ಮುಂಬೈ: ದಿವಂಗತ ರಿಷಿ ಕಪೂರ್ ಮತ್ತು ನೀತು ಕಪೂರ್ ಅವರ ಪುತ್ರಿ ರಿಧಿಮಾ ಕಪೂರ್ ಸಾಹ್ನಿ ಬಾಲಿವುಡ್‌ನಲ್ಲಿ ಎಂದಿಗೂ ಮುಗಿಯದ ಸ್ವಜನಪಕ್ಷಪಾತ ಕುರಿತಾದ ಚರ್ಚೆ ಬಗ್ಗೆ ಮಾತನಾಡಿದ್ದಾರೆ. ಕುಟುಂಬದ ಹೆಸರನ್ನು ಮೀರಿ ಸಿನಿಮೋದ್ಯಮದಲ್ಲಿ ಬದುಕಲು ಸಾಧ್ಯವೆಂಬುದನ್ನು ಕೆಲವರು ಸಾಬೀತುಪಡಿಸಬೇಕು ಎಂದು ಅವರು ಹೇಳಿದ್ದಾರೆ.
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳು ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಅಳಲು ತೋಡಿಕೊಳ್ತಿದ್ದಾರೆ ಎಂದು ವೃತ್ತಿಯಲ್ಲಿ ಆಭರಣ ವಿನ್ಯಾಸಕನಾಗಿರುವ ರಿಧಿಮಾ ಹೇಳಿದ್ದಾರೆ. ಆದರೆ ತಮ್ಮ ಸಹೋದರ ರಣಬೀರ್ ಕಪೂರ್ ಮತ್ತು ಸೋದರ ಸಂಬಂಧಿಗಳಾದ ಕರೀನಾ ಮತ್ತು ಕರಿಷ್ಮಾ ಕಪೂರ್ ಅವರು ಸ್ವಜನಪಕ್ಷಪಾತದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದವರಲ್ಲ ಎಂದು ಸಾಬೀತುಪಡಿಸಿದ್ದಾರೆ. ವೃತ್ತಿಜೀವನದಲ್ಲಿ ಅವರು ಇಂದು ಎಲ್ಲಿದ್ದಾರೆಯೋ ಅಲ್ಲಿರಲು ಅರ್ಹರು ಎಂದಿದ್ದಾರೆ.