ಮೊನ್ನೆ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿರುವುದರ ಬಗ್ಗೆ ನಟ ವಿವೇಕ್ ಒಬೇರಾಯ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಆದ್ರೆ ಈ ವಿಡಿಯೋ ಕ್ರೀಡಾಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದ್ದು, ನಟನ ವಿರುದ್ಧ ಟೀಕೆಗಳ ಸುರಿಮಳೆ ಗೈದಿದ್ದಾರೆ.
ಭಾರತೀಯನೊಬ್ಬ ತನ್ನ ಪಾಡಿಗೆ ತಾನು ದಾರಿಯಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಯುವತಿಯೊಬ್ಬಳು ಆತನನ್ನು ತಬ್ಬಿಕೊಳ್ಳಲು ಮುಂದಾಗುತ್ತಾಳೆ. ಅಪ್ಪಿಕೊಳ್ಳಬೇಕು ಅನ್ನುವಷ್ಟರಲ್ಲಿ ಯುವತಿ ಬೇರೆ ವ್ಯಕ್ತಿಯನ್ನು ತಬ್ಬಿಕೊಳ್ಳುತ್ತಾಳೆ. "ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತೀಯ ಅಭಿಮಾನಿಗಳಿಗೆ ಹೀಗಾಯಿತು! ಎಂದು ನಟ ಬರೆದುಕೊಂಡಿದ್ದಾರೆ.
ಮೊನ್ನೆ ನಡೆದ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿತು. ಇದೇ ಹತಾಶೆಯಲ್ಲಿ ಒಬೇರಾಯ್ ಆ ವಿಡಿಯೋವನ್ನು ಪೋಸ್ಟ್ ಮಾಡಿ ಪೇಚಿಗೆ ಸಿಲುಕಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಟ್ವೀಟ್ ಓಡಾಡುತ್ತಿದ್ದಂತೆ ನೆಟಿಜನ್ಗಳು ನಟನ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು ಕೆಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.
ಮಿಸ್ಟರ್ ಒಬೆರಾಯ್, ನೀವು ಪ್ರಬುದ್ಧರಾಗಿರಿ, ಇಲ್ಲದಿದ್ದರೆ ಜನರು ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ ಎಂದು ಕೆಲವು ನೆಟಿಜನ್ಗಳು ಕಾಲೆಳೆದರೆ, ಇನ್ನು ಕೆಲವರು ನಿಮ್ಮ ವೃತ್ತಿ ಜೀವನದಲ್ಲಿಯೂ ಹೀಗೆ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಟೀಂ ಇಂಡಿಯಾಕ್ಕೆ ಗೌರವವನ್ನು ತೋರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.