ಮುಂಬೈ: ಜಗತ್ತು ಹೊಸ ವರ್ಷಕ್ಕೆ ಕಾಲಿಟ್ಟಿದ್ದು, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ತಮ್ಮ ಹೊಸ ವರ್ಷಾಚರಣೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸ್ನೇಹಿತರೊಂದಿಗೆ ಹೊಸ ವರ್ಷಾಚರಣೆ ಮಾಡಿದ ವಿರುಷ್ಕಾ ದಂಪತಿ - ಹೊಸ ವರ್ಷಾಚರಣೆಯ ಕುರಿತು ವಿರಾಟ್ ಕೊಹ್ಲಿ ಟ್ವೀಟ್
ತಂದೆಯಾಗುವ ಖುಷಿಯಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾರೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಸ್ನೇಹಿತರೊಂದಿಗೆ ಹೊಸ ವರ್ಷಾಚರಣೆ ಮಾಡಿದ ವಿರುಷ್ಕಾ ದಂಪತಿ
ತಂದೆಯಾಗುವ ಸಂಭ್ರಮದಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾರೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡ ಸಂಭ್ರದ ಕ್ಷಣದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ವಿರುಷ್ಕಾ ದಂಪತಿಯೊಂದಿಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಸಂಗಾತಿ ನತಾಶಾ ಸ್ಟಾಂಕೋವಿಕ್ರನ್ನು ಕಾಣಬಹುದಾಗಿದೆ.
ಮೊದಲ ಫೋಟೋದಲ್ಲಿ ವಿರುಷ್ಕಾ ದಂಪತಿ ಸ್ನೇಹಿತರೊಂದಿಗೆ ಪೋಸ್ ಕೊಟ್ಟಿದ್ದು, ಎರಡನೆಯದರಲ್ಲಿ, ಕೊಹ್ಲಿ ಅನುಷ್ಕಾ ಜೊತೆ ನಿಂತಿದ್ದನ್ನು ಕಾಣಬಹುದು.