ಮುಂಬೈನ ಬಾಂದ್ರಾದಲ್ಲಿ ದಿನ ಬೆಳಗಾದರೆ ಬಾಲಿವುಡ್ ನಟ-ನಟಿಯರು ಸಾರ್ವಜನಿಕರಿಗೆ ದರ್ಶನ ನೀಡುತ್ತಾರೆ. ತಮ್ಮ ಮೆಚ್ಚಿನ ನಟ-ನಟಿಯರನ್ನು ನೋಡಲೆಂದೇ ಹಲವರು ಬಾಂದ್ರಾ, ಜುಹು ಸುತ್ತಮುತ್ತ ಇರುವ ಜಿಮ್, ರೆಸ್ಟೋರೆಂಟ್, ಶಾಪಿಂಗ್ ಮಾಲ್ಗಳಿಗೆ ಭೇಟಿ ನೀಡುತ್ತಾರೆ.
ಬಾಂದ್ರಾ ಬಳಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾದ ಬಾಲಿವುಡ್ ತಾರೆಗಳು - ಗಾಯಕಿ ಧ್ವನಿ ಭಾನುಶಾಲಿ
ಬಾಲಿವುಡ್ ನಟಿಯರಾದ ಕರೀನಾ ಕಪೂರ್, ಮಲೈಕಾ ಅರೋರಾ, ಗಾಯಕಿ ಧ್ವನಿ ಭಾನುಶಾಲಿ ಹಾಗೂ ಇನ್ನಿತರರು ಮುಂಬೈನ ಬಾಂದ್ರಾ ಬಳಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.
ಇದನ್ನೂ ಓದಿ:'ಪಿಂಗಾರ' ತುಳು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ
ನಿನ್ನೆ ಬಾಲಿವುಡ್ ನಟಿಯರಾದ ಕರೀನಾ ಕಪೂರ್, ಮಲೈಕಾ ಅರೋರಾ ಹಾಗೂ ಗಾಯಕಿ ಧ್ವನಿ ಭಾನುಶಾಲಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದ ಕರೀನಾ ಕಪೂರ್, ತಮ್ಮ ನಿವಾಸದ ಬಳಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ನಟ ಕುನಾಲ್ ಕಪೂರ್ ಮುಂಬೈ ಅಂಧೇರಿ ಏರಿಯಾ ಪ್ರದೇಶದಲ್ಲಿರುವ ಟಿ-ಸೀರೀಸ್ ಕಚೇರಿ ಬಳಿ ಕಾಣಿಸಿಕೊಂಡಿದ್ದಾರೆ. ಬಾಂದ್ರಾದ ಯೋಗ ಸ್ಟುಡಿಯೋ ಬಳಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಗಾಯಕಿ ಭಾನುಶಾಲಿ ನಿನ್ನೆ 23ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹುಟ್ಟುಹಬ್ಬದ ಅಂಗವಾಗಿ ಮುಂಬೈನ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಕುಟುಂಬದೊಂದಿಗೆ ಹೋಗಿ ಗಣೇಶನ ಆಶೀರ್ವಾದ ಪಡೆದು ಬಂದಿದ್ದಾರೆ. ಈ ಸಮಯದಲ್ಲಿ ಪಾಪರಾಜಿಗಳಿಗೆ ಕಾಣಿಸಿಕೊಂಡಿದ್ದಾರೆ.