ಕರ್ನಾಟಕ

karnataka

ETV Bharat / sitara

ಸೊಸೆ ಸಾರಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಸೋಹಾ ಅಲಿ ಖಾನ್​​​​​​​​ - ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್

ಸೈಫ್ ಅಲಿ ಖಾನ್ ಸಹೋದರಿ ಸೋಹಾ ಅಲಿ ಖಾನ್ ತಮ್ಮ ಸೋದರ ಸೊಸೆ ಸಾರಾ ಅಲಿ ಖಾನ್ ಅವರನ್ನು ಹೊಗಳಿದ್ದಾರೆ. ನಮ್ಮ ಕುಟುಂಬಕ್ಕೆ ಆಕೆ ಮತ್ತಷ್ಟು ಹೆಸರು ತರಲಿದ್ದಾಳೆ ಎಂದು ಸೋಹಾ, ಸೊಸೆ ಮೇಲೆ ಭರವಸೆ ವ್ಯಕ್ತಪಡಿಸಿದ್ದಾರೆ.

soha ali khan compliments sara ali khan
ಸಾರಾ

By

Published : Jun 29, 2020, 2:56 PM IST

ಚಿತ್ರರಂಗವನ್ನು ಕರಿಯರ್​​​ ಆಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಸೊಸೆ ಸಾರಾ ಅಲಿ ಖಾನ್ ಬಗ್ಗೆ ಸೋಹಾ ಅಲಿ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರಾ ಅವರ ಮೊದಲ ಚಿತ್ರ 'ಕೇದಾರ್​ನಾಥ್' ಬಗ್ಗೆ ಕೂಡಾ ಸೋಹಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಾರಾ ಚಿತ್ರರಂಗಕ್ಕೆ ಬರುವ ಮುನ್ನವೇ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾಗಿ ಸೋಹಾ ತಿಳಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸೋದರ ಸೊಸೆ ಸಾರಾ ಅವರನ್ನು ಹೊಗಳಿದ ಸೋಹಾ, ಸಾರಾ ಬಹಳ ಬುದ್ಧಿವಂತೆ, ಅವಳಿಗೆ ಒಳ್ಳೆ ವಿದ್ಯಾಭ್ಯಾಸದ ಹಿನ್ನೆಲೆ ಇದೆ, ಆದ್ದರಿಂದಲೇ ಅವರು ಏನಾದರೂ ತೆಗೆದುಕೊಳ್ಳುವ ಮುನ್ನ ಸಾಕಷ್ಟು ಬಾರಿ ಯೋಚಿಸಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾಳೆ ಎಂದಿದ್ದಾರೆ.

ಸಾರಾ ಬಗ್ಗೆ ನಾನು ಬಹಳ ಹೆಮ್ಮೆ ಪಡುತ್ತೇನೆ. ಒಬ್ಬ ನಟಿಯಾಗಿ ಸಾರಾ ಒಳ್ಳೆಯ ಸ್ಕ್ರಿಪ್ಟ್ ಹಾಗೂ ಸ್ಕೋಪ್ ಇರುವ ಪಾತ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾಳೆ. ಪಾತ್ರಗಳ ಆಯ್ಕೆ ವಿಷಯದಲ್ಲಿ ಆಕೆ ಬಹಳ ಚೂಸಿ. ನಮ್ಮ ಕುಟುಂಬದ ಹೆಸರನ್ನು ಅವರು ಮತ್ತಷ್ಟು ಖ್ಯಾತಿಯ ಎತ್ತರಕ್ಕೆ ಕೊಂಡೊಯ್ಯುತ್ತಾಳೆ ಎಂಬ ನಂಬಿಕೆ ನನಗೆ ಇದೆ. ಆಕೆ ಕೆಲಸದಲ್ಲಿ ಬಹಳ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಇದ್ದಾಳೆ. ಉರ್ದು, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಆಕೆಗೆ ಸಾಕಷ್ಟು ಹಿಡಿತ ಇದೆ. ಎಲ್ಲರೊಂದಿಗೆ ಸ್ನೇಹದಿಂದ ಇರುವ ಗುಣ ಅವಳದ್ದು. ಆದ್ದರಿಂದಲೇ ಆಕೆಯನ್ನು ಎಲ್ಲರೂ ಇಷ್ಟಪಡುತ್ತಾರೆ ಎನ್ನುತ್ತಾರೆ ಸೋಹಾ.

2018 ರಲ್ಲಿ 'ಕೇದಾರ್​ನಾಥ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಾರಾ ಅಲಿಖಾನ್, ಸಿಂಬ, ಲವ್ ಆಜ್​​​​​ಕಲ್ ಚಿತ್ರಗಳಲ್ಲಿ ನಟಿಸಿದ್ದಾರೆ. ವರುಣ್ ಧವನ್ ಜೊತೆ ಅವರು ನಟಿಸಿರುವ 'ಕೂಲಿ ನಂ 1' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 'ಅಂತ್ರಂಗಿ ರೇ' ಚಿತ್ರದಲ್ಲಿ ಸಾರಾ ನಟಿಸಬೇಕಿದ್ದು ಅಕ್ಷಯ್ ಕುಮಾರ್ ಮತ್ತು ಧನುಷ್ ಅವರೊಂದಿಗೆ ಸ್ಕ್ರೀನ್ ಷೇರ್ ಮಾಡಲಿದ್ದಾರೆ.

ABOUT THE AUTHOR

...view details