ಸಿನಿಮಾಗಾಗಿ ನಟ-ನಟಿಯರು ಕೆಲವೊಮ್ಮೆ ಆಶ್ಚರ್ಯಪಡುವಷ್ಟು ಟ್ರಾನ್ಸ್ಫರ್ಮೇಶನ್ ಆಗುತ್ತಾರೆ. ಕನ್ನಡದಲ್ಲಿ ಧ್ರುವಾ ಸರ್ಜಾ 'ಪೊಗರು' ಚಿತ್ರಕ್ಕಾಗಿ 30 ಕಿಲೋ ತೂಕ ಇಳಿಸಿ ಸ್ಕೂಲ್ ಹುಡುಗನ ಹಾಗೆ ಕಾಣುವಂತೆ ಬದಲಾಗಿದ್ದರು. ಕೆಲವೊಮ್ಮೆ ಮೇಕಪ್ ಮೂಲಕ ಕೂಡಾ ಕಲಾವಿದರನ್ನು ಅವರು ಇವರೇನಾ ಎಂದು ಕಂಡುಹಿಡಿಯಲು ಸಾಧ್ಯವಾಗದಿರುವಷ್ಟು ಬದಲಾಯಿಸುತ್ತಾರೆ. ತಮಿಳಿನ 'ಐ' ಚಿತ್ರದಲ್ಲಿ ಚಿಯಾನ್ ವಿಕ್ರಮ್, ಹಿಂದಿಯ 'ಪಾ'ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ಲುಕ್ ಮೇಕಪ್ನಿಂದ ಸಂಪೂರ್ಣ ಬದಲಾಗಿತ್ತು.
ಇವರು ಅಭಿಷೇಕ್ ಬಚ್ಚನ್ ಹೌದಾ...ಮಾಜಿ ವಿಶ್ವಸುಂದರಿ ಪತಿ ಈ ರೀತಿ ಏಕೆ ಬದಲಾಗಿದ್ದಾರೆ...? - Abhishek Bachchan new look
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ 'ಬಾಬ್ ಬಿಸ್ವಾಸ್' ಎಂಬ ಚಿತ್ರಕ್ಕಾಗಿ ಕೊಂಚ ಬದಲಾಗಿದ್ದಾರೆ. ಮೀಸೆ ತೆಗೆದು, ಹೇರ್ ಸ್ಟೈಲ್ ಬದಲಿಸಿರುವ ಅಭಿಷೇಕ್ ಅವರನ್ನು ನೋಡುತ್ತಿದ್ದರೆ ಕೂಡಲೇ ಯಾರೂ ಕೂಡಾ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ.
ಇದೀಗ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೂಡಾ ಹೊಸ ಚಿತ್ರಕ್ಕಾಗಿ ಲುಕ್ ಬದಲಿಸಿದ್ದಾರೆ. 'ಬಾಬ್ ಬಿಸ್ವಾಸ್' ಎಂಬ ಪಾತ್ರಕ್ಕಾಗಿ ಅಭಿಷೇಕ್ ಬಚ್ಚನ್ ಮೀಸೆ ತೆಗೆಸಿದ್ದಾರೆ. ಅಲ್ಲದೆ, ಹೇರ್ಸ್ಟೈಲ್ ಕೂಡಾ ಬದಲಿಸಿದ್ದಾರೆ, ನೋಡಲು ಸ್ವಲ್ಪ ದಪ್ಪ ಕಾಣುತ್ತಿದ್ದಾರೆ. ಬಿಡುಗಡೆಯಾಗಿರುವ ಚಿತ್ರದ ಸ್ಟಿಲ್ಗಳನ್ನು ನೋಡಿದ ಅಭಿಮಾನಿಗಳು ಇದೇನಪ್ಪಾ ಅಭಿಷೇಕ್ ಹೀಗಾಗಿದ್ದಾರೆ ಎಂದು ಹುಬ್ಬೇರಿಸುತ್ತಿದ್ದಾರೆ. ಕಾಂಟ್ರಾಕ್ಟ್ ಕಿಲ್ಲರ್ ಬಾಬ್ ಬಿಸ್ವಾಸ್ ಆಗಿ ಅಭಿಷೇಕ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ಆರಂಭವಾದ ಶೂಟಿಂಗ್ ಕೊರೊನಾ ಸಮಸ್ಯೆಯಿಂದ ಮಧ್ಯದಲ್ಲೇ ನಿಂತಿತ್ತು. ಆದರೆ ಇದೀಗ ಚಿತ್ರೀಕರಣ ಮತ್ತೆ ಆರಂಭವಾಗಿದೆ.
ಬೌಂಡ್ ಪಿಕ್ಚರ್ಸ್, ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾವನ್ನು ದಿಯಾ ಅನ್ನಪೂರ್ಣ ಘೋಷ್ ನಿರ್ದೇಶಿಸುತ್ತಿದ್ದಾರೆ. ದಿಯಾ ಘೋಷ್, ಖ್ಯಾತ ನಿರ್ದೇಶಕ ಸುಜಯ್ ಘೋಷ್ ಪುತ್ರ. ಇದು ದಿಯಾ ಘೋಷ್ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ. ಸಿನಿಮಾ ಸ್ಟಿಲ್ಗಳು ವೈರಲ್ ಆಗುತ್ತಿದ್ದು, ಅಭಿಷೇಕ್ ಬಚ್ಚನ್ ಜೊತೆ ಚಿತ್ರಾಂಗದಾ ಸಿಂಗ್ ನಟಿಸುತ್ತಿದ್ದಾರೆ. ಖ್ಯಾತ ನಟಿ ವಿದ್ಯಾ ಬಾಲನ್ ವಿದ್ಯಾ ವೆಂಕಟೇಶನ್ ಎಂಬ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.