ಬಾಲಿವುಡ್ ನಟ ಆಮೀರ್ ಖಾನ್, ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟ. ತಮ್ಮ ಸಿನಿಮಾದ ಪಾತ್ರಗಳಿಗೆ ಅವರು ಯಾವ ರೀತಿಯ ತ್ಯಾಗ ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ 'ದಂಗಲ್' ಚಿತ್ರವೇ ಸಾಕ್ಷಿ. ಸದ್ಯಕ್ಕೆ ಆಮೀರ್ ಖಾನ್ ಲಾಕ್ಡೌನ್ ದಿನಗಳನ್ನು ಕಳೆಯುತ್ತಿದ್ದರೂ ಅವರು ಸುದ್ದಿಯಲ್ಲಿದ್ದಾರೆ.
ಆಟೋ ಹಿಂದೆ ತಮ್ಮ ಚಿತ್ರದ ಪೋಸ್ಟರ್ ಅಂಟಿಸುತ್ತಿರುವ ಆಮೀರ್ ಖಾನ್...ವಿಡಿಯೋ ವೈರಲ್ - aamir khan sticking qayamat se qayamat tak posters on auto
ಆಮೀರ್ ಖಾನ್ ಆಟೋಗಳ ಹಿಂದೆ ತಮ್ಮ ಚಿತ್ರದ ಪೋಸ್ಟರ್ ಅಂಟಿಸುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಸೆಲಬ್ರಿಟಿ ಫೋಟೋಗ್ರಾಫರ್ ಒಬ್ಬರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆಮೀರ್ ಖಾನ್ಗೆ ಈಗ 55 ವರ್ಷ ವಯಸ್ಸು. 1988 ರಲ್ಲಿ ಬ್ಲಾಕ್ ಬಸ್ಟರ್ ಎನಿಸಿಕೊಂಡ 'ಖಯಾಮತ್ ಸೆ ಖಯಾಮತ್ ತಕ್' ಚಿತ್ರದ ಮೂಲಕ ಆಮೀರ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ಜೂಹಿ ಚಾವ್ಲಾ ಆಮೀರ್ಗೆ ಜೋಡಿಯಾಗಿದ್ದರು. 'ಖಯಾಮತ್ ಸೆ ಖಯಾಮತ್ ತಕ್' ಚಿತ್ರ ಬಿಡುಗಡೆಗೂ ಮುನ್ನ ಆಮೀರ್ ಖಾನ್ ಚಿತ್ರದ ಪ್ರಮೋಷನ್ಗಾಗಿ ಭಾರೀ ಕಷ್ಟಪಟ್ಟಿದ್ದರು. ತಮ್ಮ ಚಿತ್ರದ ಪೋಸ್ಟರ್ಗಳನ್ನು ಆಟೋಗಳ ಮೇಲೆ ಅಂಟಿಸುವ ಮೂಲಕ ಅಭಿಮಾನಿಗಳಿಗೆ ತಮ್ಮ ಚಿತ್ರವನ್ನು ನೋಡುವಂತೆ ಮನವಿ ಮಾಡಿದ್ದರು ಆಮೀರ್. ಆಮೀರ್ ಖಾನ್ ಆಟೋಗಳ ಹಿಂದೆ ತಮ್ಮ ಚಿತ್ರದ ಪೋಸ್ಟರ್ ಅಂಟಿಸುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಸೆಲಬ್ರಿಟಿ ಫೋಟೋಗ್ರಾಫರ್ ಒಬ್ಬರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆಮೀರ್ ಖಾನ್ ಸದ್ಯಕ್ಕೆ 'ಲಾಲ್ ಸಿಂಗ್ ಛಡ್ಡಾ' ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಕರೀನಾ ಕಪೂರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದ್ವೈತ್ ಚಂದನ್ ಈ ಚಿತ್ರದ ನಿರ್ದೇಶಕರು. ಆಮೀರ್ ಖಾನ್ ಪ್ರೊಡಕ್ಷನ್ ಬ್ಯಾನರ್ ಹಾಗೂ ವಯಾಕಾಮ್18 ಮೋಷನ್ ಪಿಚ್ಚರ್ಸ್ ಜೊತೆಗೂಡಿ ಈ ಸಿನಿಮಾವನ್ನು ತಯಾರಿಸುತ್ತಿದ್ದಾರೆ. 1994 ರಲ್ಲಿ ಬಿಡುಗಡೆಯಾಗಿ ಹಿಟ್ ಆಗಿದ್ದ 'ಫಾರೆಸ್ಟ್ ಗಂಪ್' ಹಾಲಿವುಡ್ ಚಿತ್ರದ ಸ್ಫೂರ್ತಿಯಿಂದ ಈ ಸಿನಿಮಾವನ್ನು ಮಾಡಲಾಗುತ್ತಿದೆ.