ಮೆಚ್ಚಿನ ನಟ-ನಟಿಯರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರೆ ಕೆಲವು ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ಪೋಸ್ಟರ್ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿ ಹೋಗಿದೆ. ಇತ್ತೀಚೆಗಷ್ಟೇ ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾ ಫ್ಯಾನ್ ಮೇಡ್ ಪೋಸ್ಟರೊಂದು ಭಾರೀ ವೈರಲ್ ಆಗಿತ್ತು. ಇದೀಗ ನಟ ಮಾಧವನ್ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು,ಸಿನಿಮಾ ಪೋಸ್ಟರ್ ಕೂಡಾ ವೈರಲ್ ಆಗುತ್ತಿದೆ.
ರತನ್ ಟಾಟಾ ಬಯೋಪಿಕ್ನ ಫ್ಯಾನ್ ಮೇಡ್ ಪೋಸ್ಟರ್ ಬಗ್ಗೆ ಆರ್. ಮಾಧವನ್ ಹೇಳಿದ್ದೇನು...? - R Madhavan new movie
ಆರ್. ಮಾಧವನ್ ರತನ್ ಟಾಟಾ ಬಯೋಪಿಕ್ನಲ್ಲಿ ನಟಿಸುತ್ತಿದ್ದಾರೆ ಎನ್ನಲಾದ ಫ್ಯಾನ್ ಮೇಡ್ ಪೋಸ್ಟರೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇದನ್ನು ನಿರಾಕರಿಸಿರುವ ಮಾಧವನ್ ನಾನು ಅಂತಹ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರ...ಮೌಲ್ವಿ ವಿರುದ್ದ ದೂರು ದಾಖಲಿಸಿದ ವಕೀಲ..!
ಆರ್. ಮಾಧವನ್ ನಟಿಸಿದ್ದ 'ನಿಶ್ಯಬ್ಧಂ' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗಿದ್ದ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಕೂಡಾ ಪಡೆದಿತ್ತು. ಇದೀಗ ಅವರು ರತನ್ ಟಾಟಾ ಬಯೋಪಿಕ್ನಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು ಫ್ಯಾನ್ ಮೇಡ್ ಪೋಸ್ಟರ್ವೊಂದು ಭಾರೀ ವೈರಲ್ ಆಗುತ್ತಿದೆ. ಆದರೆ ಮಾಧವನ್ ಮಾತ್ರ ಇದನ್ನು ನಿರಾಕರಿಸಿದ್ದು ಇದೆಲ್ಲಾ ಸುಳ್ಳುಸುದ್ದಿ ನಾನು ಈ ರೀತಿಯ ಯಾವುದೇ ಪ್ರಾಜೆಕ್ಟ್ನಲ್ಲಿ ನಟಿಸುತ್ತಿಲ್ಲ ಎಂದು ಹೇಳಿದ್ದಾರೆ. ಪೋಸ್ಟರ್ವೊಂದನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಮಾಧವನ್ ಅಭಿಮಾನಿ, "ಮಾಧವನ್ ಇದು ನಿಜಾನಾ..ರತನ್ ಟಾಟಾ ಅವರ ಬಯೋಪಿಕ್ನಲ್ಲಿ ನೀವು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೀರಾ...?ಒಂದು ವೇಳೆ ಹೌದು ಎಂದಾದಲ್ಲಿ ನಿಜಕ್ಕೂ ಈ ಸಿನಿಮಾ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯಾಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಧವನ್, ಇದು ಸುಳ್ಳುಸುದ್ದಿ, ನಾನು ಆ ಚಿತ್ರದಲ್ಲಿ ನಟಿಬೇಕು ಎಂದು ಆಸೆ ಪಟ್ಟ ಅಭಿಮಾನಿಗಳು ಈ ರೀತಿ ಮಾಡಿರಬಹುದು, ಆದರೆ ಅಂತಹ ಯಾವುದೇ ಸಿನಿಮಾ ಬಗ್ಗೆ ಯಾರೂ ನನ್ನ ಬಗ್ಗೆ ಚರ್ಚಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.