ಕರ್ನಾಟಕ

karnataka

ETV Bharat / sitara

ಅಳಬೇಡ, ನಾನಿದ್ದೇನೆ.. ಸಂಬಂಧಿಕರಿಗೆ ಸಮಾಧಾನ ಮಾಡಿದ ಐಶ್ವರ್ಯ ರೈ ಪುತ್ರಿ - ಐಶ್ವರ್ಯ ರೈ ಮಗಳು ಆರಾಧ್ಯ

ಮದುವೆ ಸಮಾರಂಭವೊಂದರಲ್ಲಿ ವಧುವಿನ ತಾಯಿಗೆ ಸಾಂತ್ವನ ಹೇಳುವ ಮೂಲಕ ಐಶ್ವರ್ಯ ರೈ ಬಚ್ಚನ್​ ಮತ್ತು ಅಭಿಷೇಕ್​ ಬಚ್ಚನ್​ ಪುತ್ರಿ ಆರಾಧ್ಯ ಬಚ್ಚನ್ ಸುದ್ದಿಯಾಗಿದ್ದಾರೆ.

Aishwarya
Aishwarya

By

Published : Aug 16, 2021, 4:48 PM IST

Updated : Aug 16, 2021, 5:12 PM IST

ಹೈದರಾಬಾದ್: ಸೆಲೆಬ್ರಿಟಿಗಳ ಮಕ್ಕಳು ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಬಾಲಿವುಡ್ ತಾರೆಯರಾದ ಐಶ್ವರ್ಯ ರೈ ಬಚ್ಚನ್​ ಮತ್ತು ಅಭಿಷೇಕ್​ ಬಚ್ಚನ್​ ಪುತ್ರಿ ಆರಾಧ್ಯ ಬಚ್ಚನ್​​ ತಮ್ಮ ಸಂಬಂಧಿಯೊಬ್ಬರಿಗೆ ಸಮಾಧಾನ ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಕಳೆದ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಐಶ್ವರ್ಯ ಸೋದರ ಸಂಬಂಧಿ ಶ್ಲೋಕಾ ಶೆಟ್ಟಿ ವಿವಾಹ ನಡೆಯಿತು. ಈ ವೇಳೆ ತೆಗೆದ ಕೆಲ ಫೋಟೋಗಳನ್ನು ‘ಫೋಟೋ ಸ್ಟುಡಿಯೋ ಮಾಂಕ್ಸ್ ಇನ್ ಹ್ಯಾಪಿನೆಸ್’ ಜಾಲತಾಣದಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಐಶ್ವರ್ಯ, ಆಕೆಯ ತಾಯಿ ವೃಂದಾ ರೈ ಮತ್ತು ಮಗಳು ಆರಾಧ್ಯಾ ಇದ್ದಾರೆ.

ಶ್ಲೋಕಾ ಶೆಟ್ಟಿ ಮದುವೆ ಸಂಭ್ರಮದ ವೇಳೆ ವಧುವಿನ ತಾಯಿ ಕಣ್ಣೀರು ಹಾಕುತ್ತಿದ್ದಾಗ, ಆರಾಧ್ಯಳು ಅಳಬೇಡ. ನಾನಿದ್ದೇನೆ ಎಂದು ಸಮಾಧಾನ ಮಾಡಿದ್ದಾರೆ. ಅಲ್ಲದೇ ವಧು ಶ್ಲೋಕಾ ಶೆಟ್ಟಿ ಆರಾಧ್ಯಳಿಗೆ ಮುತ್ತುಕೊಟ್ಟಿರುವ ಫೋಟೋವೊಂದನ್ನು ‘ಫೋಟೋ ಸ್ಟುಡಿಯೋ ಮಾಂಕ್ಸ್ ಇನ್ ಹ್ಯಾಪಿನೆಸ್’ ಹಂಚಿಕೊಂಡಿದೆ. ಸದ್ಯ ಈ ಫೋಟೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

ಇದನ್ನೂ ಓದಿ: ಆನ್​ಲೈನ್ ಕಲಿಕೆಗೆ ಸ್ಪೆಷಲ್ ಆ್ಯಪ್ ತಯಾರಿಸಿದ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ

ಐಶ್ವರ್ಯ ರೈ ಮಣಿರತ್ನಂ ನಿರ್ದೇಶನದ ಚಿತ್ರ ಪೊನ್ನಿಯನ್ ಸೆಲ್ವನ್​ನಲ್ಲಿ ನಟಿಸುತ್ತಿದ್ದಾರೆ.

Last Updated : Aug 16, 2021, 5:12 PM IST

ABOUT THE AUTHOR

...view details