ಹೈದರಾಬಾದ್: ಬಾಲಿವುಡ್ ನಟಿ ಯಾಮಿ ಗೌತಮ್ ಕೆರಾಟೋಸಿಸ್ ಪೈಲಿಸ್ ಎನ್ನುವ ವಾಸಿಯಾಗದ ಚರ್ಮದ ಕಾಯಿಲೆಯೊಂದರಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಯಾವಾಗಲು ತೋಚಿದ್ದನ್ನು ಮುಲಾಜಿಲ್ಲದೇ ಹೇಳುವ ನಟಿ ಯಾಮಿ, ಬಹಳ ದಿನಗಳಿಂದ ನಾನು ಚರ್ಮದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಜಾಲತಾಣದಲ್ಲಿ ಪೋಸ್ಟ್ ಹಾಕಿ ಬಹಿರಂಗಪಡಿಸಿದ್ದಾರೆ. ನಟಿಯ ಈ ಬಹಿರಂಗ ಹೇಳಿಕೆಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶ್ಲಾಘಿಸಿದ್ದಾರೆ.
ಯಾಮಿ ಕೆಲವು ದಿನಗಳ ಹಿಂದೆ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ ಜೊತೆ ಮದುವೆಯಾಗುವುದಾಗಿ ಜಾಲತಾಣದಲ್ಲಿ ದಿಢೀರ್ ಘೋಷಣೆ ಮಾಡಿದ್ದಳು. ಅನ್ನಿಸಿದ್ದನ್ನು ಹಾಗೂ ಇದ್ದಿದ್ದನ್ನು ಇದ್ದಂಗೆ ಹೇಳುವ ಮೂಲಕ ಅಭಿಮಾನಿಗಳ ಪ್ರೀತಿಯನ್ನು ಹೆಚ್ಚಿಸಿಕೊಂಡಿದ್ದಳು.
ಮದುವೆ ಸಂಭ್ರಮದಲ್ಲಿ ನಟಿ ಯಾಮಿ ಗೌತಮ್ ಅದೇ ದಾರಿ ಅನುಸರಿಸುತ್ತಾ ಬಂದಿರುವ ಯಾಮಿ, ಈಗ ತಾವು ಒಂದು ಚರ್ಮದ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಇಂದು (ಸೋಮವಾರ) ಹೊಸ ಫೋಟೋಶೂಟ್ ಮಾಡಿಸಿಕೊಂಡಿರುವ ಯಾಮಿ, ಎಡಿಟ್ ಮಾಡದೇ ಇರುವ ಕೆಲವು ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸತ್ಯವನ್ನು ಹೇಳಲು ಧೈರ್ಯ ಮಾಡಿದ್ದೇನೆ. ನಾನು ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದೇನೆ. ಬಹಳ ವರ್ಷದಿಂದ ನಾನು ಇದನ್ನು ಅನುಭವಿಸಿಕೊಂಡು ಬರುತ್ತಿದ್ದೇನೆ ಎಂದು ಎಡಿಟ್ ಮಾಡದ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಲ್ಲದೇ ಸುದೀರ್ಘವಾದ ಟಿಪ್ಪಣಿಯನ್ನು ಬರೆದುಕೊಂಡಿದ್ದಾಳೆ.
ಇಷ್ಟು ದಿನಗಳ ತಾವು ಅನುಭವಿಸುತ್ತಿರುವ ಸಮಸ್ಯೆಯನ್ನು ಮುಚ್ಚಿಕೊಂಡು ಬಂದಿದ್ದರು. ಇನ್ನು ಮೇಲೆ ಮುಚ್ಚಿಡಬೇಕಾದ ಅವಶ್ಯಕತೆ ನನಗಿಲ್ಲ. ನನ್ನಲ್ಲಿ ಈಗ ಎಲ್ಲವನ್ನೂ ಎದುರಿಸುವ ಧೈರ್ಯ ಬಂದಿದೆ ಎಂದು ಬರೆದುಕೊಂಡಿದ್ದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.