ ಪೈಪೋಟಿ!

ಈಗ ಯಶ್ ಅಭಿನಯದ ಕೆಜಿಎಫ್‌ ಚಾಪ್ಟರ್ 2 ಸಿನಿಮಾ ಎದುರು ಆಮಿರ್ ಖಾನ್ ಸಿನಿಮಾ ಬಿಡುಗಡೆ ಆಗುತ್ತಿದೆ. ಸದ್ಯ ಯಶ್ ನಟನೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನೂರಾರು ಕೋಟಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಬಾಲಿವುಡ್‌ನಲ್ಲೂ ಕೆಜಿಎಫ್ 2, ಬಗ್ಗೆ ದೊಡ್ಡ ಹೈಪ್ ಕ್ರಿಯೇಟ್ ಆಗಿದೆ. 2022ರ ಏಪ್ರಿಲ್‌ 14ರಂದು ಸಿನಿಮಾವನ್ನು ತೆರೆಗೆ ತರುವುದಕ್ಕೆ ನಿರ್ಮಾಪಕರು ಡೇಟ್ ಫಿಕ್ಸ್ ಮಾಡಿದ್ದಾರೆ. ಆದರೆ ಅದೇ ದಿನ ಆಮಿರ್ ಖಾನ್‌ರ ಬಹುನಿರೀಕ್ಷಿತ ಲಾಲ್ ಸಿಂಗ್ ಛಡ್ಡಾ ಸಿನಿಮಾ ಸಹ ತೆರೆಗೆ ಬರಲಿದೆ. ಎರಡೂ ಕೂಡ ದೊಡ್ಡ ಸಿನಿಮಾಗಳಾಗಿರುವುದರಿಂದ ಏಪ್ರಿಲ್ 14ರಂದು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕ್ಲ್ಯಾಶ್‌ ಆಗುವ ಸಾಧ್ಯೆತಯನ್ನು ತಳ್ಳಿಹಾಕುವಂತಿಲ್ಲ. ಈ ಬಾರಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.

ಏಪ್ರಿಲ್ ತಿಂಗಳಲ್ಲಿ ಈ ಎರಡು ಸಿನಿಮಾಗಿಂತ ಮುಂಚಿತವಾಗಿ ಸ್ಟೈಲಿಷ್ ಸ್ಟಾರ್ ಮಹೇಶ್​ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಏಪ್ರಿಲ್ 1ಕ್ಕೆ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಈ ಸಿನಿಮಾ ಬಳಿಕ ದಳಪತಿ ವಿಜಯ್ ಅಭಿನಯದ ಬೀಸ್ಟ್​ ಸಿನಿಮಾ ತಂಡ ಹೊಸ ಪೋಸ್ಟರ್​ ರಿಲೀಸ್​ ಮಾಡಿದೆ. ಈ ಪೋಸ್ಟರ್​ನಲ್ಲಿ ಏಪ್ರಿಲ್​ನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡುವ ಬಗ್ಗೆ ತಂಡ ಅನೌನ್ಸ್​ ಮಾಡಿದೆ. ಆದರೆ ಏಪ್ರಿಲ್‌ನಲ್ಲಿ ಯಾವ ದಿನಾಂಕ ಅನ್ನೋದನ್ನ ಮಾತ್ರ ತಿಳಿಸಿಲ್ಲ.

ಏಪ್ರಿಲ್‌ ರೇಸ್‌ನಲ್ಲಿ ಆರ್‌ಆರ್‌ಆರ್‌...
ಈ ಸಿನಿಮಾಗಳ ಮಧ್ಯೆ ಮತ್ತೊಂದು ಬಿಗ್ ಬಜೆಟ್ ಹಾಗೂ ಬಿಗ್ ಸ್ಟಾರ್ ಸಿನಿಮಾವೊಂದು ಹೊಸ‌ ಸೇರ್ಪಡೆ ಆಗುತ್ತಿದೆ. ಅದುವೇ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ನಿರ್ದೇಶನದ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯದ ಹೈ ವೋಲ್ಟೇಜ್ ಸಿನಿಮಾ ಆರ್‌ಆರ್‌ಆರ್‌ ಚಿತ್ರ. ಹೌದು, ಜನವರಿ 7ಕ್ಕೆ ವಿಶ್ವದಾದ್ಯಂತ ರಿಲೀಸ್​ಗೆ ಸಜ್ಜಾಗಿದ್ದ ಆರ್‌ಆರ್‌ಆರ್ ಸಿನಿಮಾ ಬಿಡುಗಡೆ ಡೇಟ್ ಅನ್ನು ಮುಂದೂಡಲಾಗಿದೆ. ದೇಶದೆಲ್ಲೆಡೆ ಕೊರೊನಾ ಹಾಗೂ ಒಮಿಕ್ರಾನ್ ಹೆಚ್ಚಾಗುತ್ತಿರುವುದರಿಂದ ಚಿತ್ರತಂಡ ಜನವರಿ ಬದಲು ಏಪ್ರಿಲ್ ವೇಳೆಗೆ ಆರ್‌ಆರ್‌ಆರ್‌ ಬಿಡುಗಡೆ ಮಾಡಲು ಮುಂದಾಗಿದೆಯಂತೆ. ಹೀಗಾಗಿ ಏಪ್ರಿಲ್‌‌‌ ತಿಂಗಳಲ್ಲಿ ಸ್ಟಾರ್ ನಟರ ಸಿನಿಮಾ ಧಮಾಕ ನಡೆಯಲಿದೆ. ಇದರಲ್ಲಿ ಯಾವ ಯಾವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಲಿವೆ ಅನ್ನೋದು, ಬಿಡುಗಡೆ ಬಳಿಕವೇ ಗೊತ್ತಾಗಲಿದೆ.

ಇದನ್ನೂ ಓದಿ:ಮಾರಿಷಸ್‌ನಲ್ಲಿ ಮೊದಲ ಹಂತದ ಚಿತ್ರೀಕರಣ ಯಶಸ್ವಿ: ಚೆನ್ನೈಗೆ ವಾಪಸ್​​ ಆದ 'ಗೋಲ್‌ಮಾಲ್‌' ಚಿತ್ರ ತಂಡ

For All Latest Updates

TAGGED:

ABOUT THE AUTHOR

...view details