ಮುಂಬೈ :ನಟಿ ಕಂಗನಾ ರನೌತ್ ಇತ್ತೀಚೆಗೆ ಸುಶಾಂತ್ ಸಿಂಗ್ ರಜಪೂತ್ ಅವರ ಬಾಲ್ಯದ ಚಿತ್ರವನ್ನು ನಟಿ ಅಲಿಯಾ ಭಟ್ ಚಿತ್ರದ ವಿರುದ್ಧ ಹಾಕಿದ್ದರು. ಅಲ್ಲದೆ ಫೋಟೋದಲ್ಲಿ ನಟನನ್ನು 'ಮೂಕ' ಎಂದು ಲೇಬಲ್ ಕೂಡಾ ಮಾಡಿದ್ದಾಳೆ.
ಕಂಗನಾ ಅವರ ಈ ವಿವಾದಾತ್ಮಕ ಟ್ವೀಟ್ಗೆ ಆಲಿಯಾ ಮರುದಿನ 'ಸ್ವಲ್ಪ ಪ್ರೀತಿಯನ್ನು ಹರಡಿ' ಎಂಬ ಸಾಲುಗಳನ್ನು ನೀಡಿ ತನ್ನ ಬಾಲ್ಯದ ಫೋಟೋ ಒಂದನ್ನು ಪಬ್ಲಿಕ್ ಪೋಸ್ಟ್ ಮಾಡಿದ್ದಳು.
ಇನ್ನು, ಅಲಿಯಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪೋಸ್ಟ್ಗೆ ಅವಳ ಅಭಿಮಾನಿಗಳು, ಅನುಯಾಯಿಗಳಿಂದ ಲಕ್ಷಾಂತರ ಲೈಕ್ ಮತ್ತು ಕಾಮೆಂಟ್ಗಳನ್ನು ಪಡೆದುಕೊಂಡಳು. ಅಷ್ಟೇ ಅಲ್ಲದೆ ಆ ಫೋಟೋಗೆ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಸೇರಿ ಇತರರು ಆಲಿಯಾ ಚಿತ್ರದ ಬಗ್ಗೆ ಸುಂದರವಾದ ಕಾಮೆಂಟ್ಗಳನ್ನು ಸುರಿದಿದ್ದಾರೆ.
ಈ ಕಾರಣಕ್ಕೇ ಕಂಗನಾ ಪ್ರಶ್ನೆ ಎತ್ತಿದ್ದು, ಅದೇ ಖ್ಯಾತನಾಮರು ಸುಶಾಂತ್ ಸಹೋದರಿ ಭಾವನಾತ್ಮಕ ಟಿಪ್ಪಣಿಯೊಂದಿಗೆ ಹಂಚಿಕೊಂಡ ಸುಶಾಂತ್ ಅವರ ಫೋಟೋಗೆ ಏಕೆ ಪ್ರತಿಕ್ರಿಯಿಸಲಿಲ್ಲ. 'ಸುಶಾಂತ್ ಅವರ ಸಹೋದರಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ, ಆದ್ರೆ ಯಾವುದೇ ಮಾಫಿಯಾ ಕೋಡಂಗಿಗಳು ಅದನ್ನು ಇಷ್ಟಪಡಲಿಲ್ಲ ಅಥವಾ ಸುಶಾಂತ್ ಅವರ ಕ್ಯೂಟ್ನೆಸ್ ಬಗ್ಗೆ ಪ್ರತಿಕ್ರಿಯಿಸಲಿಲ್ಲ, ಏಕೆ? ಅವನು ಮಗುವಾಗಿದ್ದಾಗ ಮುದ್ದಾಗಿಲ್ಲವೇ?' ಎಂದು ಬರೆದಿದ್ದಾಳೆ.
ಅಗಲಿದ ಆತ್ಮವನ್ನು 'ಪ್ರತಿಭೆ' ಮತ್ತು 'ನಿಜವಾದ ಒಳ್ಳೆಯ ನಟ' ಎಂದು ಕರೆದು ಟ್ವೀಟ್ ಮಾಡಿದ ಕಂಗನಾ, 'ಯಾರು ಕ್ಯೂಟ್ ಎಂದು ನಿರ್ಧರಿಸೋಣ. ಮೂಕಿ, 10ನೇ ತರಗತಿ ಫೇಲ್ ಆದ ನಟಿಯಲ್ಲದ ಆಲಿಯಾನೋ ಅಥವಾ ಜೀನಿಯಸ್ ಆದ ಭೌತಶಾಸ್ತ್ರ ಒಲಿಂಪಿಯಾಡ್ ವಿಜೇತ ಪ್ರಾಮಾಣಿಕ ಉತ್ತಮ ನಟನಾದ ಸುಶಾಂತ್? ನಾವು ಫಿಲ್ಮ್ ಇಂಡಸ್ಟ್ರಿಯ ಎ-ಲಿಸ್ಟರ್ಸ್ಗಳಿಂದ ಏಷ್ಟು ಲೈಕ್ಸ್ ಪಡಿತೇವೋ ನೋಡೋಣ.' ಎಂದು ಖಾರವಾಗಿ ಟ್ವೀಟ್ ಮಾಡಿದ್ದಾಳೆ.
ಅಲಿಯಾ ಅವರ ಪೋಸ್ಟ್ನಲ್ಲಿ ಬರುವ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ಕಂಗನಾ ರನೌತ್ ತನ್ನ ಟ್ವೀಟ್ನಲ್ಲಿ ಹೀಗೆ ಬರೆದಿದ್ದಾಳೆ, 'ಫಿಲ್ಮಿ ಮಾಧ್ಯಮಗಳು ಮೂಕ ಆಲಿಯಾಳ ಮಕ್ಕಳ ಚಿತ್ರಗಳನ್ನು ಪ್ರಸಾರ ಮಾಡುತ್ತಿವೆ ಮತ್ತು ಎಲ್ಲಾ ಎ-ಲಿಸ್ಟರ್ಗಳು ಅವಳ ಕ್ಯೂಟ್ನೆಸ್ನ ಶ್ಲಾಘಿಸುತ್ತಿದ್ದಾರೆ. ಇದು ತನ್ನ ಕ್ರಿಮಿನಲ್ ತಂದೆಯನ್ನು ಮತ್ತು ಅವಳು ಹೊರಗಿನವರಿಗೆ ಅನುಸಂಧಾನ ಮಾಡಿ ಅವರ ಮೈಂಡ್ ವೈಟ್ವಾಶ್ ಮಾಡುವಂತಹ ಕ್ರಮ' ಎಂದು ಕಟುವಾಗಿ ಟೀಕಿಸಿದ್ದಾಳೆ ಕಂಗನಾ.