ಕರ್ನಾಟಕ

karnataka

ETV Bharat / sitara

ಸ್ನೇಹಿತರ ಗ್ಯಾಂಗ್​ನೊಂದಿಗೆ ಹೋಟೆಲ್​ಗೆ ಲಗ್ಗೆ ಇಟ್ಟ ಬಾಲಿವುಡ್​ ಬೆಡಗಿ ನಟಿ ಆಲಿಯಾ ಭಟ್ - ಮುಂಬೈನ ಉಪಾಹಾರ ಗೃಹ

ಕೊರಾನಾದಿಂದ ಮುಕ್ತಿ ಪಡೆದ ಬಳಿಕ ಇದೇ ಮೊದಲ ಬಾರಿಗೆ ಮನೆಯ ಅಂಗಳದಿಂದ ಮುಂಬೈ ಅಂಗಳದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್​ ಬೆಡಗಿ ನಟಿ ಆಲಿಯಾ ಭಟ್ ತನ್ನ ಸ್ನೇಹಿತರ ಗ್ಯಾಂಗ್‌ನೊಂದಿಗೆ ಕೆಲ ಕಾಲ ಹರಟೆ ಹೊಡೆದರು. ಬಳಿಕ ಎಂದಿನಂತೆ ಜಿಮ್​ಗೆ ತೆರಳಿದರು.

WATCH: Alia Bhatt spends gala time with her girl gang
WATCH: Alia Bhatt spends gala time with her girl gang

By

Published : Jun 12, 2021, 10:56 PM IST

ಹೈದರಾಬಾದ್:ಕೊರೊನಾದಿಂದ ಹೊರಬಂದ ಬಳಿಕಬಾಲಿವುಡ್ ನಟಿ ಆಲಿಯಾ ಭಟ್ ಚುರಾಗಿದ್ದಾರೆ. ಜಿಮ್​ನಲ್ಲಿ ಪ್ರತಿ ದಿನ ದೇಹ ದಂಡಿಸುವ (ವರ್ಕೌಟ್)​ ಆಲಿಯಾ ಭಟ್ ಇಂದು ಸಹ ಎಂದಿನಂತೆ ಖುಷಿ ಖುಷಿಯಾಗಿ ಜಿಮ್​ ಪ್ರವೇಶ ಮಾಡಿದರು. ಅದಕ್ಕೂ ಮುನ್ನ ಮುಂಬೈನ ಉಪಾಹಾರ ಗೃಹವೊಂದರಲ್ಲಿ ತನ್ನ ಸ್ನೇಹಿತರೊಂದಿಗೆ ಉಪಾಹಾರ ಸೇವಿಸಿ ಕೆಲಕಾಲ ಹರಟೆ ಹೊಡೆದರು.

ಪ್ರತಿದಿನ ಜಿಮ್​ಗೆ ತೆರಳುವ ಮುನ್ನ ಈ ರೀತಿಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ನಟಿ ನಟಿ ಆಲಿಯಾ ಭಟ್ ಹವ್ಯಾಸ. ಹಾಗಾಗಿ ಸಹೋದರಿ ಶಾಹೀನ್ ಭಟ್ ಹಾಗೂ ತನ್ನ ಸ್ನೇಹಿತರಾದ ಅನುಷ್ಕಾ ರಂಜನ್ ಕಪೂರ್, ಆಕಾಶಾ ರಂಜನ್, ಮೇಘನಾ ಗೋಯಲ್ ಮತ್ತು ಉಸಾಮಾ ಸಿದ್ದೀಕ್ ಅವರೊಂದಿಗೆ ಹೋಟೆಲ್​ಗೆ ತೆರಳಿ ಉಪಾಹಾರ ಸೇವಿಸಿ ಕೆಲ ಸಮಯ ಕಳೆದರು. ಬಳಿಕವೇ ಜಿಮ್​ಗೆ ತೆರಳಿದರು.

ನಟಿ ಆಲಿಯಾ ಭಟ್

ಕೋವಿಡ್ ಸೋಂಕು ಹರಡುವುದು​ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದರಿಂದ ಹಲವು ನಟ ಮತ್ತು ನಟಿಯರು ಮುಂಬೈ ಹೊರಗೆ ಹೆಜ್ಜೆ ಹಾಕಲು ಪ್ರಾರಂಭಿಸಿದ್ದಾರೆ. ಪಾಸಿಟಿವ್​ ದೃಢಪಟ್ಟಿದ್ದರಿಂದ ಇಷ್ಟು ದಿನಗಳ ಕಾಲ ನಟಿ ಆಲಿಯಾ ಭಟ್ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕಾಲ ಕಳದಿದ್ದು ಈಗ ಹೊರ ಬಂದಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ಅವರ ನಿರ್ದೇಶದ ಗಂಗುಬಾಯಿ ಕಥಿಯಾವಾಡಿ ಚಿತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದು, ಅದಕ್ಕೆ ತಯಾರಿ ಸಹ ನಡೆಸಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details