ಬಾಲಿವುಡ್ ನಟಿ ಆಲಿಯಾ ಭಟ್ ಎಸ್.ಎಸ್. ರಾಜಮೌಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಆರ್ಆರ್ಆರ್' ಸಿನಿಮಾದ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ ಮುಂಬೈಗೆ ವಾಪಸ್ ತೆರಳಿದ್ದಾರೆ. ಆರ್ಆರ್ಆರ್ ಚಿತ್ರದಲ್ಲಿ ಆಲಿಯಾ, ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಆಲಿಯಾ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋವೊಂದನ್ನು ಅಭಿಮಾನಿಗಳು ಬಹಳ ಇಷ್ಟಪಟ್ಟಿದ್ದಾರೆ. ಮೇಕಪ್ ಇಲ್ಲದೆ ಕಾಣಿಸಿಕೊಂಡಿರುವ ಈ ಫೋಟೋದಲ್ಲಿ ಆಲಿಯಾ ಭಟ್, ಮೊಗದಲ್ಲಿ ಮಂದಹಾಸ ಬೀರುತ್ತಾ ಏನೋ ಹಗಲು ಕನಸು ಕಾಣುತ್ತಿರುವವರಂತೆ ಆಕಾಶವನ್ನು ನೋಡುತ್ತಿದ್ದಾರೆ. "Took a flight mid convo" ಎಂದು ಆಲಿಯಾ ತಮ್ಮ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಯಾರನ್ನು ನೋಡುತ್ತಿದ್ದೀರಿ ಎಂದು ಕೆಲವರು ಕಮೆಂಟ್ ಮಾಡಿದರೆ ಮತ್ತೆ ಕೆಲವರು ಆಲಿಯಾ ಹಗಲು ಕನಸು ಕಾಣುತ್ತಿರಬಹುದು ಎಂದು ಕಮೆಂಟ್ ಮಾಡಿದ್ದಾರೆ.