ಇತ್ತೀಚೆಗೆ ಬಯೋಪಿಕ್ ಸಿನಿಮಾಗಳು ತೆರೆಗೆ ಬರುತ್ತಿವೆ. ಈಗಾಗಲೇ ತೆರೆಕಂಡಿರುವ ಕೆಲವು ಬಯೋಪಿಕ್ಗಳು ಸಕ್ಸಸ್ ಆಗಿರುವುದು ಹಾಗೂ ಬಾಕ್ಸಾಫೀಸಿನಲ್ಲಿ ಕಮಾಲ್ ಮಾಡಿರುವುದು ಇದಕ್ಕೆ ಕಾರಣವಿರಬಹುದು. ಈಗ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಲೈಫ್ ಸ್ಟೋರಿ ತೆರೆ ಮೇಲೆ ಅನಾವರಣಗೊಳ್ಳಲಿದೆಯಂತೆ.
ತೆರೆ ಮೇಲೆ ಮತ್ತೊಬ್ಬ ಕ್ರಿಕೆಟಿಗನ ಬಯೋಪಿಕ್...ಜೆರ್ಸಿ ತೊಡಲಿದ್ದಾರೆ ವಿಜಯ್ ಸೇತುಪತಿ - undefined
ಎಂ.ಎಸ್.ಧೋನಿ, ಸಂಜು, ಮೇರಿ ಕೋಮ್, ಅಜರ್, ದಂಗಲ್ ಸೇರಿದಂತೆ ಸಾಕಷ್ಟು ರಿಯಲ್ ಸ್ಟೋರಿಗಳು ಸಿನಿಮಾ ಆಗಿವೆ. ಈಗ ಮತ್ತೊಂದು ಬಯೋಪಿಕ್ ಬಾಲಿವುಡ್ನಲ್ಲಿ ಸದ್ದು ಮಾಡಲಿದೆ.
![ತೆರೆ ಮೇಲೆ ಮತ್ತೊಬ್ಬ ಕ್ರಿಕೆಟಿಗನ ಬಯೋಪಿಕ್...ಜೆರ್ಸಿ ತೊಡಲಿದ್ದಾರೆ ವಿಜಯ್ ಸೇತುಪತಿ](https://etvbharatimages.akamaized.net/etvbharat/prod-images/768-512-3911453--thumbnail-3x2-s.jpg)
ಕಾಲಿವುಡ್ ನಟ ವಿಜಯ್ ಸೇತುಪತಿ ಸ್ಪೀನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಪಾತ್ರ ನಿಭಾಯಿಸಲಿದ್ದಾರಂತೆ. ಮುತ್ತಯ್ಯ, ಅಂತಾರಾಷ್ಟ್ರೀಯ ಟೆಸ್ಟ್ನಲ್ಲಿ ಪಡೆದ ವಿಕೆಟ್ಗಳ (800) ಸಂಖ್ಯೆಯನ್ನೇ ಈ ಚಿತ್ರಕ್ಕೆ ಶೀರ್ಷಿಕೆಯಾಗಲಿದೆ ಎನ್ನುವ ಟಾಕ್ ಶುರುವಾಗಿದೆ. ಈ ವರ್ಷದ ಡಿಸೆಂಬರ್ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ದೊಡ್ಡ ಬಜೆಟ್ನ ಈ ಸಿನಿಮಾ ಭಾರತ, ಶ್ರೀಲಂಕಾ,ಇಂಗ್ಲೆಂಡ್ ಮತ್ತು ವಿಶ್ವದ ಇತರ ಭಾಗಗಳಲ್ಲಿ ಚಿತ್ರೀಕರಣಗೊಳ್ಳಲಿದೆಯಂತೆ. ಆದರೆ, ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ವಿಜಯ್ ಸೇತುಪತಿ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು,ಆ ಎಲ್ಲ ಪ್ರೊಜೆಕ್ಟ್ಗಳನ್ನು ಮುಗಿಸಿದ ಬಳಿಕ ಈ ಬಯೋಪಿಕ್ನತ್ತ ಗಮನ ಹರಿಸಲಿದ್ದಾರಂತೆ.