ಹೈದರಾಬಾದ್ : ಈದ್ ವೇಳೆ ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದಲ್ಲಿ ನಟ ಗೌತಮ್ ಗುಲಾಟಿ ಖಳನಟರಾಗಿ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ಗೌತಮ್ ಸೂಪರ್‌ಸ್ಟಾರ್‌ಗಳೊಂದಿಗೆ ಹಲವಾರು ಫೈಟ್ ಸೀಕ್ವೆನ್ಸ್‌ಗಳನ್ನು ಹೊಂದಿದ್ದು, ಅಂತದೇ ಒಂದು ಆ್ಯಕ್ಷನ್ ಸೀನ್ ಚಿತ್ರೀಕರಣ ಮಾಡುವಾಗ ಗೌತಮ್ ಅಕಸ್ಮಾತ್ ಆಗಿ ಸಲ್ಮಾನ್‌ಗೆ ಹೊಡೆದರಂತೆ.
ಫೈಟ್ ದೃಶ್ಯದಲ್ಲಿ ಅಕಸ್ಮಾತ್ ಆಗಿ ಹೇಗೆ ಸಲ್ಮಾನ್ ಅವರಿಗೆ ಹೊಡೆದೆ ಎಂದುಗೌತಮ್ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ರು. ಸಿನಿಮಾ ಚಿತ್ರೀಕರಣದ ವೇಳೆ ಫೈಟಿಂಗ್ ಸನ್ನಿವೇಷಗಳ ಶೂಟಿಂಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾಗಿ ಹೇಳಿದ್ರು.