ಕರ್ನಾಟಕ

karnataka

ETV Bharat / sitara

'ದಸ್ವಿ' ಚಿತ್ರದ ಸೆಟ್​​ನಲ್ಲಿ ತೆಗೆದ ಫೋಟೋ ಹಂಚಿಕೊಂಡ ಯಾಮಿ ಗೌತಮ್​.. - ಹಾಸ್ಯಭರಿತ ಚಿತ್ರ ದಾಸ್ವಿ ಚಿತ್ರದಲ್ಲಿ ಯಾಮಿ

ದಸ್ವಿ ಚಿತ್ರದ ಸೆಟ್‌ನಲ್ಲಿ ತನ್ನ ಮೊದಲ ದಿನದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದಲ್ಲಿ ಜ್ಯೋತಿ ದೇಸ್ವಾಲ್ ಎಂಬ ಐಪಿಎಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದು, ಇದು ನನಗೆ ಹೆಮ್ಮೆ ಮತ್ತು ಗೌರವ ತಂದಿದೆ ಎಂದು ಬರೆಕೊಂಡು ಜತೆಗೆ ಫೋಟೋವೊಂದನ್ನು ಕೂಡ ಪೋಸ್ಟ್ ಮಾಡಿದ್ದಾರೆ..

ಯಾಮಿ ಗೌತಮ್​
Yami Gautam

By

Published : Feb 26, 2021, 12:45 PM IST

ಮುಂಬೈ:ಬಾಲಿವುಡ್​ ನಟಿ ಯಾಮಿ ಗೌತಮ್ ಹಾಸ್ಯಭರಿತ ದಸ್ವಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣದ ಮೊದಲ ದಿನದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ​​

ಇನ್‌ಸ್ಟಾಗ್ರಾಮ್​ನಲ್ಲಿ ಯಾಮಿ ಹಂಚಿಕೊಂಡಿರುವ ಫೋಟೋ

ಯಾಮಿ ಗೌತಮ್ ಸದ್ಯಕ್ಕೆ ದಸ್ವಿ ಚಿತ್ರದಲ್ಲಿ ಜ್ಯೋತಿ ದೇಸ್ವಾಲ್ ಎಂಬ ಪೊಲೀಸ್​ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಇನ್ನು, ತಾವು ಸೆಟ್​​ನಲ್ಲಿ ತೆಗೆದ ಫೋಟೋವನ್ನು ಯಾಮಿ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಖಡಕ್​​ ಅಧಿಕಾರಿಯಾಗಿ ಕಾಣಿಸಿದ್ದಾರೆ.

ಓದಿ: ಅಲ್ಲಿ ಆಗದಿರುವ ಸಮಸ್ಯೆ ಇಲ್ಲಿ ಏಕೆ....ಧ್ರುವ ಸರ್ಜಾ

ದಸ್ವಿ ಚಿತ್ರದ ಸೆಟ್‌ನಲ್ಲಿ ತನ್ನ ಮೊದಲ ದಿನದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದಲ್ಲಿ ಜ್ಯೋತಿ ದೇಸ್ವಾಲ್ ಎಂಬ ಐಪಿಎಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದು, ಇದು ನನಗೆ ಹೆಮ್ಮೆ ಮತ್ತು ಗೌರವ ತಂದಿದೆ ಎಂದು ಬರೆಕೊಂಡು ಜತೆಗೆ ಫೋಟೋವೊಂದನ್ನು ಕೂಡ ಪೋಸ್ಟ್ ಮಾಡಿದ್ದಾರೆ.

ಸಿನಿಮಾಗೆ ರಿತೇಶ್ ಷಾ ಚಿತ್ರಕಥೆ ಬರೆದಿದ್ದಾರೆ. ತುಷಾರ್ ಜಲೋಟಾ ನಿರ್ದೇಶನ ಮಾಡುತ್ತಿದ್ದಾರೆ. ನಿಮ್ರತ್ ಕೌರ್ ಮತ್ತು ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾದ ನಂತರ ಹಿಂದಿ ಮೀಡಿಯಂ​​​, ಆಂಗ್ರೆಜಿ ಮೀಡಿಯಂ ಮತ್ತು ಬಾಲಾ ಎಂಬ ಸಿನಿಮಾಗಳಲ್ಲಿ ನಟಿ ಯಾಮಿ ಗೌತಮ್​ ನಟಿಸಲಿದ್ದಾರೆ.

ABOUT THE AUTHOR

...view details