ಬಾಲಿವುಡ್ ನಟಿ ದಿಯಾ ಮಿರ್ಜಾ ಇತ್ತೀಚೆಗಷ್ಟೇ ಮುಂಬೈ ಮೂಲದ ಉದ್ಯಮಿ ವೈಭವ್ ರೇಖಿ ಅವರನ್ನು ಮದುವೆಯಾಗಿದ್ದಾರೆ. 11 ವರ್ಷಗಳ ಹಿಂದೆ ಚಿತ್ರ ನಿರ್ಮಾಪಕ ಸಾಹಿಲ್ ಸಂಘಾರನ್ನು ಮದುವೆಯಾಗಿದ್ದ ದಿಯಾ ಮಿರ್ಜಾ, ಮೊದಲ ಪತಿಗೆ ವಿಚ್ಛೇದನ ನೀಡಿ ಇದೀಗ ವೈಭವ್ ರೇಖಿ ಅವರನ್ನು ಎರಡನೇ ಮದುವೆಯಾಗಿದ್ದಾರೆ. ದಿಯಾ ಮಿರ್ಜಾ ಹಾಗೂ ವೈಭವ್ ರೇಖಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ದಿಯಾ ಮಿರ್ಜಾ ಮದುವೆಯಲ್ಲಿ ಮಹಿಳಾ ಪೌರೋಹಿತ್ಯ...ಫೋಟೋ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ನೆಟಿಜನ್ಸ್ - Woman priest in Dia mirja marriage
ತಮ್ಮ ಮದುವೆಯಲ್ಲಿ ಪೌರೋಹಿತ್ಯ ಮಾಡಿದ ಮಹಿಳೆಯೊಬ್ಬರ ಫೋಟೋವನ್ನು ದಿಯಾ ಮಿರ್ಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೀಲಾ ಅತ್ತಾ ಎಂಬುವವರು ದಿಯಾ ಮಿರ್ಜಾ ಹಾಗೂ ವೈಭವ್ ರೇಖಿ ಮದುವೆಯನ್ನು ನಡೆಸಿಕೊಟ್ಟಿದ್ದರು.
ಇದನ್ನೂ ಓದಿ:'ತಂದೆಯ ಆಟೋದಲ್ಲಿ ಬಂದ ಮಿಸ್ ಇಂಡಿಯಾ ರನ್ ಅಪ್ -2020 ಮಾನ್ಯ'
ಇನ್ನು ಈ ಮದುವೆಯಲ್ಲಿ ಮದು ಮಗ ಹಾಗೂ ಮದು ಮಗಳಿಗಿಂತ ಎಲ್ಲರ ಗಮನ ಸೆಳೆದದ್ದು ಮದುವೆ ಕಾರ್ಯ ನಡೆಸಿಕೊಟ್ಟ ಮಹಿಳಾ ಪೂಜಾರಿ. ಮದುವೆ, ನಾಮಕರಣದಂಥ ಯಾವುದೇ ಶುಭ ಸಮಾರಂಭವಾಗಲೀ ಅಥವಾ ಇನ್ನಿತರ ಕಾರ್ಯಕ್ರಮಗಳಾಗಲೀ ಅಲ್ಲಿ ಪುರುಷರೇ ಮುಂದೆ ನಿಂತು ಪೌರೋಹಿತ್ಯ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದು ಮದುವೆಗಳನ್ನೂ ನಡೆಸಿಕೊಡುತ್ತಿದ್ದಾರೆ. ದಿಯಾ ಮಿರ್ಜಾ ಮದುವೆಯಲ್ಲಿ ಮಹಿಳೆಯೊಬ್ಬರು ಪೌರೋಹಿತ್ಯ ಮಾಡಿದ್ದಾರೆ ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಆದರೆ ಸ್ವತ: ದಿಯಾ ಮಿರ್ಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಮದುವೆಯನ್ನು ನಡೆಸಿಕೊಡುತ್ತಿರುವ ಶೀಲಾ ಅತ್ತಾ ಫೋಟೋವನ್ನು ಪೋಸ್ಟ್ ಮಾಡಿ" ನಮ್ಮ ಮದುವೆಯನ್ನು ನಡೆಸಿಕೊಟ್ಟಿದ್ದಕ್ಕೆ ಶೀಲಾ ಅತ್ತಾ ಅವರಿಗೆ ಧನ್ಯವಾದಗಳು, ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ಎಲ್ಲವೂ ಸಾಧ್ಯ" ಎಂದು ಕ್ಯಾಪ್ಷನ್ ನೀಡಿದ್ದಾರೆ. ದಿಯಾ ಪೋಸ್ಟ್ಗೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.