ಕರ್ನಾಟಕ

karnataka

ETV Bharat / sitara

ಅಭಿಮಾನಿಗಳನ್ನು ಚಿಂತೆಗೆ ತಳ್ಳಿದ ಸಂಜಯ್ ದತ್ ಅವರ ಆ ಒಂದು ಫೋಟೋ!

ಅಭಿಮಾನಿಯೊಬ್ಬರ ಜೊತೆ ಸಂಜಯ್​ ದತ್​ ಪೋಸ್​ ಕೊಟ್ಟ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಈ ಫೋಟೋದಲ್ಲಿ ದತ್​ ಈ ಹಿಂದಿಗಿಂತ ಸಣ್ಣಗೆ ಕಾಣಿಸುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ದತ್​​ ಆರೋಗ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

Sanjay Dutt
ಸಂಜಯ್ ದತ್

By

Published : Oct 4, 2020, 5:48 PM IST

ಮುಂಬೈ:ನಟ ಸಂಜಯ್ ದತ್ ಅವರ ಹೊಸ ಫೋಟೋವೊಂದು ವೈರಲ್ ಆಗಿದ್ದು, ಈ ಫೋಟೋ ನೋಟುತ್ತಲೇ ಸಂಜಯ್​ ದತ್​ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಚಿತ್ರದಲ್ಲಿ ಸಂಜಯ್​ ತೆಳ್ಳಗೆ ಕಾಣುತ್ತಿದ್ದು, ಇದು ಸಂಜಯ್​ ಆರೋಗ್ಯದ ಬಗ್ಗೆ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.

ಸಣ್ಣಗೆ ಕಾಣಿಸುತ್ತಿರುವ ಮುನ್ನ ಭಾಯ್

ಅಭಿಮಾನಿಯೊಬ್ಬರ ಜೊತೆ ದತ್​ ಪೋಸ್​ ಕೊಟ್ಟ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಈ ಫೋಟೋದಲ್ಲಿ ದತ್​ ಈ ಹಿಂದಿಗಿಂತ ತೆಳ್ಳಗೆ ಕಾಣಿಸುತ್ತಿದ್ದಾರೆ. ಈ ಫೋಟೋವನ್ನು ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬ, "ಮುನ್ನ ಭಾಯ್ ಎಂಬಿಬಿಎಸ್ ತುಂಬಾ ಸಣ್ಣಗಾಗಿರುವಂತೆ ಕಾಣಿಸುತ್ತಿದೆ. ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆಂಬ ಭರವಸೆ ಇದೆ" ಎಂದು ಕಮೆಂಟ್​ ಮಾಡಿದ್ದಾನೆ. "ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆಂದು ಭಾವಿಸುತ್ತೇನೆ" ಎಂದು ಮತ್ತೊಬ್ಬ ಬರೆದಿದ್ದಾನೆ.

ಅಭಿಮಾನಿಗಳನ್ನು ಚಿಂತೆಗೀಡು ಮಾಡಿಸ ಸಂಜಯ್​ ಫೋಟೋ

ಪ್ರಸ್ತುತ ಸಂಜಯ್ ಅವರ ಆರೋಗ್ಯ ಅಷ್ಟೊಂದು ಉತ್ತಮವಾಗಿಲ್ಲ. ಉಸಿರಾಟದ ತೊಂದರೆ ಮತ್ತು ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಂಜಯ್​, ವೈದ್ಯಕೀಯ ಚಿಕಿತ್ಸೆಯಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಕಳೆದ ಆಗಸ್ಟ್ 11 ರಂದು ತಿಳಿಸಿದ್ದರು.

ABOUT THE AUTHOR

...view details