ಬಾಲಿವುಡ್ ನಟಿ ಯಾಮಿ ಗೌತಮ್ ಮತ್ತು ಉರಿ ಸಿನಿಮಾ ನಿರ್ದೇಶಕ ಆದಿತ್ಯ ಧರ್ ನಡುವಿನ ಪ್ರೇಮ ಪ್ರಣಯವು ಜೂನ್ 4 ರಂದು ಅವರು ತಮ್ಮ ವಿವಾಹದ ಕುರಿತು ಘೋಷಿಸುವವರೆಗೂ ಗುಟ್ಟಾಗಿಯೇ ಉಳಿದಿತ್ತು. ಯಾಮಿ ತನ್ನ ವೈಯಕ್ತಿಕ ಜೀವನವನ್ನು ಮಾಧ್ಯಮಗಳಿಂದ ದೂರ ಇಡುವಲ್ಲಿ ಯಶಸ್ವಿಯಾದರು. ಕೊರೊನಾ ಸಾಂಕ್ರಾಮಿಕದ ನಡುವೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಮದುವೆಗೆ ಯಾಮಿ ತನ್ನ ತಾಯಿಯ 33 ವರ್ಷದ ಸೀರೆಯನ್ನು ಧರಿಸಿದ್ದಳು ಮತ್ತು ಈ ವಿಶೇಷ ದಿನದಂದು ತನ್ನ ಸಹೋದರಿ ಸುರಿಲಿ ಗೌತಮ್ ಜೊತೆ ತನ್ನ ಮೇಕಪ್ ಮಾಡಿಕೊಂಡಳು. ಕೊರೊನಾ ಟೈಮ್ ಅಲ್ಲಿ ಮದುವೆಯಾದ ಸ್ಟಾರ್ ಜೋಡಿಗಳ ಪೈಕಿ ಯಾಮಿ ಗೌತಮ್ ಹಾಗೂ ಆದಿತ್ಯ ಧರ್ ಜೋಡಿ ಸಹ ಒಂದು. ಉರಿ ನಿರ್ದೇಶಕ ಆದಿತ್ಯ ಧರ್‌ನೊಂದಿಗೆ ಯಾಮಿ ತಮ್ಮ ಹುಟ್ಟೂರು ಹಿಮಾಚಲ ಪ್ರದೇಶದ ಬಿಲಾಸ್ಪುರ್‌ನಲ್ಲಿ ವಿವಾಹವಾಗಿದ್ದರು. ಇನ್ಸ್ಟಾಗ್ರಾಂನಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರೋದ್ಯಮದ ಸ್ನೇಹಿತರಿಗೆ ಈ ಜೋಡಿ ಅಚ್ಚರಿ ಮೂಡಿಸಿದ್ರು.
ಮದುವೆ ದಿನ ಯಾಮಿ ತನ್ನ ತಾಯಿಯ 33 ವರ್ಷದ ಹಿಂದಿನ ಸೀರೆಯನ್ನು ಧರಿಸಿದ್ದು ವಿಶೇಷ. ಹಾಗೆಯೇ ಅವರಿಗೆ ವಧುವಿನ ಅಲಂಕಾರ ಮಾಡಿದ್ದು ಮತ್ಯಾರೂ ಅಲ್ಲ ಅವರ ಪ್ರೀತಿಯ ಸಹೋದರಿ ಸುರಿಲಿ ಗೌತಮ್.
ಇತ್ತೀಚಿನ ವರ್ಚುಯಲ್ ಸಂದರ್ಶನದಲ್ಲಿ, ಪೂರ್ವಸಿದ್ಧತೆಯಿಲ್ಲದೇ ದಿಢೀರ್ ವಿವಾಹವಾಗಿದ್ದರ ಕುರಿತು ಕೇಳಿದಾಗ ಯಾಮಿ, ಇದು ಯೋಜಿತ ಮದುವೆಯಲ್ಲ ಆದರೆ , "ಇದು ಅತ್ಯಂತ ಸುಂದರ ರೀತಿಯಲ್ಲಿ ಜರುಗಿತು" ಎಂದು ಹೇಳಿಕೊಂಡಿದ್ದಾರೆ.