ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್, ರಿಯಾ ಚಕ್ರವರ್ತಿ ಜೊತೆಗಿನ ಸಂಭಾಷಣೆಯಲ್ಲಿ ತಮ್ಮ ಸಹೋದರಿಯನ್ನು ಬೈದಿರುವ ಸಂದೇಶದ ಸ್ಕ್ರೀನ್ಶಾಟ್ಗಳನ್ನು ರಿಯಾ ಹರಿಬಿಟ್ಟಿದ್ದು, ಟಿವಿ ನಟಿ ಕಾಮ್ಯಾ ಪಂಜಾಬಿ, ರಿಯಾ ಚಕ್ರವರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ, ರಿಯಾ ಸುಶಾಂತ್ನೊಂದಿಗಿನ ತನ್ನ ವಾಟ್ಸ್ಆ್ಯಪ್ ಚಾಟ್ಗಳನ್ನು ಹಂಚಿಕೊಂಡಿದ್ದು, ತನ್ನ ಸಹೋದರಿ ಪ್ರಿಯಾಂಕಾ ಬಗ್ಗೆ ಸುಶಾಂತ್ ಸಿಂಗ್ ದುಷ್ಟೆ, ಮ್ಯಾನಿಪುಲೇಟಿವ್ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಮ್ಯ, ಒಡಹುಟ್ಟಿದವರ ಜಗಳ ಸಾಮಾನ್ಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.