ಮುಂಬೈ (ಮಹಾರಾಷ್ಟ್ರ): 'ಮಿರ್ಜಾಪುರ್' ವೆಬ್ ಸೀರೀಸ್‌ನಲ್ಲಿ ಲಲಿತ್ ಪಾತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟ ಬ್ರಹ್ಮ ಮಿಶ್ರಾ (36) ಇಂದು ಮುಂಬೈನ ವರ್ಸೋವಾದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಿಶ್ರಾ ಅವರು ಏಕಾಂಗಿಯಾಗಿ ವಾಸಿಸುತ್ತಿದ್ದ ಅವರ ಮನೆಯ ಬಾತ್ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಪಾರ್ಟ್‌ಮೆಂಟ್‌ಗೆ ಒಳಗಿನಿಂದ ಬೀಗ ಹಾಕಲಾಗಿದ್ದು, ಹೃದಯಾಘಾತದಿಂದ ನಟ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಇಂದು ಸಿಲ್ಕ್ ಸ್ಮಿತಾ ಜನ್ಮದಿನ: 24 ವರ್ಷಗಳು ಕಳೆದರೂ ತಿಳಿಯದ ಸಾವಿನ ರಹಸ್ಯ
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರಗೊಂಡ ಮಿರ್ಜಾಪುರ್ ವೆಬ್ ಸರಣಿ ಹಿಟ್ ಆಗಿ, ತಮ್ಮ ನಟನೆಯ ಮೂಲಕ ಬ್ರಹ್ಮ ಮಿಶ್ರಾ ಪ್ರೇಕ್ಷಕರ ಮನಗೆದ್ದಿದ್ದರು. ಈ ಬಗ್ಗೆ 'ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ' ಸಂತಾಪ ಸೂಚಿಸಿದ್ದು, "ಬ್ರಹ್ಮ ಮಿಶ್ರಾ, ನಮ್ಮ ಲಲಿತ್. ನಮ್ಮನ್ನು ನಗಿಸಿದ್ದಕ್ಕಾಗಿ, ನಮ್ಮನ್ನು ಅಳಿಸಿದ್ದಕ್ಕಾಗಿ ಧನ್ಯವಾದಗಳು.
ಸ್ನೇಹದ ನಿಷ್ಠೆಯನ್ನು ಮತ್ತು ಪ್ರೀತಿಯನ್ನು ಯಾವಾಗಲೂ ನಮಗೆ ನೆನಪಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಯಾವಾಗಲೂ ನಮ್ಮ ಹೃದಯದಲ್ಲಿರುತ್ತೀರಿ. RIP" ಎಂದು ಟ್ವೀಟ್ ಮಾಡಿದೆ.