ಮುಂಬೈ: ನನ್ನ ಜೀವನದ ಯಾವುದೇ ಕೆಟ್ಟ ಸಮಯದಲ್ಲಿ ಯಾವಾಗಲೂ ತನ್ನ ಜೊತೆ ಇರುವ ವ್ಯಕ್ತಿ ಎಂದರೆ ಅದು ನನ್ನ ತಂದೆ ಎಂದು ಆಲಿಯಾ ಭಟ್ ಆಕೆ ತಂದೆ ಮಹೇಶ್ ಭಟ್ರನ್ನು ಹಾಡಿ ಹೊಗಳಿದ್ದಾಳೆ. 2012ರಲ್ಲಿ ಬಾಲಿವುಡ್ಗೆ ಕಾಲಿಡುವ ಮುನ್ನ ಭಯಗೊಂಡಿದ್ದ ಆಕೆಗೆ ಧೈರ್ಯ ತುಂಬಿದ್ದು, ತಂದೆಯೇ ಎಂದು ಹಿಂದೊಮ್ಮೆ ಬಹಿರಂಗಪಡಿಸಿದ್ದಳು ಆಲಿಯಾ.
ಹಿಂದಿ ಚಲನಚಿತ್ರರಂಗದ ಪ್ರಮುಖ ಕುಟುಂಬದವಳಾಗಿದ್ದರೂ ಆಲಿಯಾ ಆತಂಕ ಮತ್ತು ಸ್ವಯಂ-ಅನುಮಾನಗಳನ್ನು ಹೊಂದಿದ್ದಾಳಂತೆ. ಆಗಿನ್ನೂ 20 ದಾಟಿರದ ಆಕೆ ತನ್ನ ಚೊಚ್ಚಲ ಚಿತ್ರ ಬಿಡುಗಡೆಯ ಮುನ್ನ ಭಾರಿ ಭಯ ಪಟ್ಟಿದ್ದಳಂತೆ,ಈ ವಿಷಯವನ್ನ ಶಾರುಖ್ ಖಾನ್ ಆಯೋಜಿಸಿದ್ದ ಟಿವಿ ಕಾರ್ಯಕ್ರಮವೊಂದರಲ್ಲಿ ತಾನು ಆ ಭಯವನ್ನು ಹೇಗೆ ಜಯಿಸಿದೆ ಎಂಬುದನ್ನು ಸ್ವತಃ ಆಲಿಯಾಳೇ ಬಹಿರಂಗಪಡಿಸಿದ್ದಳು.
ತನ್ನ ಮೊದಲ ಚಿತ್ರದಿಂದ ಸಾಗಿ ಬಂದ ದಿನಗಳನ್ನು ನೆನಪಿಸುತ್ತ, ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಬಗ್ಗೆ ಆತಂಕಗೊಂಡಿದ್ದಳು. ತಲೆಯಲ್ಲಿ ತುಂಬಿರುವ ಭಯವನ್ನು ಹೋಗಲಾಡಿಸಲು ತಂದೆಗೆ ಕರೆಮಾಡಿ ಭೇಟಿ ಆಗುವಂತೆ ಕೇಳಿಕೊಂಡಿದ್ದಳು. ಅದರಂತೆ ಕಚೇರಿಗೆ ತೆರಳಿ ಮಾತನಾಡಿದ್ದಳು, ಅವರು ಆಕೆಗೆ ಧೈರ್ಯ ತುಂಬಿ, ಆಕೆ ತಲೆಯಲ್ಲಿರುವ ಭಯವನ್ನು ತನಗೆ ನೀಡುವಂತೆ ಹೇಳಿದ್ದರು, ಅಷ್ಟೇ, ಅಲ್ಲಿಂದ ಎದ್ದು ನಿಂತ ಆಕೆ ಬಳಿಕ ನಟನೆಯಲ್ಲಿ ಹಿಂತಿರುಗಿ ನೋಡಲೇ ಇಲ್ಲ.
ಈ ನಡುವೆ ಆಲಿಯಾ ಮೊದಲ ಬಾರಿಗೆ ತನ್ನ ತಂದೆಯೊಂದಿಗೆ ಸಡಕ್-2 ನಲ್ಲಿ ಕೆಲಸ ಮಾಡಲಿದ್ದಾರೆ. 1991ರ ಹಿಟ್ ಚಿತ್ರ ಸಡಕ್ನ ಮುಂದುವರಿದ ಭಾಗವಾಗಿರುವ ಈ ಚಿತ್ರವು ಮಹೇಶ್ ಮತ್ತೆ ನಿರ್ದೇಶಕರಾಗಿ ಮರಳಿದ್ದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ ಆಲಿಯಾ ಜೊತೆ ಪೂಜಾ, ಸಂಜಯ್ ಮತ್ತು ಆದಿತ್ಯ ರಾಯ್ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ.