ಹೈದರಾಬಾದ್: ಶೆಫಾಲಿ ಷಾ ತನ್ನ ಚಿತ್ರಗಳಲ್ಲಿ ಪಾತ್ರದ ತೂಕವನ್ನು ಲೆಕ್ಕಿಸದೇ ಯಾವಾಗಲೂ ಉತ್ತಮ ನಟಿಯಾಗಿ ಮೆಚ್ಚುಗೆ ಪಡೆದಿದ್ದಾರೆ. ಜ್ಯೂಸ್, ನೆಟ್‌ಫ್ಲಿಕ್ಸ್ ಡ್ರಾಮಾ ಒನ್ಸ್ ಎಗೇನ್ ಮತ್ತು ವೆಬ್ ಸರಣಿ ದೆಹಲಿ ಕ್ರೈಮ್ ಎಂಬ ಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ತಾಯಿಯ ಪಾತ್ರಗಳನ್ನು ಹೊರತುಪಡಿಸಿ ಚಲನಚಿತ್ರ ನಿರ್ಮಾಪಕರು ಅವರಿಗೆ ಬೇರೆ ಅವಕಾಶ ನೀಡಲು ಸಿದ್ಧರಿಲ್ಲದಿದ್ದಾಗ ಸುಮಾರು ಒಂದು ದಶಕದ ಹತಾಸೆಯ ನಂತರವೇ ಅವರ ವೃತ್ತಿಜೀವನದಲ್ಲಿ ರೋಚಕ ಘಟನೆಗಳು ನಡೆದಿದೆ.
ಒಂದು ಕಾಲದಲ್ಲಿ ತಾಯಿಯ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಅವರು ಸಂದರ್ಶನದಲ್ಲಿ ಮಾತನಾಡಿದ್ದು, 2005 ರ ವಕ್ತ್ ಸಿನಿಮಾದಲ್ಲಿ ನನಗಿಂತ 5 ವರ್ಷ ಹಿರಿಯರಾದ ನಟ ಅಕ್ಷಯ್ ಕುಮಾರ್ ಜೊತೆ ನಟಿಸಿದಾಗ ನನ್ನ ವ್ಯಕ್ತಿತ್ವವು ವಿಭಿನ್ನವಾಗಿ ಗೋಚರಿಸಿತು" ಎಂದಿದ್ದಾರೆ.