ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಮಾಡುವ ವಿವಿಧ ಕೆಲಸಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಇವರಿಬ್ಬರ ವಿಡಿಯೋವೊಂದು ವೈರಲ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
ಹಳೆಯ ವಿಡಿಯೋವೊಂದನ್ನು ಶೇರ್ ಮಾಡಿರುವ ವಿರಾಟ್, ತನ್ನ ಕುಟುಂಬ, ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಎಲ್ಲರೂ ಅನುಷ್ಕಾರನ್ನು ಹೊಗಳುವ ರೀತಿಯಲ್ಲಿ ‘ಮೇರೆ ಮೆಹಬೂಬ್ ಕಯಾಮತ್ ಹೋಗಿ’ ಎಂಬಂತೆ ಹಾಡನ್ನು ಹಾಡುತ್ತಿದ್ದಾರೆ. ಇನ್ನು, ಕ್ಯಾಮೆರಾವನ್ನು ಕೊಹ್ಲಿ ಅನುಷ್ಕಾ ಕಡೆಗೆ ತಿರುಗಿಸಿದ್ದು, ಈ ಮೂಲಕ ಹಾಡನ್ನು ಅನುಷ್ಕಾಗೆ ಅರ್ಪಿಸಿದಂತೆ ಭಾಸವಾಗುತ್ತಿದೆ.