ಹೈದರಾಬಾದ್: ಎಲ್ಲ ಆಯ್ಕೆಗಳು ಕೊನೆಗೊಂಡ ಬಳಿಕ ಹಸೀನ್ ದಿಲ್ರುಬಾ ಸಿನಿಮಾಗೆ ನಿರ್ದೇಶಕರು ನನ್ನನ್ನು ಸೂಚಿಸಿದರು ಎಂದು ನಟಿ ತಾಪ್ಸಿ ಪನ್ನು ಹೇಳಿದ್ದಾರೆ. ಹಸೀನ್ ದಿಲ್ರುಬಾ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಿದ್ದು, ಇಡೀ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.
ವಿನಿಲ್ -Taapsee ಸಂದರ್ಶನ: ಹಸೀನ್ ದಿಲ್ರುಬಾ ಸಿನಿಮಾದ ಆಯ್ಕೆ ನೆನಪಿಸಿಕೊಂಡ ನಟಿ - ನಟಿ ತಾಪ್ಸಿ ಪನ್ನು
ಹಸೀನ್ ದಿಲ್ರುಬಾ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಿದ್ದು, ಇಡೀ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ಇನ್ನು ನಟಿ ತಾಪ್ಸಿ ಮತ್ತು ನಿರ್ದೇಶಕ ವಿನಿಲ್ ಮ್ಯಾಥ್ಯೂ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು.
ಇನ್ನು ಸಂದರ್ಶನವೊಂದರಲ್ಲಿ ಪಾತ್ರದ ಆಯ್ಕೆ ಬಗ್ಗೆ ಕೇಳಿದಾಗ ನಟಿ ತಾಪ್ಸಿ ಈ ಸತ್ಯ ಬಹಿರಂಗಪಡಿಸಿದ್ದಾರೆ. ಇನ್ನು ಇದೇ ವೇಳೆ ನಿರ್ದೇಶಕ ವಿನಿಲ್ ಸಹ ಮಾತನಾಡಿದ್ದು "ನಾನು ಈ ಚಿತ್ರಕ್ಕಾಗಿ ಅನೇಕ ನಟಿಯರ ಫೋಟೋಗಳನ್ನು ನೋಡಿದೆ. ತಾಪ್ಸಿ ನನಗೆ ಕೊಲೆಗಾರ್ತಿ(ಖೂನಿ)ಯಂತೆ ಕಾಣುತ್ತಾಳೆ. ಹಾಗಾಗಿ ಆಕೆಯೇ ಈ ಚಿತ್ರಕ್ಕೆ ಸೂಕ್ತ ಎನಿಸಿತು" ಎಂದು ತಮಾಷೆಯಾಗಿ ಹೇಳಿದ್ದಾರೆ.
ಈ ಸಂದರ್ಶನದಲ್ಲಿ ತಾಪ್ಸಿ ಮತ್ತು ವಿನಿಲ್ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಇನ್ನು ವಿನಿಲ್ ಮ್ಯಾಥ್ಯೂ ಅವರ ಹಸೀನ್ ದಿಲ್ರುಬಾ ಎಂಬ ಕ್ರೈಂ ಸಿನಿಮಾದಲ್ಲಿ ತಾಪ್ಸಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜುಲೈ 2 ರಂದು OTTಯಲ್ಲಿ ಬಿಡುಗಡೆಯಾಗಲಿದೆ.