ಕರ್ನಾಟಕ

karnataka

ETV Bharat / sitara

ಬೈಕ್​​​​​ ಸವಾರಿ ಮಾಡಿದ ಕಾರ್ತಿಕ್ ಆರ್ಯನ್​..ಜಿಮ್ ಬಳಿ ಕ್ಯಾಮರಾಗೆ ಸೆರೆಯಾದ ವಿಕ್ಕಿ ಕೌಶಲ್​ - Bollywood actor Kartik Aaryan

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಡಬ್ಬಿಂಗ್ ಸ್ಟುಡಿಯೋಗೆ ಬೈಕ್​​​ನಲ್ಲಿ ಬಂದು ಸುದ್ದಿಯಾಗಿದ್ದಾರೆ. ನಟ ವಿಕ್ಕಿ ಕೌಶಲ್ ಜಿಮ್​​​ನಿಂದ ಹೊರಹೋಗುವಾಗ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಇವರಿಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Kartik, Vicky
ಬಾಲಿವುಡ್ ನಟರು

By

Published : Mar 5, 2021, 12:42 PM IST

ಯಾವಾಗಲೂ ಕಾರು, ವಿಮಾನದಲ್ಲಿ ಸುತ್ತಾಡುವ ಸೆಲಬ್ರಿಟಿಗಳು ಒಮ್ಮೆಯಾದರೂ ಸ್ವಚ್ಛಂದವಾಗಿ ಹೊರಗೆ ಸುತ್ತಾಡಲು ಬಯಸುತ್ತಾರೆ. ಆದರೆ ಹೊರಗೆ ಹೋದರೆ ಜನರು ಸುತ್ತುವರೆಯಬಹುದೆಂಬ ಭಯಕ್ಕೆ ಹೆಲ್ಮೆಟ್ ಹಾಕಿಕೊಂಡು ಕೆಲವೊಮ್ಮೆ ಬೈಕ್​​ನಲ್ಲಿ ಸುತ್ತಾಡುವುದುಂಟು. ಇಂತಹ ಎಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ.

ಕಾರ್ತಿಕ್ ಆರ್ಯನ್, ವಿಕ್ಕಿ ಕೌಶಲ್

ಇತ್ತೀಚೆಗಷ್ಟೇ ನಟ ಜಗ್ಗೇಶ್ ಮಂಕಿ ಕ್ಯಾಪ್ ಹಾಡಿಕೊಂಡು, ಮಫ್ಲರ್ ಹೊದ್ದುಕೊಂಡು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಬಂದಿದ್ದರು. ರಚಿತಾರಾಮ್ ದುಪ್ಪಟ್ಟ ಸುತ್ತಿಕೊಂಡು ಚಿಕ್ಕಪೇಟೆ ಸುತ್ತಿಬಂದಿದ್ದರು. ಇದೀಗ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಹೆಲ್ಮೆಟ್ ಧರಿಸಿಕೊಂಡು ಬೈಕ್​​ನಲ್ಲಿ ಸುತ್ತಾಡಿದ್ದಾರೆ. ಮುಂಬೈನ ಕೆಲವೊಂದು ರಸ್ತೆಗಳಲ್ಲಿ ಸುತ್ತಾಡಿದ ಕಾರ್ತಿಕ್ ಆರ್ಯನ್, ನಂತರ ಬೈಕ್​​ನಲ್ಲಿ ಡಬ್ಬಿಂಗ್ ಸ್ಟುಡಿಯೋಗೆ ಬೈಕ್​​ನಲ್ಲೇ ಬಂದಿದ್ದಾರೆ. ಕಾರ್ತಿಕ್ ಹೀಗೆ ಬೈಕ್​ನಲ್ಲಿ ಬಂದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಾರ್ತಿಕ್ ಸದ್ಯಕ್ಕೆ 'ಧಮಾಕಾ' ಹಾಗೂ 'ಭೂಲ್ ಭುಲಯ್ಯ 2' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಇದನ್ನೂ ಓದಿ:ಮಜಾಭಾರತದ ಮೂಲಕ ಮನರಂಜನೆ ನೀಡಲು ಸಿದ್ಧರಾದ 'ಕನ್ನಡತಿ' ತಂಡ

ಬಾಲಿವುಡ್ ನಟ ವಿಕ್ಕಿ ಕೌಶಲ್ ಕೂಡಾ ಮುಂಬೈ ಜಿಮ್​​ವೊಂದರ ಹೊರಗೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಕಾರ್ ಹತ್ತುವ ಮುನ್ನ ಮಾಸ್ಕ್ ತೆಗೆದು ಕ್ಯಾಮರಾಗೆ ಪೋಸ್ ನೀಡಿ ಮಾಧ್ಯಮದವರನ್ನು ಮಾತನಾಡಿಸಿ ಅಲ್ಲಿಂದ ಹೊರಟಿದ್ದಾರೆ. ವಿಕ್ಕಿ ಸದ್ಯಕ್ಕೆ 'ಸರ್ದಾರ್ ಉಧಾಮ್ ಸಿಂಗ್​' ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.

ABOUT THE AUTHOR

...view details