ಹೈದ್ರಾಬಾದ್: ಬಾಲಿವುಡ್ ಹಾರ್ಟ್ ತ್ರೋಬ್ ಕಾರ್ತಿಕ್ ಆರ್ಯನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನ ಶೇರ್ ಮಾಡುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಫೋಟೋ ಶೇರ್ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ನಟ ಕಾರ್ತಿಕ್ ಆರ್ಯನ್... 20.6.21..! - ನಟ ಕಾರ್ತಿಕ್ ಆರ್ಯನ್ ಹೊಸ ಸಿನಿಮಾ
ನಟ ಕಾರ್ತಿಕ್ ಆರ್ಯನ್ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಟ್ಟೀಟರ್ ಖಾತೆಯಲ್ಲಿ '20.06.21' ಎಂಬ ಶೀರ್ಷಿಕೆ ಇರುವ ಫೋಟೋ ಒಂದನ್ನ ಶೇರ್ ಮಾಡಿರುವ ಕಾರ್ತಿಕ್, "ಆ ರಾಹಾ ಹೈ ಕುಚ್ ಅಲಾಗ್ ಎಸ್ಎ ಟೇಕ್ ಎ ಗೆಸ್'' ಎಂಬ ಅಡಿ ಬರಹವನ್ನು ಬರೆದಿದ್ದಾರೆ. ಈ ಹಿನ್ನೆಲೆ ಕತ್ತಲೆಯಲ್ಲಿ ಅರ್ಧ ಮುಖ ಕಾಣುವಂತಿರುವ ಫೋಟೋ ನೋಡಿ ಸುಳಿವು ಹುಡುಕಲು ಅಭಿಮಾನಿಗಳು ಕಷ್ಟ ಪಡುತ್ತಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ ಖಾತೆಯಲ್ಲಿ '20.06.21' ಎಂಬ ಶೀರ್ಷಿಕೆ ಇರುವ ಫೋಟೋ ಒಂದನ್ನ ಶೇರ್ ಮಾಡಿರುವ ಕಾರ್ತಿಕ್, "ಆ ರಾಹಾ ಹೈ ಕುಚ್ ಅಲಾಗ್ ಎಸ್ಎ ಟೇಕ್ ಎ ಗೆಸ್'' ಎಂಬ ಅಡಿ ಬರಹ ಬರೆದಿದ್ದಾರೆ. ಈ ಹಿನ್ನೆಲೆ ಕತ್ತಲೆಯಲ್ಲಿ ಅರ್ಧ ಮುಖ ಕಾಣುವಂತಿರುವ ಫೋಟೋ ನೋಡಿ ಸುಳಿವು ಹುಡುಕಲು ಅಭಿಮಾನಿಗಳು ಕಷ್ಟ ಪಡುತ್ತಿದ್ದಾರೆ.
ಅಭಿಮಾನಿಗಳಿಗೆ ಗೆಸ್ ಮಾಡಲು ಹೇಳಿದ ತಕ್ಷಣ, ಹಲವಾರು ಜನರು ಮುಂದಿನ ಸಿನಿಮಾ ಫೋಟೋ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲ ಮಂದಿ ಯಾವೂದೋ ಜಾಹೀರಾತು ಚಿತ್ರವಿರಬೇಕು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಿಡಿಸಲಾಗದ ಒಗ್ಗಟ್ಟಿನಂತಿರುವ ಚಿತ್ರದ ರಹಸ್ಯವನ್ನು ಕಾರ್ತಿಕ್ ಹೇಳಬೇಕಿದೆ.