ಬಾರಮುಲ್ಲಾ: ಭಾರತೀಯ ಸೇನೆಯ ಡಾಗರ್ ವಿಭಾಗವು ಯುವಕರ ಪ್ರತಿಭೆಯನ್ನು ಉತ್ತೇಜಿಸಲು ‘ಉಮೀದ್ ಕಿ ಸೆಹಾರ್’ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಬಾಲಿವುಡ್ ನಟ, ನಟಿ ಸ್ಟೇಪ್ ಹಾಕಿದ್ದಾರೆ.
ಭಾರತೀಯ ಸೇನೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಬಾಲಿವುಡ್ ನಟ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಗಡಿ ಪ್ರದೇಶದಲ್ಲಿ ಸೇನೆ ‘ಉಮೀದ್ ಕಿ ಸೆಹಾರ್’ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬಿ-ಟೌನ್ ನಟ ವಿಕ್ಕಿ ಕೌಶಲ್ ಮತ್ತು ನಟಿ ಸೋನಾಲ್ ಚೌಹಾನ್ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಉತ್ಸವದಲ್ಲಿ ಭಾಗವಹಿಸುವವರು ಅನೇಕರು ಉತ್ತಮ ಪ್ರದರ್ಶನ ನೀಡಿದರು. ಸಾಂಸ್ಕೃತಿಕ ಪ್ರದರ್ಶನಗಳಿಂದ ಜನರು ಮಂತ್ರ ಮುಗ್ಧರಾದರು. ವಿಕ್ಕಿ ಕೌಶಲ್ ಸಹ ಅಭಿನಯದ ಸಮಯದಲ್ಲಿ ಅವರೊಂದಿಗೆ ಸೇರಿ ಡ್ಯಾನ್ಸ್ ಸಹ ಮಾಡಿದರು.
ಈ ಸಂದರ್ಭದಲ್ಲಿ ನಟ ವಿಕ್ಕಿ 'ಹೌ ಈಸ್ ದಿ ಜೋಶ್' ಎಂದು ಕೂಗಿದರು. ಯುವ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಲು ಭಾರತೀಯ ಸೇನೆಯ ಪ್ರಯತ್ನವನ್ನು ಬಾಲಿವುಡ್ ತಾರೆಯರು ಶ್ಲಾಘಿಸಿದರು.