ಕರ್ನಾಟಕ

karnataka

ETV Bharat / sitara

‘ಯಾರು ಈ ಹಾಟ್ ಬೇಬ್?’.. ನಟಿಯ ಜತೆಗೆ ಮಾತುಗಳಲ್ಲಿ ಮಗ್ನರಾದ ವಿಜಯ್​ ದೇವರಕೊಂಡ!

ಅಪೂರ್ವ ಮೆಹ್ತಾ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಆಮಗಿಸಿದ್ದ ಅನನ್ಯಾ ಟ್ರಾನ್ಸಪರೆಂಟ್ ಉಡುಪಿನಲ್ಲಿ ಮಿಂಚುತ್ತಿದ್ದರು. ನಟ ವಿಜಯ್​ ದೇವರಕೊಂಡ ಕಪ್ಪು ಉಡುಪಿನಲ್ಲಿ ಸೂಪರ್ ಮಾಡೆಲ್‌ನಂತೆ ಕಾಣುತ್ತಿದ್ದರು. ಇದು ಅಪೂರ್ವ ಅವರ ಹುಟ್ಟುಹಬ್ಬದ ಬ್ಯಾಷ್‌ನಲ್ಲಿ ಅವರಿಬ್ಬರನ್ನು ಅತ್ಯುತ್ತಮ ಉಡುಗೆ ತೊಟ್ಟ ಸೆಲೆಬ್ರಿಟಿಯನ್ನಾಗಿ ಮಾಡಿದೆ..

By

Published : Mar 18, 2022, 2:22 PM IST

Updated : Mar 18, 2022, 3:07 PM IST

vijay deverakonda talking to ananya viral video  vijay ananya viral video  vijay ananya at apoorva mehta birthday bash  vijay deverakonda latest news  ananya panday latest news  ನಟಿ ಮಾತುಗಳಲ್ಲಿ ಮಗ್ನರಾದ ವಿಜಯ್​ ದೇವರಕೊಂಡ  ವಿಜಯ ದೇವರಕೊಂಡ ಮತ್ತು ಅನನ್ಯಾ ಪಾಂಡೆ ವಿಡಿಯೋ ವೈರಲ್​ ಅನನ್ಯಾ ಪಾಂಡೆ ಹಾಟ್​ ಲುಕ್​ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಸುದ್ದಿ  ಅಪೂರ್ವ ಮೆಹ್ತಾ ಹುಟ್ಟುಹಬ್ಬ
ನಟಿ ಮಾತುಗಳಿಗೆ ಮಗ್ನರಾದ ವಿಜಯ್​ ದೇವರಕೊಂಡ

ಹೈದರಾಬಾದ್(ತೆಲಂಗಾಣ) :ಧರ್ಮ ಪ್ರೊಡಕ್ಷನ್ಸ್ ಸಿಇಒ ಅಪೂರ್ವ ಮೆಹ್ತಾ ಅವರ ಸ್ಟಾರ್-ಸ್ಟಡ್ ಹುಟ್ಟುಹಬ್ಬದ ವಿಡಿಯೋವೊಂದು ಚಾರ್ಮಿ ಕೌರ್​ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಈ ವಿಡಿಯೋದಲ್ಲಿ ನಟ ವಿಜಯ್ ದೇವರಕೊಂಡ ಹಾಟ್​ ನಟಿಯೊಬ್ಬರ ಜೊತೆ ಸಖತ್​ ಮಾತುಕತೆ ನಡೆಸಿದ್ದಾರೆ.

ಶುಕ್ರವಾರ ಧರ್ಮಾ ಪ್ರೊಡಕ್ಷನ್ಸ್‌ನ ಮುಖ್ಯಸ್ಥ ಕರಣ್ ಜೋಹರ್ ಅವರು ಆಯೋಜಿಸಿದ್ದ ಅಪೂರ್ವ ಮೆಹ್ತಾ ಅವರ ಹುಟ್ಟುಹಬ್ಬದ ಬ್ಯಾಷ್‌ನ ವಿಡಿಯೋವನ್ನು ಚಾರ್ಮಿ ಕೌರ್​ ತನ್ನ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಹಾಟ್​-ಹಾಟ್​ ಆಗಿ ಮಿಂಚುತ್ತಿದ್ದ ನಟಿಯೊಂದಿಗೆ ಸಖತ್​ ಮಾತು ನಡೆಸಿದ್ದರು.

ನಟಿ ಮಾತುಗಳಿಗೆ ಮಗ್ನರಾದ ವಿಜಯ್​ ದೇವರಕೊಂಡ

ಓದಿ:ದಂಪತಿಯಾಗಿ ಮೊದಲ ಹೋಳಿ ಆಚರಿಸಿಕೊಂಡ ಕತ್ರಿನಾ-ವಿಕ್ಕಿ

ಇವರಿಬ್ಬರ ಮಾತುಕತೆಯನ್ನು ನಟಿ, ನಿರ್ಮಾಪಕಿ ಅಡ್ಡಿಪಡಿಸಿದ್ದಾರೆ. ‘ಈ ಹಾಟ್ ಬೇಬ್ ಯಾರು?, ವಿಜಯ್ ಯಾರೊಂದಿಗೆ ಮಾತನಾಡುತ್ತಿದ್ದಾರೆ?, ಈ ಹುಡುಗಿ ಯಾರು ಎಂದು ವಿಜಯ್​ನ ಚಾರ್ಮಿ ಕೇಳಿದ್ದಾರೆ. ಆಗ ಅನನ್ಯ ಪಾಂಡೆ ಚಾರ್ಮಿ ಬಳಿ ತಿರುಗಿದರು. ಈ ವೇಳೆ ಟ್ರಾನ್ಸಪರೆಂಟ್ ಉಡುಪಿನಲ್ಲಿ ಮಿಂಚುತ್ತಿದ್ದ ಅನನ್ಯಾ, ಚಾರ್ಮಿಗೆ ನಗುತ್ತಲೇ ಪೋಸ್ ನೀಡಿದರು. ಈ ವಿಡಿಯೋವನ್ನು ಹಂಚಿಕೊಂಡ ಚಾರ್ಮಿ, ನನ್ನ ಸ್ಟನ್ನಿಂಗ್​ ಲೈಗರ್​ ಜೋಡಿ, ಐ ಲವ್​ ಯು ಎಂದು ಬರೆದುಕೊಂಡಿದ್ದಾರೆ.

ಅಪೂರ್ವ ಮೆಹ್ತಾ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಆಮಗಿಸಿದ್ದ ಅನನ್ಯಾ ಟ್ರಾನ್ಸಪರೆಂಟ್ ಉಡುಪಿನಲ್ಲಿ ಮಿಂಚುತ್ತಿದ್ದರು. ನಟ ವಿಜಯ್​ ದೇವರಕೊಂಡ ಕಪ್ಪು ಉಡುಪಿನಲ್ಲಿ ಸೂಪರ್ ಮಾಡೆಲ್‌ನಂತೆ ಕಾಣುತ್ತಿದ್ದರು. ಇದು ಅಪೂರ್ವ ಅವರ ಹುಟ್ಟುಹಬ್ಬದ ಬ್ಯಾಷ್‌ನಲ್ಲಿ ಅವರಿಬ್ಬರನ್ನು ಅತ್ಯುತ್ತಮ ಉಡುಗೆ ತೊಟ್ಟ ಸೆಲೆಬ್ರಿಟಿಯನ್ನಾಗಿ ಮಾಡಿದೆ. ಪುರಿ ಜಗನ್ನಾಥ್ ಅವರ ಪ್ಯಾನ್-ಇಂಡಿಯಾ ಚಿತ್ರ ಲೈಗರ್​ನಲ್ಲಿ ಅನನ್ಯಾ ಮತ್ತು ವಿಜಯ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ಲೈಗರ್ ಅನ್ನು ಕರಣ್ ಜೋಹರ್, ಚಾರ್ಮಿ ಕೌರ್ ಮತ್ತು ಪೂರಿ ಜಗನ್ನಾಥ್ ನಿರ್ಮಿಸಿದ್ದಾರೆ. ಭಾರತದಲ್ಲಿನ ಅತಿ ದೊಡ್ಡ ಸಾಹಸಮಯ ಪ್ರದರ್ಶನಗಳಲ್ಲಿ ಒಂದೆಂದು ಹೇಳಲಾದ ಲೈಗರ್​ ಚಿತ್ರ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಅನ್ನು ಸಹ ಒಳಗೊಂಡಿದೆ. ಕ್ರೀಡಾ ಆಧರಿತದ ಈ ಚಿತ್ರವು ಆಗಸ್ಟ್ 25, 2022 ರಂದು ಐದು ಭಾಷೆಗಳಲ್ಲಿ (ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ) ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Last Updated : Mar 18, 2022, 3:07 PM IST

ABOUT THE AUTHOR

...view details