ಕರ್ನಾಟಕ

karnataka

ETV Bharat / sitara

'ನಮಗೆ ಹೇಳಲು ನೀವು ಯಾರು? : ಸರ್ಕಾರದ ಕೋವಿಡ್​ ನಿರ್ವಹಣೆ ಬಗ್ಗೆ ಟೀಕಿಸುವವರಿಗೆ ಕಂಗನಾ ಪ್ರಶ್ನೆ - ಕಂಗನಾ ರಣಾವತ್​ ಟ್ವಿಟರ್

ನಟಿ ಕಂಗನಾ ರಣಾವತ್​ ಭಾರತದಲ್ಲಿ ಕೋವಿಡ್​ 2ನೇ ಅಲೆಗೆ ಇತರ ದೇಶಗಳು ಹೇಗೆ ಪ್ರತಿಕ್ರಿಯಿಸುತ್ತಿವೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

kangana
kangana

By

Published : Apr 30, 2021, 7:55 PM IST

ಹೈದರಾಬಾದ್​​:ಬಾಲಿವುಡ್ ನಟಿ ಕಂಗನಾ ರಣಾವತ್​ ಟ್ವಿಟರ್ ಮತ್ತು ಇನ್ಸ್​ಟಾಗ್ರಾಮ್​ನಲ್ಲಿ ವಿಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕಂಗನಾ ಭಾರತದಲ್ಲಿ ಕೋವಿಡ್​ 2ನೇ ಅಲೆಗೆ ಇತರ ದೇಶಗಳು ಹೇಗೆ ಪ್ರತಿಕ್ರಿಯಿಸುತ್ತಿವೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಅವರು ಭಾರತದ ಬಗ್ಗೆ ಅಳಲು ವಿದೇಶಿ ಡ್ಯಾಡಿಗಳ ಬಳಿ ಹೋಗುತ್ತಿರುವವರೇ ನಿಮ್ಮ ಸಮಯ ಮುಗಿದಿದೆ ಎಂದು ಬರೆದಿದ್ದಾರೆ. ವಿಡಿಯೋದಲ್ಲಿ, ಕಂಗನಾ ಶವಸಂಸ್ಕಾರದ ವೇಳೆ ಸುಡುತ್ತಿರುವ ಶವಗಳ ಫೋಟೋಗಳನ್ನು ಅಂತಾರಾಷ್ಟ್ರೀಯ ಪತ್ರಿಕೆಯಲ್ಲಿ ಹೇಗೆ ತೋರಿಸಲಾಗಿದೆ ಎಂಬುದರ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇತರ ರಾಷ್ಟ್ರಗಳ ನಾಯಕರು ತಮ್ಮ ದೇಶಗಳು ಕೋವಿಡ್​ ಅಲೆಯನ್ನು ನಿಭಾಯಿಸುವಾಗ ಏಕೆ ಕರೆಯಲಿಲ್ಲ ಎಂದು ಕೇಳಿದ್ದಾರೆ. ಸರ್ಕಾರದ ಕೋವಿಡ್​ ನಿರ್ವಹಣೆ ಬಗ್ಗೆ ಟೀಕಿಸುವವರಿಗೆ 'ನಮಗೆ ಹೇಳಲು ನೀವು ಯಾರು? ಎಂದು ಪ್ರಶ್ನಿಸಿದ್ದಾರೆ ಕಂಗನಾ.

ಇನ್ನು ಬುಧವಾರ ಹಂಚಿಕೊಂಡ ಮತ್ತೊಂದು ವಿಡಿಯೋ ಸಂದೇಶದಲ್ಲಿ, ಎಲ್ಲರೂ ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಕಂಗನಾ ಒತ್ತಾಯಿಸಿದ್ದರು. ಮತ್ತು ಟ್ವಿಟರ್​ನಲ್ಲಿ ಹರಿಬಿಟ್ಟ ವಿಡಿಯೋ ಸಂದೇಶವೊಂದರಲ್ಲಿ, ನಾವು ಪರಿಹಾರವಾಗಲು ಸಾಧ್ಯವಾಗದಿದ್ದರೆ, ಸಮಸ್ಯೆ ಕೂಡ ಆಗಬಾರದು ಎಂದು ಖಡಕ್​ ಆಗೇ ಸಂದೇಶ ರವಾನಿಸಿದ್ದರು.

ABOUT THE AUTHOR

...view details