ಕರ್ನಾಟಕ

karnataka

ETV Bharat / sitara

ಹೆಂಡತಿಯಿಂದ ಕಪಾಳಕ್ಕೆ ಹೊಡೆಸಿಕೊಂಡಿದ್ದರಂತೆ ರಾಮ್‌ ಗೋಪಾಲ್‌ ವರ್ಮಾ.. - ಶ್ರೀದೇವಿ

ರಾತ್ರಿ 11 ಗಂಟೆಗೆ ಶ್ರೀದೇವಿ ಮಾಡಿದ್ದ ಕರೆಯನ್ನು ನನ್ನ ಪತ್ನಿ ರಿಸೀವ್ ಮಾಡಿದ್ದಳು. ನಾನು ಮನೆಗೆ ಮರಳಿದ ವೇಳೆ ಶ್ರೀದೇವಿ ಕಾಲ್ ಬಗ್ಗೆ ನನ್ನ ಗಮನಕ್ಕೆ ತಂದಳು. ಅಲ್ಲಿಂದ ಅವಳಲ್ಲಿ ಅನುಮಾನ ಮೊಳಕೆಯೊಡೆಯಿತು. ಶ್ರೀದೇವಿ ಹಾಗೂ ನನ್ನ ನಡುವೆ ಏನೋ ನಡೆಯುತ್ತಿದೆ ಎಂದು ಅವಳು ಅನುಮಾನ ಪಟ್ಟಿದ್ದಳು.

ವರ್ಮಾ

By

Published : Aug 10, 2019, 1:23 PM IST

ಬಾಲಿವುಡ್​ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತನ್ನ ಪರ್ಸನಲ್​​ ಲೈಫ್​​​ಲ್ಲಿ ನಡೆದ ಘಟನೆಯೊಂದನ್ನು ಹೊರಹಾಕಿದ್ದಾರೆ. ತಮ್ಮ ಹೆಂಡತಿಯಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದನ್ನು ಬಿಚ್ಚಿಟ್ಟಿದ್ದಾರೆ.

ತನ್ನ ಪತ್ನಿ ಕೈಯಲ್ಲಿ ಹೊಡೆಸಿಕೊಂಡಿದ್ದನ್ನು ರಾಮ್ ಗೋಪಾಲ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ಅಂದು ಹೆಂಡತಿ ನನ್ನ ಕಪಾಳಕ್ಕೆ ಹೊಡೆಯಲು ಕಾರಣ ಅವಳಲ್ಲಿದ್ದ ಅನುಮಾನ ಎಂದಿದ್ದಾರೆ. ನಾನು ಮೊದಲಿನಿಂದಲೂ ಸೌಂದರ್ಯ ಕಣಿ ಶ್ರೀದೇವಿ ಅವರ ಅಭಿಮಾನಿಯಾಗಿದ್ದೆ. ಅವರ ಬಗ್ಗೆ ನನ್ನ ಹೆಂಡತಿ ಜತೆನೂ ಸಾಕಷ್ಟು ಸಾರಿ ಮಾತಾಡಿದ್ದೆ, ಇಬ್ಬರೂ ಒಟ್ಟಿಗೆ ಸೇರಿ ಜೋಕ್ ಕೂಡ ಮಾಡಿದ್ದೆವು.

ಶಿವಾ ಸಿನಿಮಾ ನಂತರ ಕ್ಷಣ ಕ್ಷಣಂ ಸಿನಿಮಾ ಅನೌನ್ಸ್ ಮಾಡಿದ್ದೆ. ಈ ಚಿತ್ರದ ಮೂಹರ್ತ ಕಾರ್ಯಕ್ರಮದಲ್ಲಿ ಶ್ರೀದೇವಿ ನನ್ನನ್ನು ಹೊಗಳಿದ್ದರು, ಅಂದು ನನ್ನ ಹೆಂಡತಿ ಕೊಂಚ ಟೆನ್ಷನ್ ಆಗಿದ್ದರು. ಇದಾದ ಕೆಲವು ದಿನಗಳ ನಂತರ ರಾತ್ರಿ 11 ಗಂಟೆಗೆ ಶ್ರೀದೇವಿ ಮಾಡಿದ್ದ ಕರೆಯನ್ನು ನನ್ನ ಪತ್ನಿ ರಿಸೀವ್ ಮಾಡಿದ್ದಳು. ನಾನು ಮನೆಗೆ ಮರಳಿದ ವೇಳೆ ಶ್ರೀದೇವಿ ಕಾಲ್ ಬಗ್ಗೆ ನನ್ನ ಗಮನಕ್ಕೆ ತಂದಳು. ಅಲ್ಲಿಂದ ಅವಳಲ್ಲಿ ಅನುಮಾನ ಮೊಳಕೆಯೊಡೆಯಿತು.

ಶ್ರೀದೇವಿ ಹಾಗೂ ನನ್ನ ನಡುವೆ ಏನೋ ನಡೆಯುತ್ತಿದೆ ಎಂದು ಅವಳು ಅನುಮಾನ ಪಟ್ಟಿದ್ದಳು. ಒಂದು ವೇಳೆ ಅವಳಂದುಕೊಂಡಂತಾಗಿದ್ದರೆ ನನ್ನಂತ ಲಕ್ಕಿ ವ್ಯಕ್ತಿಯೇ ಯಾರಿಲ್ಲ ಎಂದು ಮನಸ್ಸಿನಲ್ಲಿಯೇ ಖುಷಿ ಪಟ್ಟೆ. ಜತೆಗೆ ಇದನ್ನು ಅವಳ ಮುಂದೆ ತೆರೆದಿಟ್ಟು, ಒಂದು ವೇಳೆ ನಾನು ಶ್ರೀದೇವಿಯನ್ನು ಪ್ರೀತಿಸಿದರೆ ನೀನು ಏನು ಮಾಡ್ತೀಯಾ ಅಂತಾ ಪ್ರಶ್ನಿಸಿದೆ. ಇದಕ್ಕೆ ನನ್ನ ಪತ್ನಿಯ ಕೈಗಳು ಉತ್ತರ ಕೊಟ್ಟಿದ್ದವು ಎಂದು ರಾಮ್ ಗೋಪಾಲ್ ವರ್ಮಾ ಹಳೆಯ ಘಟನೆ ಮೆಲುಕು ಹಾಕಿದ್ದಾರೆ.

ABOUT THE AUTHOR

...view details