ETV Bharat Karnataka

ಕರ್ನಾಟಕ

karnataka

ETV Bharat / sitara

ರೀ ರಿಲೀಸ್ ಆಗುತ್ತಿರುವ ವಿವೇಕ್ ಒಬೆರಾಯ್ ನಟನೆಯ 'ಪಿಎಂ ನರೇಂದ್ರ ಮೋದಿ' ಸಿನಿಮಾ - ನರೇಂದ್ರ ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್

ಒಮಂಗ್ ಕುಮಾರ್ ನಿರ್ದೇಶನದಲ್ಲಿ ವಿವೇಕ್ ಒಬೆರಾಯ್ ನಟಿಸಿರುವ 'ಪಿಎಂ ನರೇಂದ್ರ ಮೋದಿ' ಸಿನಿಮಾ ಅಕ್ಟೋಬರ್ 15 ರಂದು ಮರು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Modi biopic
ಪಿಎಂ ನರೇಂದ್ರ ಮೋದಿ
author img

By

Published : Oct 10, 2020, 2:25 PM IST

Updated : Oct 10, 2020, 2:42 PM IST

ಮುಂಬೈ: ಬಾಲಿವುಡ್​ ನಟ ವಿವೇಕ್ ಒಬೆರಾಯ್ ನಟಿಸುತ್ತಿರುವ ನರೇಂದ್ರ ಮೋದಿ ಬಯೋಪಿಕ್ 'ಪಿಎಂ ನರೇಂದ್ರ ಮೋದಿ' ಅಕ್ಟೋಬರ್ 15 ರಂದು ಮರು ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ತೆರೆಯುತ್ತಿದ್ದು ಕೊರೊನಾ ಲಾಕ್​ ಡೌನ್​​​​ ನಂತರ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಇದು.

ಸಿನಿಮಾ ವಿಮರ್ಶಕ ತರಣ್ ಆದರ್ಶ್ ಈ ವಿಚಾರವನ್ನು ತಮ್ಮ ಟ್ವಿಟ್ಟರ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿ ಗೆಟಪ್​​​ನಲ್ಲಿ ಇರುವ ವಿವೇಕ್ ಒಬೆರಾಯ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೊದಲ್ಲಿ ವಿವೇಕ್ ಒಬೆರಾಯ್, ಆರತಿ ತಟ್ಟೆಯನ್ನು ಹಿಡಿದಿದ್ದಾರೆ. ಚಿತ್ರದಲ್ಲಿ ಬೊಮನ್​​​​​​​​​​​ ಇರಾನಿ, ಮನೋಜ್ ಜೋಷಿ, ಪ್ರಶಾಂತ್ ನಾರಾಯಣ್, ಬರ್ಖಾ ದತ್, ರಾಜೇಂದ್ರ ಗುಪ್ತಾ ಹಾಗೂ ಝರೀನಾ ವಹಾಬ್​ ನಟಿಸಿದ್ದಾರೆ.

ಕಳೆದ ವರ್ಷ ಮೇ 24 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಆ ಸಮಯದಲ್ಲಿ ಲೋಕಸಭೆ ಚುನಾವಣೆ ಇದ್ದಿದ್ದರಿಂದ ಈ ಸಿನಿಮಾಗೆ ಅಷ್ಟೇನೋ ಪ್ರತಿಕ್ರಿಯೆ ದೊರೆಯಲಿಲ್ಲ. ಮತ್ತೆ ಬಿಡುಗಡೆ ಮಾಡಬೇಕು ಎನ್ನುವಷ್ಟರಲ್ಲಿ ಕೊರೊನಾ ಸಮಸ್ಯೆ ಆರಂಭವಾಯ್ತು. ಆದ್ದರಿಂದ ಈ ಚಿತ್ರವನ್ನು ಈಗ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.

ಒಮಂಗ್ ಕುಮಾರ್ ನಿರ್ದೇಶನದ ಚಿತ್ರವನ್ನು ಸಂದೀಪ್ ಸಿಂಗ್, ಆನಂದ್ ಪಂಡಿತ್, ಸುರೇಶ್ ಒಬೆರಾಯ್ ಮೂವರು ಸೇರಿ ನಿರ್ಮಿಸುತ್ತಿದ್ದಾರೆ. ಪಿಎಂ ಮೋದಿ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಜರ್ನಿ ಬಗ್ಗೆ ತೋರಿಸಲಾಗಿದೆ.

Last Updated : Oct 10, 2020, 2:42 PM IST

ABOUT THE AUTHOR

...view details