ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾಗಳಿಗಿಂತ ಹೆಚ್ಚಾಗಿ ವಾದ-ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ನನಗೆ ಹೃತಿಕ್ ರೋಷನ್ ಮೋಸ ಮಾಡಿದ್ದಾರೆ ಎಂದು ಕೆಲವು ವರ್ಷಗಳ ಹಿಂದೆ ಕಂಗನಾ ರಣಾವತ್ ಆರೋಪಿಸಿದ್ದರು. ನಂತರ ಕೆಲವು ದಿನಗಳ ಕಾಲ ಈ ವಿವಾದ ತಣ್ಣಗಾಗಿತ್ತು. ಆದರೆ ಮತ್ತೆ ಕಂಗನಾ, ಹೃತಿಕ್ ರೋಷನ್ ಅವರನ್ನು ಕೆಣಕಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ರಣಾವತ್, "ಹೃತಿಕ್ ರೋಷನ್ ಮತ್ತೆ ಹಳೆ ವರಸೆಯನ್ನು ಶುರು ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ನಮ್ಮ ನಡುವೆ ಬ್ರೇಕ್ ಅಪ್ ಆಯ್ತು. ಹೃತಿಕ್ ರೋಷನ್ ವೈಯಕ್ತಿಕ ಬದುಕು ಛಿದ್ರವಾಗಿ ವಿಚ್ಛೇದನ ಕೂಡಾ ಪಡೆದಿದ್ದಾರೆ. ಬೇರೆ ಮಹಿಳೆಯೊಂದಿಗೆ ಕೂಡಾ ಆತ ಡೇಟ್ ಮಾಡಲು ಸಿದ್ಧನಿಲ್ಲ. ನನ್ನ ವೈಯಕ್ತಿಕ ಜೀವನದಲ್ಲಿ ಮತ್ತೆ ನಾನು ಭರವಸೆ ಕಂಡುಕೊಳ್ಳುವಾಗ ಮತ್ತೆ ಅದೇ ನಾಟಕವನ್ನು ಮುಂದುವರೆಸಿದ್ದಾನೆ" ಎಂದು ಕಂಗನಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಹೃತಿಕ್ ರೋಷನ್ ಅವರನ್ನು ಉದ್ದೇಶಿಸಿ, "ಸಣ್ಣ ಪುಟ್ಟ ಸಂಬಂಧಗಳ ವಿಚಾರಕ್ಕೆ ತಲೆಕೆಡಿಸಿಕೊಂಡು ಇನ್ನೂ ಎಷ್ಟು ದಿನಗಳು ಹೀಗೆ ಅಳುತ್ತೀಯ...?" ಎಂದು ಪ್ರಶ್ನಿಸಿದ್ದಾರೆ.